ಜಗತ್ತಿನ ಅತಿ ಶಕ್ತಿಶಾಲಿ ‘ಪಾಸ್ ಪೋರ್ಟ್ 2021ʼ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ..?

1 min read

ಜಗತ್ತಿನ ಅತಿ ಶಕ್ತಿಶಾಲಿ ‘ಪಾಸ್ ಪೋರ್ಟ್ 2021ʼ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ..?

2021ರ ಪರಿಷ್ಕೃತ ಹೆನ್ಲಿ ಮತ್ತು ಪಾಲುದಾರರ ಪಾಸ್ ಪೋರ್ಟ್ ಸೂಚ್ಯಂಕವು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಗಳ ಹೊಸ ಶ್ರೇಯಾಂಕವನ್ನ ಪ್ರಕಟಿಸಿದೆ. 2021ರ ಪರಿಷ್ಕೃತ ಪಟ್ಟಿಯಲ್ಲಿ ಭಾರತದ ಪಾಸ್ ಪೋರ್ಟ್ 85ನೇ ಸ್ಥಾನದಲ್ಲಿದೆ.

ಚೀನಾಗೆ ಮುಖಭಂಗ : ಚೀನಾದ ಹೆಸರನ್ನೇ ಅಳಿಸಿ ಹೊಸ ಪಾಸ್ ಪೋರ್ಟ್ ತಂದ ತೈವಾನ್

ಅಂದ್ಹಾಗೆ ಕೊರೊನಾ ಹಾವಳಿ ನಂತರ ಭಾರತ 1 ಸ್ಥಾನ ಕೆಳಗೆ ಇಳಿದಿದೆ. ಕಳೆದ ವರ್ಷ ಭಾರತ 84ನೇ ಸ್ಥಾನ ಪಡೆದಿತ್ತು. ಭಾರತೀಯ ಪಾಸ್ ಪೋರ್ಟ್ ನ ಅಂಕ 58. ಅಂದರೆ ಭಾರತೀಯ ಪಾಸ್ ಪೋರ್ಟ್ ಹೊಂದಿರುವವರು 58 ದೇಶಗಳಿಗೆ ಭೇಟಿ ನೀಡಿ ವೀಸಾ ರಹಿತವಾಗಿ 58 ದೇಶಗಳಿಗೆ ಭೇಟಿ ನೀಡಲು ಅವಕಾಶ ಇದೆ. ಭಾರತ ತಜಿಕಿಸ್ತಾನದ ಜತೆ ಈ ಸ್ಥಾನವನ್ನು ಹಂಚಿಕೊಂಡಿದೆ.

ಅಬ್ಬಬ್ಬಾ ಏನ್ ದುಬಾರಿ ಫೋನು : 97 ಕೋಟಿಯ ಫೋನ್ ನ ವಿಶೇಷತೆಗಳೇನು..! Black diamond Iphone 5

ಮೊದಲ ಸ್ಥಾನ : ಜಪಾನ್  – ಇನ್ನೂ ಟಾಪ್ 1 ಅಅಲ್ಲಿ ಇರುವ ರಾಷ್ಟ್ರವನ್ನ ನೋಡುವುದಾದ್ರೆ ಕಳೆದ ಬಾರಿಯಂತೆ ಈ ಬಾರಿಯೂ ಜಪಾನ್ ಇದೆ. ಮತ್ತೊಮ್ಮೆ 191 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನ ಗಳಿಸಿದೆ. ಸಿಂಗಾಪುರದೊಂದಿಗೆ ಸತತ ಮೂರು ವರ್ಷಗಳಿಂದ ಈ ಸ್ಥಾನವನ್ನ ಗಳಿಸಿದೆ. ಈ ವರ್ಷ 190 ದೇಶಗಳ ಜತೆ ಸಿಂಗಾಪುರ ಎರಡನೇ ಸ್ಥಾನದಲ್ಲಿದೆ.

ಲಡಾಕ್ ಗಡಿಯಿಂದ 10,000 ಸೈನಿಕರನ್ನ ವಾಪಸ್ ಕರೆಸಿಕೊಂಡ ಚೀನಾ: ಕಾರಣ!

ಕೊನೆಯ ಸ್ಥಾನ: ಅಫ್ಗಾನಿಸ್ತಾನ – ಈ ವರ್ಷವೂ ಅಫ್ಗಾನಿಸ್ತಾನದ ಪಾಸ್ ಪೋರ್ಟ್ ಕೊನೆಯ ಸ್ಥಾನ ಪಡೆದು ವಿಶ್ವದ ಅತ್ಯಂತ ಕೆಟ್ಟ ಪಾಸ್ ಪೋರ್ಟ್ ಎಂಬ ಪಟ್ಟವನ್ನ ಪಡೆದಿದೆ. ಇನ್ನೂ ಮೂರನೇ ಸ್ಥಾನಕ್ಕಾಗಿ, ಏಷ್ಯಾದ ಮತ್ತೊಂದು ರಾಷ್ಟ್ರವು ಒಂದು ಯುರೋಪಿಯನ್ ರಾಷ್ಟ್ರದೊಂದಿಗೆ ಈ ಸ್ಥಾನವನ್ನ ಹಂಚಿಕೊಂಡಿತು. ದಕ್ಷಿಣ ಕೊರಿಯಾ ಮತ್ತು ಜರ್ಮನಿ ಒಟ್ಟು 189 ಪಾಯಿಂಟ್ಗಳನ್ನ ಗಳಿಸಿವೆ.

ಇನ್ಮುಂದೆ ಬಾರತ ‘ಲಿಥಿಯಂ’ಗಾಗಿ ಚೀನಾವನ್ನ ಅವಲಂಭಿಸುವ ಅಗತ್ಯವಿಲ್ಲ..!

ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಜರ್ಮನಿ ಸೇರಿ ವಿಶ್ವದ ಅಗ್ರ ಮೂರು ಪಾಸ್ ಪೋರ್ಟ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 4ನೇ ಸ್ಥಾನವನ್ನು ಫಿನ್ಲ್ಯಾಂಡ್, ಇಟಲಿ, ಲಕ್ಸಂಬರ್ಗ್ ಮತ್ತು ಸ್ಪೇನ್ 188 ಅಂಕದೊಂದಿಗೆ ಹಂಚಿಕೊಂಡಿತು. UK ಮತ್ತು U.S. ಪಾಸ್ ಪೋರ್ಟ್ಗಳ ಬಗ್ಗೆ, ಅವರು 7ನೇ ರ್ಯಾಂಕ್ʼನೊಂದಿಗೆ ಟಾಪ್ 10 ಪ್ರಬಲ ಪಾಸ್ ಪೋರ್ಟ್ʼಗಳನ್ನ ಹೊಂದಿದ್ದರು. ಕಳೆದ ವರ್ಷ ಎರಡೂ ಪಾಸ್ ಪೋರ್ಟ್ಗಳು 8ನೇ ರ್ಯಾಂಕ್ ಹಂಚಿಕೊಂಡಿವೆ.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd