ಕೋಲ್ಕತ್ತಾ: ಕೈದಿಯೊಬ್ಬಾತ ಇಡಬಾರದ ಜಾಗದಲ್ಲಿ ಮೊಬೈಲ್ ಇಟ್ಟು ಪೇಚಿಗೆ ಸಿಲುಕಿದ್ದಾನೆ.
ಜೈಲಿನಲ್ಲಿ ಮೊಬೈಲ್ ನಿಷೇಧವಿದ್ದರೂ ಖೈದಿಯೊಬ್ಬ ಮೊಬೈಲ್ನ್ನು ಗುದದ್ವಾರದೊಳಗೆ ಇಟ್ಟು ಸಾಗಿಸಲು ಯತ್ನಿಸಿದ್ದಾನೆ. ಈಗ ಪೇಚಾಟಕ್ಕೆ ಸಿಲುಕಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಬರುಯಿಪುರ ಕೇಂದ್ರ ಸುಧಾರಣಾ ಕೇಂದ್ರದಲ್ಲಿ ನಡೆದಿದೆ.
ಖೈದಿ ಅಸ್ಲಾಂ ಶೇಖ್(30) ಬರುಯಿಪುರ ನ್ಯಾಯಾಲಯದಿಂದ ಬರುಯಿಪುರ ಸುಧಾರಣಾ ಸೌಲಭ್ಯಕ್ಕೆ ತೆರಳಿದ್ದ. ಜೈಲಿಗೆ ಬರುವ ಮುನ್ನ ಮೊಬೈಲ್ ಇಟ್ಟುಕೊಂಡಿದ್ದ ಅಸ್ಲಾಂ, ಗೇಟ್ ಬಳಿ ಭದ್ರತಾ ತಪಾಸಣೆ ಕಂಡು ಭಯದಿಂದ ಗುದದ್ವಾರದೊಳಗೆ ಮೊಬೈಲ್ ಬಚ್ಚಿಟ್ಟಿದ್ದಾನೆ. ನಂತರ ಮೊಬೈಲ್ ತೆಗೆಯಲು ಯತ್ನಿಸಿದ್ದಾನೆ. ಸಾಕಷ್ಟು ಪ್ರಯತ್ನ ನಡೆಸಿದ ನಂತರವೂ ಅಸ್ಲಾಮ್ನ ಗುದದ್ವಾರದಿಂದ ಮೊಬೈಲ್ ಫೋನ್ ಹೊರತೆಗೆಯಲು ಸಾಧ್ಯವಾಗಲಿಲ್ಲ. ಆಗ ಪೊಲೀಸರಿಗೆ ಈ ಮಾಹಿತಿ ತಿಳಿದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಿಗಿದೆ. ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.