ಗಾಳಿಯ ಆರ್ಭಟಕ್ಕೆ ಹಾರಿ ಹೋದ 40ಕ್ಕೂ ಹೆಚ್ಚು ಮನೆಗಳ ಛಾವಣಿ
ವಿಜಯನಗರ : ನಿನ್ನೆ ಸಂಜೆ ಸಂಭವಿಸಿದ ಭಾರಿ ಗಾಳಿ, ಮಳೆಗೆ 40ಕ್ಕೂ ಹೆಚ್ಚು ಮನೆಗಳ ಛಾವಣಿ ಹಾರಿ ಹೋಗಿರುವ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಗತಿ ಬಸಾಪುರ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಸಂಜೆ ಬೀಸಿದ ಗಾಳಿಯ ಆರ್ಭಟಕ್ಕೆ ಮನೆಗಳ ಮೇಲೆ ಮರ ಮುರಿದು ಬಿದ್ದಿದೆ. ಪರಿಣಾಮ ಗ್ರಾಮದ ಕಣವಳ್ಳಿ ರೇಣುಕಮ್ಮ, ಖಾನಹಳ್ಳಿ ಭೀಮಮ್ಮ, ಹೊಂಳಗಟ್ವಿ ಶಾಂತಮ್ಮ, ಮಡಿವಾಳ ಕೂಟ್ರಮ್ಮ, ಮಡಿವಾಳ ನೀಲಮ್ಮರವರ ಮನೆಯ ಛಾವಣಿಗಳು ಸಂಪೂರ್ಣ ಹಾರಿಹೋಗಿವೆ. ಅಲ್ಲದೆ ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ತೊಯ್ದು ಹೋಗಿವೆ.
ಹಾಗೇ ಮನೆಯಲ್ಲಿದ್ದ ದಿನಸಿ ಸಾಮಗ್ರಿಗಳು ಮಳೆ ನೀರಿಗೆ ಸಿಲುಕಿ ಹಾಳಾಗಿವೆ. ಇಂತಹ ಭೀಕರ ಗಾಳಿ ಮಳೆಯನ್ನು ನಾನು ನೋಡಿರಲಿಲ್ಲ ಎನ್ನುತ್ತ ಗ್ರಾಮದ ಯುವಕ ದೇವರಾಜ ಗದ್ಗದಿತರಾದರು. ಇದೀಗ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.