ಕಲಬುರಗಿ: ಮದುವೆ ಮಾಡಿಸಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಚಿಂಚೋಳಿ (Chincholi) ತಾಲ್ಲೂಕಿನ ಪೋಚಾವರಂನಲ್ಲಿ ನಡೆದಿದೆ. ಶೋಭಾ (45) ಮಗನಿಂದಲೇ ಹತ್ಯೆಯಾದ ದುರ್ದೈವ ತಾಯಿ. ಮಗ ಅನಿಲ್ ಕೊಲೆ ಮಾಡಿರುವ ಪಾಪಿ. ಅನಿಲ್ ಮನೆಗೆ ಕುಡಿದು ಬಂದಿದ್ದು, ನಶೆಯಲ್ಲಿ ಮದುವೆ ಮಾಡಿಸುವ ಕುರಿತು ಜಗಳ ಮಾಡಿದ್ದಾನೆ. ಈ ವೇಳೆ ಮದುವೆ ಏಕೆ ಮಾಡಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾನೆ. ಆನಂತರ ಅಲ್ಲಿಯೇ ಇದ್ದ ಕಟ್ಟಿಗೆಯಿಂದ ತಾಯಿಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆ ಕುರಿತು ಚಿಂಚೋಳಿಯ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅನಿಲ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.