ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಮಗ Saaksha Tv
ಅಮರಾವತಿ: ಮಗನೊಬ್ಬ ತನ್ನ ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ಗುಂಟುರು ಜಿಲ್ಲೆಯ ತಾಡಪಲ್ಲಿಯ ಬ್ರಹ್ಮಾನಂದಪುರಂನಲ್ಲಿ ನಡೆದಿದೆ.
ತಾಯಿ ನಾಗಮಣಿ ಹಲ್ಲೆಗೊಳಗಾದ ಮಹಿಳೆ ಹಾಗೂ ಶೇಷು ಆರೋಪಿ. ವರ್ಷಗಳ ಹಿಂದೆ ಅಂದಿನ ಆಂಧ್ರ ಸರ್ಕಾರ ನಾಗಮಣಿ ಅವರ ಪತಿ ವೆಂಕಟೇಶ್ವರರಾವ್ ಅವರಿಗೆ ಭೂಮಿ ಮಂಜೂರು ಮಾಡಿತ್ತು. ಕಷ್ಟಪಟ್ಟು ಅವರು ಮನೆ ಕಟ್ಟಿದ್ದರು. ಆದರೆ ನಾಗಮಣಿ ಅವರ ಪತಿ ಮೂರು ವರ್ಷಗಳ ಹಿಂದೆ ನಿಧನರಾದರು.
ತಂದೆಯ ನಿಧನದ ನಂತರ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದ ಶೇಷು ಪತ್ನಿಯೊಂದಿಗೆ ತನ್ನ ಗ್ರಾಮಕ್ಕೆ ಬಂದು ವಾಸಿಸತೊಡಗಿನು. ಈ ಖುಷಿ ನಾಗಮಣಿಗೆ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಅವಳಿಗೆ ಶೇಷು ದಿನನಿತ್ಯ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದ. ಜೊತೆ ತಾಯಿಯ ಮೇಲೆ ಅಮಾನುಷವಾಗಿ ವರ್ತಿಸುತ್ತಿದ್ದ.
ಇದನ್ನು ಗಮನಿಸಿದ ಸ್ಥಳೀಯರು ಈ ಹಿಂದೆ ಶೇಷುಗೆ ಛೀಮಾರಿ ಹಾಕಿದರೂ ವರ್ತನೆ ಬದಲಿಸಿಕೊಳ್ಳಲಿಲ್ಲ. ಇರಿಂದಾಗಿ ಸ್ಥಳೀಯರು ಪೊಲೀಸರಿಗೆ ಆತನ ವಿರುದ್ಧ ತಾಯಿಗೆ ಹಲ್ಲೆ ಮಾಡುತ್ತಿರುವ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶೇಷುವನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.








