ಸಾಯೋ ಮುಂಚೆ ಗಂಡ ಗಿಫ್ಟ್ ಕೊಟ್ಟಿದ್ದ ಮಾಂಗಲ್ಯ ಸರದಿಂದ ಏನೆಲ್ಲಾ ಎಡವಟ್ಟಾಯ್ತು ನೋಡಿ..!
ಮಹಿಳೆಯೊಬ್ಬರಿಗೆ ಆಕೆಯ ಗಂಡ ಸಾಯುವುದಕ್ಕೂ ಮುನ್ನ ಮಾಂಗಲ್ಯ ಸರದಿಂದ ಶಾಕಿಂಗ್ ಸತ್ಯವೊಂದು ಪತ್ನಿಗೆ ಗೊತ್ತಾಗಿದ್ದು, ಇದೇ ಸರದಿಂದ ಸರಗಳ್ಳರ ಗ್ಯಾಂಗ್ ಸಿಕ್ಕಿಬಿದ್ದಿದೆ.
ಹೌದು ಅಂದ್ಹಾಗೆ ಇತ್ತೀಚೆಗೆ ಸರಗಳ್ಳರ ಗ್ಯಾಂಗ್ ಈ ಮಹಿಳೆಯ ಚೈನ್ ಸ್ನಾಚ್ ಮಾಡಿತ್ತು. ಇದೇ ಚಿನ್ನದ ಸರವನ್ನ ಮಾರವಾಡಿ ಅಂಗಡಿಯೊಂದರಲ್ಲಿ ಖದೀಮರು ಮಾರಾಟ ಮಾಡಲು ತೆರಳಿದ್ದಾರೆ. ಆಗ ಅದು ಚಿನ್ನದ ಸರವಲ್ಲ..ರೋಲ್ಡ್ ಗೋಲ್ಡ್ ಅನ್ನೋದು ಪತ್ತೆಯಾಗಿದೆ. ತಕ್ಷಣವೇ ಚಿನ್ನದಂಗಡಿಯವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಚಿನ್ನದಂಗಡಿಯವನ ಕೈಯಿಂದ ಸರಗಳ್ಳರು ಎಸ್ಕೇಪ್ ಆಗಿದ್ದಾರೆ..
ಪ್ರೀತಿ ನಿರಾಕರಿಸಿದಕ್ಕೆ ಆಕೆಯ ಸ್ಕೂಟಿ ಸುಟ್ಟುಹಾಕಿದ..!
ಘಟನೆ ಬಳಿಕ ಮೈಕೋಲೇಔಟ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿಸಿಟಿವಿ ಆಧಾರದಲ್ಲಿ ಸರಗಳ್ಳರಾದ ಸಂತೋಷ್ & ಜೈ ಕುಮಾರ್ ನನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ. ಆಗ ಸರ ಕಳೆದುಕೊಂಡ ಮಹಿಳೆಯನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಆಗಲೇ ಪತ್ನಿಗೂ ಶಾಕ್ ಎದುರಾಗಿದೆ. ತನ್ನ ಪತಿ ತಂದು ಕೊಟ್ಟ ಸರ ನಕಲಿ ರೋಲ್ ಗೋಲ್ಡ್ ಎಂಬ ವಿಚಾರ ಗೊತ್ತಾಗಿದೆ. ಅಸಲಿ ವಿಚಾರ ಏನಂದ್ರೆ ಸರ ತಂದು ಕೊಟ್ಟಿದ್ದ ಪತಿಗೂ ಕೂಡ ಅದು ರೋಲ್ಡ್ ಗೋಲ್ಡ್ ಅನ್ನೋದು ಗೊತ್ತಿಲ್ಲದೇ ಯಾಮಾರಿದ್ದನಂತೆ. ಇತ್ತ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರ ಬಳಿ, ತಮಗೆ ಮೈತುಂಬ ಸಾಲವಿದ್ದು, ಅದನ್ನ ತೀರಿಸೋಕೆ ಅಡ್ಡದಾರಿ ಹಿಡಿದ ಬಗ್ಗೆ ಖದೀಮರು ಒಪ್ಪಿಕೊಂಡಿದ್ದಾರೆ.
VIDEO : ಮುದ್ದು ಮಕ್ಕಳ ಸ್ನೇಹಕ್ಕೆ ನೆಟ್ಟಿಗರು ಫಿದಾ..!
ರೈತರ ಪ್ರತಿಭಟನೆ : ಪಾಪ್ ಸಿಂಗರ್ ರಿಹನ್ನಾ ವಿರುದ್ಧ ತಿರುಗಿಬಿದ್ದ ಬಾಲಿವುಡ್ ಸ್ಟಾರ್ಸ್, ಕ್ರಿಕೆಟರ್ಸ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel