ಮಂಗಳೂರು, ಮೇ 16 : ಸ್ವಾನ್ ಹೆಸರಿನ ಧೂಮಕೇತು ಭೂಮಿಯ ಸಮೀಪಕ್ಕೆ ಬರುತ್ತಿದ್ದು, ಬೆಳಗಿನ ಜಾವ ಸುಮಾರು 4 ರಿಂದ 4.30 ರ ಸಮಯದಲ್ಲಿ ಇದು ಕಾಣಸಿಗುತ್ತದೆ. ಸೂರ್ಯನ ಹತ್ತಿರಕ್ಕೆ ಹೋದಂತೆ ಇನ್ನಷ್ಟು ಗೋಚರವಾಗುವ ಸ್ವಾನ್ ಧೂಮಕೇತು ಸೂರ್ಯನ ಅತ್ಯಂತ ಸಮೀಪಕ್ಕೆ ಮೇ 28ರಂದು ಬರಲಿದೆ.
ಈ ಬಾರಿ ಸ್ವಾನ್ ಧೂಮಕೇತು ನೋಡುವ ಅವಕಾಶ ಸಿಕ್ಕಿದ್ದು, 1980ರ ದಶಕದ ಸಮಯದಲ್ಲಿ ಹ್ಯಾಲಿ ಧೂಮಕೇತು ಕಾಣಿಸಿಕೊಂಡಿತ್ತು. ಹ್ಯಾಲಿ ಧೂಮಕೇತು ಇನ್ನೊಮ್ಮೆ ಭೂಮಿಯ ಬಳಿ ಬರುವುದು 2016ಕ್ಕೆ.
ಪ್ರತಿದಿನ ಮುಂಜಾನೆ 4 ರ ಜಾವದಲ್ಲಿ ಕಾಣ ಸಿಗುವ ಸ್ವಾನ್ ಧೂಮಕೇತು, ವಿವಿಧ ರಾಶಿಗಳ ಬಳಿ ತನ್ನದೇ ಆದ ಮಾರ್ಗದಲ್ಲಿ ಚಲಿಸುತ್ತಾ ಸೂರ್ಯೋದಯಕ್ಕೆ ಮೊದಲು ಒಂದೂವರೆ ತಾಸು ಕಾಣಿಸುತ್ತದೆ.
ಸ್ವಾನ್ ಧೂಮಕೇತುವನ್ನು ನೋಡಲು ಮೇ 20 ಸೂಕ್ತ ದಿನವಾಗಿದ್ದು, ಅಂದು ಪಾರ್ಥ ರಾಶಿಯ ಎರಡನೇ ಅತಿ ಪ್ರಕಾಶಮಾನವಾದ ಅಲ್ ಗೋಲ್ ನಕ್ಷತ್ರದ ಬಳಿ ಹಾದು ಹೋಗುತ್ತದೆ ಮತ್ತು ಮೇ 22 ರ ವರೆಗೆ ಇದೇ ಹೊಳಪಿನಲ್ಲಿ ಕಾಣಿಸುತ್ತದೆ.
ನಿಮ್ಮ ದಾನ ಬೇಡ, ವಿನಾಶಕ್ಕೆ ಪರಿಹಾರ ನೀಡಿ: ನಮಗೆ ನ್ಯಾಯ ಬೇಕು ಭಾರತದ ವಿರುದ್ಧ ಸಿಡಿದೆದ್ದ ನೇಪಾಳ
ಕಾಠ್ಮಂಡು: ಇತ್ತೀಚಿನ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನಲುಗಿ ಹೋಗಿರುವ ನೇಪಾಳ, ಇದೀಗ ಜಗತ್ತಿನ ಬಲಿಷ್ಠ ರಾಷ್ಟ್ರಗಳ ವಿರುದ್ಧ ತಿರುಗಿಬಿದ್ದಿದೆ. ಸಾವಿರಾರು ಜೀವಗಳನ್ನು ಬಲಿಪಡೆದ ಈ ನೈಸರ್ಗಿಕ...








