ಕಾರಿನಲ್ಲಿ ಬಂದು ಹೂ ಪಾಟ್ ಕದ್ದ ಕಳ್ಳಿ Saaksha Tv
ಬೆಂಗಳೂರು: ಖದೀಮರು ಯಾವರೀತಿಯಾಗಿ ಬರುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಮಹಿಳೆ ಒಬ್ಬಳು ಐಶಾರಾಮಿ ಕಾರಿನಲ್ಲಿ ಬಂದು ಪಾಟ್ ನ್ನು ಕದ್ದಿರುವ ಘಟನೆಯು ಬೆಂಗಳೂರಿನ Bengaluru ಸಂಜಯ ನಗರದಲ್ಲಿ ನಡೆದಿದೆ.
ಸಂಜಯನಗರದ ಆರ್ಎಂವಿ 2ನೇ ಸ್ಟೇಜ್ನಲ್ಲಿ ಹೈ-ಫೈ ಕಾರಿನಲ್ಲಿ Car ಬಂದ ಮಹಿಳೆಯೊಬ್ಬರು ಕಳ್ಳತನ ಮಾಡಿದ್ದಾರೆ. ಇದೇ ತಿಂಗಳು 24 ರಂದು ಕೆಂಪು ಬಣ್ಣದ ಹೈ-ಪೈ ಕಾರಿನಲ್ಲಿ ಬಂದ ಮಹಿಳೆ ಮನೆ ಮುಂದೆ ಇರಿಸಿದ್ದ ಹೂ ಪಾಟ್ ನ್ನು ಕಳ್ಳತನ ಮಾಡಿದ್ದಾರೆ. ಮಹಿಳೆ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೆಯ ಮಾಲಿಕರಾದ ಕಾವ್ಯ ಸೆಲ್ವಂ ಮನೆಯ ಮುಂದೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಈ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಸೆರೆಯಾದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.