ಬೆಂಗಳೂರು: ಊಬರ್ ಚಾಲಕ ಟೆಕ್ಕಿಯನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಟೆಕ್ಕಿ ಹಾಗೂ ಊಬರ್ ಕಾರು ಚಾಲಕನ ಮಧ್ಯೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಕೆಳಗೆ ಇಳಿಸಿ ಹೋಗಿದ್ದಾನೆ ಎನ್ನಲಾಗಿದೆ. ಈ ಕುರಿತ ವಿವರವನ್ನು ಟೆಕ್ಕಿ ಚಾಲಕನ ಫೋಟೊ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟೆಕ್ಕಿ ಹಾಗೂ ಸ್ನೇಹಿತ ಇಬ್ಬರೂ ಕಚೇರಿಗೆ ತೆರಳಲು ಊಬರ್ ಬುಕ್ ಮಾಡಿದ್ದರು. ಅದು ಸುಮಾರು ಒಂದೂವರೆ ಗಂಟೆ ಅವಧಿಯ ಪ್ರಯಾಣವಾಗಿದೆ. ಅರ್ಧ ಗಂಟೆ ಊಬರ್ ಚಾಲಕ ಫೋನನ್ನು ಲೌಡ್ ಸ್ಪೀಕರ್ ಮೋಡ್‌ನಲ್ಲಿಟ್ಟು ಗಟ್ಟಿಯಾಗಿ ಮಾತನಾಡುತ್ತಿದ್ದ ಎಂದು ಟೆಕ್ಕಿ ಆರೋಪಿಸಿದ್ದಾರೆ. ಆಗ ಇಯರ್ ಫೋನ್ ಬಳಸುವಂತೆ ಚಾಲಕನಿಗೆ ಹೇಳಿದ್ದಾರೆ.
ಹೀಗಾಗಿ ಕೋಪಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆಳಗೆ ಇಳಿಸಿದ್ದಾನೆ ಎಂದು ಟೆಕ್ಕಿ ಆರೋಪಿಸಿದ್ದಾರೆ. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.