ಒಮಿಕ್ರಾನ್ ಆತಂಕದ ಮಧ್ಯೆಯೇ ಹೊಸ ವರ್ಷಕ್ಕೆ ಸಜ್ಜಾದ ಜಗತ್ತು…

1 min read

ಒಮಿಕ್ರಾನ್ ಆತಂಕದ ಮಧ್ಯೆಯೇ ಹೊಸ ವರ್ಷಕ್ಕೆ ಸಜ್ಜಾದ ಜಗತ್ತು…

ಕರೋನ ವೈರಸ್ ಸಾಂಕ್ರಾಮಿಕದ ಮತ್ತೊಂದು ಅಲೆಯ ಮಧ್ಯೆ ಜಗತ್ತು  ಹೊಸ ವರ್ಷವನ್ನು ಬರಮಾಡಿಕೊಳ್ಳಲು ರೆಡಿಯಾಗುತ್ತಿದೆ. ಕಳೆದೆರೆಡು ವರ್ಷಗಳ  ಪ್ಯಾಂಡಮಿಕ್ ನಿಂದ ಬಿಡುಗಡೆಗೊಳ್ಳಲು 2022 ರಲ್ಲಿ ಭರವಸೆಯನ್ನ ಹುಡುಕುತ್ತಿದೆ.

ಹಲವಾರು ದೇಶಗಳು ಹೊಸ ವರ್ಷದ ಆಚರಣೆಯನ್ನ ಸಾಮೂಹಿಕವಾಗಿ ಆಚರಿಸಲು  ನಿರ್ಬಂಧ ಹೇರಿವೆ. ಕೆಲವು ದೇಶಗಳು ಸಂಭ್ರಮಾಚರಣೆಗೆ ಮುಕ್ತವಾಗಿ ತೆರೆದುಕೊಂಡಿವೆ. ಒಟ್ಟಿನಲ್ಲಿ 2021ಕ್ಕೆ ವಿದಾಯ ಹೇಳಲು ಜಗತ್ತು ರೆಡಿಯಾಗಿದೆ.

ಭಾರತ

ಓಮಿಕ್ರಾನ್ ರೂಪಾಂತರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಭಾರತದ ಅನೇಕ ರಾಜ್ಯಗಳು ಹೊಸ ವರ್ಷದ ಆಚರಣೆಗಳನ್ನು ನಿಷೇಧಿಸಿದೆ. ಹೊಟೆಲ್ ರೆಸ್ಟೋರೆಂಟ್ ಗಳಲ್ಲಿ ಶೇಕಡಾ 50 ರಷ್ಟು ಹಾಜರಾತಿಗೆ ಅನುಮತಿ ನೀಡಿವೆ.  ನೈಟ್  ಕರ್ಫ್ಯೂ ನಂತಹ ಕಟ್ಟು ನಿಟ್ಟು ನಿರ್ಬಂಧಗಳನ್ನ ಹೇರಿವೆ….

ರಿಯೊ ಡಿ ಜನೇರಿಯೊ

“ನಗರವು ತೆರೆದಿದೆ. ನಗರವು ಆಚರಿಸಲಿದೆ” ಎಂದು ರಿಯೊ ಡಿ ಜನೇರಿಯೊ

ನಗರದ ಮೇಯರ್ ಎಡ್ವರ್ಡೊ ಪೇಸ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆ AFP ಉಲ್ಲೇಖಿಸಿದೆ.

ಕಡಿಮೆ ಕೋವಿಡ್ -19 ಸೋಂಕು ಮತ್ತು ವ್ಯಾಕ್ಸಿನೇಷನ್ ಹೆಚ್ಚಿಸುವುದರೊಂದಿಗೆ ನಗರವು ತನ್ನ ಸಾಂಪ್ರದಾಯಿಕ ಕೋಪಕ ಬಾನಾ ಬೀಚ್ ಉತ್ಸವವನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಈ ಉತ್ಸವದಲ್ಲಿ ವಾರ್ಷಿಕವಾಗಿ ಮೂರು ಮಿಲಿಯನ್ ಜನರು ಪಾಲ್ಗೊಳ್ಳುತ್ತಾರೆ,

ನ್ಯೂ ಯಾರ್ಕ್

ಮೇಯರ್ ಬಿಲ್ ಡಿ ಬ್ಲಾಸಿಯೊ ಈ ವರ್ಷ ಟೈಮ್ಸ್ ಸ್ಕ್ವೇರ್ ಬಾಲ್ ಡ್ರಾಪ್  ಈವೆಂಟ್ ಅನ್ನು ಮತ್ತೆ ಆಯೋಜಿಸುವುದಾಗಿ ಘೋಷಿಸಿದ್ದಾರೆ. ಶುಕ್ರವಾರ ರಾತ್ರಿ, ಹೊಸ ವರ್ಷದ ವಾರ್ಷಿಕ ಬಾಲ್ ಡ್ರಾಪ್ ಕಾರ್ಯಕ್ರಮವನ್ನ ವೀಕ್ಷಿಸಲು ಸಾರ್ವಜನಿಕರು ಟೈಮ್ಸ್ ಸ್ಕ್ವೇರ್‌ನಲ್ಲಿ ಸೇರುತ್ತಾರೆ.

ಸಿಡ್ನಿ

ಬ್ಲೂಸ್ ಪಾಯಿಂಟ್ ರಿಸರ್ವ್, ಗಿಬಾ ಪಾರ್ಕ್ ಪಿರ್ಮಾಂಟ್, ಲ್ಯಾವೆಂಡರ್ ಬೇ ಮತ್ತು ಅಬ್ಸರ್ವೇಟರಿ ಹಿಲ್‌ನಂತಹ ಜನಪ್ರಿಯ ಸ್ಥಳಗಳು ಜನರಿಗೆ ರಾತ್ರಿ 9 ಗಂಟೆಗೆ ಮತ್ತು ಮಧ್ಯರಾತ್ರಿಯಲ್ಲಿ ತಮ್ಮ ಆರು ಟನ್ ಪಟಾಕಿ ಸಿಡಿಸುವುದನ್ನ ನೋಡಲು ಉಚಿತ ಟಿಕೆಟ್‌ಗಳನ್ನು ನೀಡುತ್ತಿವೆ. ಈ ಪ್ರದೇಶದಲ್ಲಿ ಕೋವಿಡ್ -19 ಸೋಂಕುಗಳ ಉಲ್ಬಣದ ಹೊರತಾಗಿಯೂ, ಆಚರಣೆಗಳು ಮುಂದುವರಿಯಲಿವೆ.

ಲಂಡನ್

ಲಂಡನ್‌ನ ಹೊಸ ವರ್ಷದ ಪಟಾಕಿ ಪ್ರದರ್ಶನವನ್ನು ಮತ್ತೊಂದು ವರ್ಷಕ್ಕೆ ರದ್ದುಗೊಳಿಸಲಾಗಿದೆ, ಆದರೂ ಖಾಸಗಿಯಾಗಿ  ಹೋಸ್ಟ್ ಮಾಡಿದ ಕಾರ್ಯಕ್ರಮಗಳಿಗೆ  ಅನುಮತಿ ನೀಡಲಾಗುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd