ಬೆಂಗಳೂರು: ತಂಗಿಯೊಬ್ಬಳು ಸ್ವಂತ ಅಕ್ಕನ ಚಿನ್ನಾಭರಣ ಕದ್ದಿರುವ ಘಟನೆಯೊಂದು ನಡೆದಿದೆ.
ಸದ್ಯ ಈ ಘಟನೆ ನಗರದಲ್ಲಿ ನಡೆದಿದ್ದು, ಚಿನ್ನ ಕದ್ದಿದ್ದ ತಂಗಿ ಈಗ ಜೈಲು ಪಾಲಾಗಿದ್ದಾಳೆ. ಅಕ್ಕನೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಕತ್ತಲಿನಲ್ಲಿ ಅಕ್ಕನ ಬ್ಯಾಗ್ ಗೆ ಕೈ ಹಾಕಿ ಚಿನ್ನಾಭರಣ ದೋಚಿದ್ದಾಳೆ. ದಂಡು ರೈಲು ನಿಲ್ದಾಣ ಬರುತ್ತಿದ್ದಂತೆ ಸದ್ದಿಲ್ಲದೇ ಚಿನ್ನಾಭರಣ ದೋಚಿ ಏನೂ ಗೊತ್ತಿಲ್ಲದವಳಂತೆ ಸುಮ್ಮನಿದ್ದಾಳೆ. ಅಕ್ಕ ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ.
ಕೂಡಲೇ ಚಿನ್ನಾಭರಣ ಕಳ್ಳತನವಾಗಿರುವ ಕುರಿತು ಅಕ್ಕ ಲಲಿತಾ ದೂರು ನೀಡಿದ್ದಾರೆ. ಆಗ ಪೊಲೀಸರು ತಂಗಿ ಚಂದ್ರ ಶರ್ಮಾಳ ನಡವಳಿಕೆ ಕುರಿತು ಅನುಮಾನ ಪಟ್ಟು, ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಯಲಿಗೆ ಬಂದಿದೆ. ಸದ್ಯ ಬಂಧಿತ ಮಹಿಳೆಯಿಂದ 8.50 ಲಕ್ಷ ರೂ. ಮೌಲ್ಯದ 152 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.