ಬೆಂಗಳೂರು : ಕೊರೊನಾದಿಂದ ದೇಶವೇ ತಲ್ಲಣಗೊಂಡಿದೆ. ಈ ಸಂಕಷ್ಟದಲ್ಲಿ ಎಲ್ಲರು ಒಂದಾಗೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರೋಗಕ್ಕೆ ಜಾತಿ-ಧರ್ಮಗಳಿಲ್ಲ.ಇದನ್ನು ಜಾತಿ-ಧರ್ಮದ ಪೂರ್ವಗ್ರಹಗಳಿಲ್ಲದೆಯೇ ಎದುರಿಸಬೇಕು. ಕೊರೊನಾ ವಿರುದ್ಧ ದೇಶ ಒಂದಾಗಿನಡೆಸುತ್ತಿರುವ ಹೋರಾಟಕ್ಕೆ ಕೆಲವರು ಜಾತಿ-ಧರ್ಮದ ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ.
ಈ ಸಂಕಷ್ಟದ ಗಳಿಗೆಯಲ್ಲಿ ಒಂದಾಗಿರೋಣ, ಎಚ್ಚರವಾಗಿರೋಣ ಎಂದು ಕರೆಕೊಟ್ಟಿದ್ದಾರೆ.









