ಮಾರ್ಚ್, ಮೇ ತಿಂಗಳ ಹೊತ್ತಿಗೆ ದೇಶದಲ್ಲಿ ಕೊರೊನಾ ಇರಲ್ಲ : ವಿನಯ್ corona saaksha tv
ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ತನ್ನ ಕಬಂದ ಬಾಹುಗಳನ್ನು ಚಾಚಲು ಮುಂದಾಗಿದೆ. ಈ ಮಧ್ಯೆ ದೇಶದಲ್ಲಿ ಇನ್ನೂ ಮುರ್ನಾಲ್ಕು ತಿಂಗಳು ಮಾತ್ರ ಕೊರೊನಾ ಸೋಂಕು ಇರಬಹುದು ಎಂದು ಅವಧೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಮುಳ್ಳಯ್ಯನಗಿರಿಯಲ್ಲಿ ಮಾತನಾಡಿದ ಅವರು, ನನ್ನ ಪ್ರಕಾರ ಮಾರ್ಚ್ ಅಥವಾ ಮೇ ತಿಂಗಳ ಹೊತ್ತಿಗೆ ಕೊರೊನಾ ಇಡೀ ದೇಶದಿಂದ ದೂರವಾಗಬಹುದು. ಮನುಷ್ಯನಿಗೆ ಆತ್ಮಸ್ಥೈರ್ಯ ಮುಖ್ಯವಾಗಿದ್ದು, ಜನರು ಎಂದೂ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು ಎಂದು ಹೇಳಿದರು.
ಇನ್ನುದೇವರು ಎಲ್ಲವನ್ನೂ ನೋಡಿಕೊಳ್ಳುತ್ತಾನೆ, ಮ್ಯಾಜಿಕ್ ಆಗಲಿ, ಪವಾಡ ಆಗಲಿ ಅಂದರೆ ಯಾವುದು ಆಗುವುದಿಲ್ಲ. ಇದರಿಂದ ಹೊರ ಬರಲು ನಾವು ಪ್ರಯತ್ನ ಪಡುವುದೇ ನಿಜವಾದ ಪವಾಡ ಎಂದು ವಿನಯ್ ಗುರೂಜಿ ನುಡಿದರು.