ಮುಂಬೈ ಏರ್ಪೋಟ್ ನಲ್ಲಿ ಕೊಂಚದರಲ್ಲೆ ತಪ್ಪಿದ ಭಾರಿ ಅನಾಹುತ: ಪುಶ್ಬ್ಯಾಕ್ ವಾಹನಕ್ಕೆ ಬೆಂಕಿ
ಮುಂಬೈ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಏರ್ ಇಂಡಿಯಾ ವಿಮಾನದ ಕೊಂಚ ದೂರದಲ್ಲೇ ಪುಶ್ಬ್ಯಾಕ್ ವಾಹನಕ್ಕೆ ಮಧ್ಯಾಹ್ನ 1 ಗಂಟೆಗೆ ಬೆಂಕಿ ಹೊತ್ತಿಕೊಂಡಿದೆ.
ಏರ್ ಇಂಡಿಯಾ ಫ್ಲೈಟ್ AI-647 ಅನ್ನು ಹಿಂದಕ್ಕೆ ತಳ್ಳಲು ಹೊರಟಿದ್ದ ಪುಶ್ಬ್ಯಾಕ್ ವಾಹನ ವಿಮಾನದ ಬಳಿ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಬೆಂಕಿಯನ್ನು ನಿಂದಿಸಿದ್ದಾರೆ. ಏರ್ ಇಂಡಿಯಾ ವಿಮಾನವು ಮುಂಬೈನಿಂದ ಗುಜರಾತ್ನ ಜಾಮ್ನಗರಕ್ಕೆ ತೆರಳುತ್ತಿತ್ತು. ಇದರಲ್ಲಿ 85 ಪ್ರಯಾಣಿಕರಿದ್ದು, ಯಾವುದೇ ರೀತಿಯ ಗಾಯ ಅಥವಾ ಪ್ರಾಣಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.