ಮುಂಬೈ ಇಂಡಿಯನ್ಸ್ ತಂಡದ ರಿಟೈನ್ ಆಟಗಾರರು ಇವರೇ

1 min read

ಮುಂಬೈ ಇಂಡಿಯನ್ಸ್ ತಂಡದ ರಿಟೈನ್ ಆಟಗಾರರು ಇವರೇ Mumbai Indians saaksha tv

ಐಪಿಎಲ್ – 2022 ರ ಮೆಗಾ ಹರಾಜು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತದೆ. ಈ ಕ್ರಮದಲ್ಲಿ ಯಾವ ತಂಡದ ಪರ ಯಾರು ಆಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಬಿಸಿಸಿಐ ನಿಯಮಗಳ ಪ್ರಕಾರ, ಪ್ರತಿ ತಂಡವು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು.

ಅದರಲ್ಲಿ ವಿದೇಶಿ ಆಟಗಾರರಿರಬೇಕು. ತಂಡಗಳು ಈ ಪಟ್ಟಿಯನ್ನು ನವೆಂಬರ್ 30 ರೊಳಗೆ ಸಲ್ಲಿಸಬೇಕು.

Mumbai Indians saaksha tv

ಈ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಸಜ್ಜಾಗಿರುವಂತಿದೆ.

ಮುಂಬೈ ಸ್ಟಾರ್ ಆಲ್ ರೌಂಡರ್ ಕೀರನ್ ಪೊಲಾರ್ಡ್ ಅವರನ್ನೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

ಇನ್ನುಳಿದ ಒಂದು ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅಥವಾ ಇಶಾನ್ ಕಿಶನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶವೂ ಮುಂಬೈಗೆ ಇದೆ.

ಮುಂದಿನ ವರ್ಷದ ಋತುವಿನಲ್ಲಿ ಎರಡು ಹೊಸ ತಂಡಗಳು ಸೇರಿಕೊಳ್ಳುವುದರಿಂದ ಲೀಗ್ ಇನ್ನಷ್ಟು ರೋಚಕವಾಗಿರುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd