ವಿಶ್ವದ ಅತಿದೊಡ್ಡ ಸ್ವಯಂಸೇವಕ ಸೈನ್ಯ ಹೊಂದಿದ ದೇಶವಿದು..!!

1 min read

ವಿಶ್ವದ ಅತಿದೊಡ್ಡ ಸ್ವಯಂಸೇವಕ ಸೈನ್ಯ ಹೊಂದಿದ ದೇಶವಿದು..!!

ಭಾರತೀಯ ಸಶಸ್ತ್ರ ಪಡೆಗಳಲ್ಲಿಯೇ ಅತಿ ದೊಡ್ಡ ಪಡೆ ಭಾರತೀಯ ಭೂಸೇನೆ. ಭೂ ಗಡಿಗಳಲ್ಲಿ ಬರುವ ಸಮಸ್ಯೆಗಳು ಮತ್ತು ಕಂಟಕಗಳಿಂದ ದೇಶವನ್ನು ರಕ್ಷಿಸಲು ಈ ಪಡೆ ಸದಾ ಸಿದ್ಧವಾಗಿರುತ್ತದೆ. ಸಾವಿರಾರು ಸೈನಿಕರು ಗಡಿಯಲ್ಲಿ ಹಗಲಿರುಳೆನ್ನದೇ ನಮ್ಮ ನೆಮ್ಮದಿಗಾಗಿ ಶ್ರಮಿಸುತ್ತಿದ್ದಾರೆ. ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ ಭಾರತದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ.

1 ಏಪ್ರಿಲ್ 1895ರಲ್ಲಿ ಭೂಸೇನೆ ಸ್ಥಾಪನೆಯಾಯಿತು. ಹನ್ನೆರಡು ಲಕ್ಷ ಸಕ್ರಿಯ ಸೈನಿಕರು‌ ಮತ್ತು ಸುಮಾರು ಹತ್ತು ಲಕ್ಷ ಮೀಸಲು ಸೈನಿಕರು ಭಾರತೀಯ ಭೂಸೇನೆ ಯಲ್ಲಿ ಕಾರ್ಯ‌ನಿರ್ವಹಿಸುತ್ತಿದ್ದಾರೆ. ಅಲ್ಲದೇ ಭಾರತೀಯ ಭೂಸೇನೆ ಇದು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಪಡೆ ಮತ್ತು ವಿಶ್ವದ ಅತಿದೊಡ್ಡ ಸ್ವಯಂಸೇವಕ ಸೈನ್ಯವನ್ನು ಹೊಂದಿದೆ. ಯಾವುದೇ ಅಥವಾ ಯಾರದೇ ಒತ್ತಡವಿಲ್ಲದೇ ಸಾವಿರಾರು ಯುವಕರು ಸೇನೆಯನ್ನು ಸೇರುತ್ತಾರೆ. ಅಲ್ಲದೇ, ಇದು ವಿಶ್ವದ ಮೂರನೇ ಅತಿದೊಡ್ಡ ರಕ್ಷಣಾ ಬಜೆಟ್ ಅನ್ನು ಸಹ ಹೊಂದಿದೆ.

ಭಾರತೀಯ ಸೇನೆಯನ್ನು ಸ್ವಾತಂತ್ರ್ಯದವರೆಗೂ ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಆದರೆ ಜನವರಿ 15, 1949 ರಂದು, ಭಾರತೀಯ ಸೇನೆಯು ತನ್ನ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಅನ್ನು ಪಡೆದುಕೊಂಡಿತು. ಜನವರಿ 15, 1949 ರಂದು, ಭಾರತೀಯ ಸೇನೆಯ ಆಜ್ಞೆಯು ಬ್ರಿಟಿಷ್ ಜನರಲ್ ಫ್ರಾನ್ಸಿಸ್ ಬುತ್ಚೆರ್ ಅವರಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕರಿಯಪ್ಪ ಅವರ ಕೈಗೆ ಬಂದಿತು. ಇದರೊಂದಿಗೆ, ಬ್ರಿಟಿಷ್ ಪದವನ್ನು ಬ್ರಿಟಿಷ್ ಭಾರತೀಯ ಸೇನೆಯಿಂದ ಶಾಶ್ವತವಾಗಿ ತೆಗೆದುಹಾಕಲಾಯಿತು ಮತ್ತು ಅದನ್ನು ಭಾರತೀಯ ಸೇನೆ ಎಂದು ಕರೆಯಲಾಯಿತು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಸ್ವಾತಂತ್ರ್ಯ ಭಾರತದ ಮೊದಲ ಸೇನಾ ಮುಖ್ಯಸ್ಥರಾದರು. ಅಂದಿನಿಂದ, ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವೆಂದು ಆಚರಿಸಲಾಗುತ್ತದೆ. ಯುದ್ಧಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಭಾರತೀಯ ಸೇನೆಯು ವಿಶ್ವದ ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ಸೇನೆಯು ನಿಖರ ಅಗ್ನಿ ಮತ್ತು ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದ್ದು, ಇದು ಶಕ್ತಿಯುತವಾಗಿದೆ. ಪಾಕಿಸ್ತಾನ, ಚೀನಾದ ಕುತಂತ್ರಗಳಿಂದ‌ ನಮ್ಮನ್ನು ರಕ್ಷಿಸುವ ಧೀರ ಯೋಧರು ನಮ್ಮ‌ಹೆಮ್ಮೆ. ಇನ್ನು, 26 ಜುಲೈ, 1999ರಂದು ಭಾರತೀಯ ಸೇನೆಯು ಪಾಕಿಸ್ಥಾನದ ಹಿಡಿತದಲ್ಲಿದ್ದ ಕಾರ್ಗಿಲ್‌ನ ಎಲ್ಲಾ ಕ್ಷೇತ್ರಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಆದ್ದರಿಂದ ಪ್ರತಿ ವರ್ಷ ಜುಲೈ 26ನ್ನು ಕಾರ್ಗಿಲ್‌ ವಿಜಯೋತ್ಸವವೆಂದು ಆಚರಿಸುತ್ತೇವೆ.

ಅಲ್ಲದೇ, ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಎನಿಸಿರುವ ಸಿಯಾಚಿನ್, ವಿಶ್ವದ ಅತ್ಯುನ್ನತ ಯುದ್ಧಭೂಮಿಯೆಂಬ ಹೆಗ್ಗಳಿಕೆ ಹೊಂದಿದೆ. ಆದಾಗ್ಯೂ ಇಲ್ಲಿನ ಪ್ರಾಕೃತಿಕ ವಾತಾವರಣ ಮಾತ್ರ ಎಂದಿಗೂ ಗಡಿಕಾಯುವ ಸೈನಿಕರ ಪಾಲಿಗೆ ಉತ್ತಮವಾಗಿಲ್ಲ. ಭಾರತದ ಗಡಿಭಾಗವಾಗಿರುವ ಇಲ್ಲಿನ ನೀರ್ಗಲ್ಲು ಪ್ರದೇಶದಲ್ಲೊಂದು ಸೇನಾ ಠಾಣೆಯಿದೆ. ಈ ಪ್ರದೇಶದಲ್ಲಿ ವಾಸ್ತವಿಕವಾಗಿ ಆಮ್ಲಜನಕದ ಲಭ್ಯತೆ ವಿರಳವಾಗಿದ್ದು, ಸಾವಿನ ವಲಯವೆಂದೇ ಕುಖ್ಯಾತಿ ಪಡೆದಿದೆ. ಇಲ್ಲಿನ ಹಿಮಪಾತ ಗಡಿ ಕಾಯುವ ಅನೇಕ ಸೈನಿಕರನ್ನು ಬಲಿ ತೆಗೆದುಕೊಂಡಿದೆ. 1984 ರಿಂದ 2018 ರವರೆಗಿನ 34 ವರ್ಷಗಳಲ್ಲಿ, ಯುದ್ಧದ ಹೊರತಾಗಿ ಇತರ ಅಂಶಗಳಿಂದಾಗಿ 869 ಭಾರತೀಯ ಸೈನಿಕರು ಸಿಯಾಚಿನ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇಂಥ ಪ್ರತೀಕೂಲ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವ ನಮ್ಮ ಸೈನಿಕರಿಗೆ ನಿಮ್ಮದೂ ಒಂದು‌ಮೆಚ್ಚುಗೆಯಿರಲಿ.

ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd