ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಮೂವರು ಸಾವು manhole
ರಾಮನಗರ : ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಗರದ ನಗರಸಭಾ ವ್ಯಾಪ್ತಿಯ ಹೊಸ ನೇತಾಜಿ ಪಾಪ್ಯುಲರ್ ಶಾಲೆಯ ಹಿಂಭಾಗದಲ್ಲಿ ನಡೆದಿದೆ.
ಮಂಜುನಾಥ್, ಮಂಜುನಾಥ್ ಹಾಗೂ ರಾಜೇಶ್ ಎಂಬುವರು ಮೃತಪಟ್ಟಿದ್ದು, ಇವರು ಬೆಂಗಳೂರಿನ ಕಮಲಾನಗರ ನಿವಾಸಿಗಳೆಂದು ತಿಳಿದು ಬಂದಿದೆ.

ಯುಜಿಡಿ ಕೆಲಸಕ್ಕೆ ಗುತ್ತಿಗೆ ಆಧಾರದ ಮೇಲೆ ಈ ಯುವಕರನ್ನ ಬೆಂಗಳೂರಿನಿಂದ ಕರೆಸಲಾಗಿತ್ತು.
ಯುಜಿಡಿ ಕೆಲಸ ಮಾಡುತ್ತಿದ್ದ ವೇಳೆ ಮೂವರಿಗೂ ಉಸಿರುಗಟ್ಟಿ ಮ್ಯಾನ್ ಹೋಲ್ ಒಳಗಡೆಯೇ ಬಿದ್ದಿದ್ದಾರೆ.
ಕೂಡಲೇ ಮೂವರನ್ನ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಆದ್ರೂ ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ರಾಮನಗರ ಟೌನ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.








