ಭಾರತೀಯ ಕ್ರೀಡಾಭಿಮಾನಿಗಳು ಐಪಿಎಲ್ ಗಾಗಿ ಕಾಯುತ್ತಿದ್ದಾರೆ. ಇದರ ಮಧ್ಯೆ ಮುಂದಿನ 15 ತಿಂಗಳಲ್ಲಿ ಮನರಂಜನೆ ರಸದೌತಣ ಸಿಗಲಿದ್ದು, ಮೂರು ಕಪ್ ಗಾಗಿ ಭಾರತ ಸನ್ನದ್ಧವಾಗುತ್ತಿದೆ.
ಐಪಿಎಲ್ ಮುಗಿದ ನಂತರ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಟೂರ್ನಿಯು ಜೂನ್ 1 ರಿಂದ ಜೂನ್ 29 ರವರೆಗೆ ನಡೆಯಲಿದೆ. 2025 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಈ ಟೂರ್ನಿಯು ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯಲಿದೆ. ಅಂದರೆ ಮುಂದಿನ ವರ್ಷರಾಂಭಲ್ಲಿಯೇ 10 ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೀಕ್ಷಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ದೊರೆಯಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವು ಜೂನ್ 2025 ರಲ್ಲಿ ನಡೆಯಲಿದೆ. ಈ ಪಂದ್ಯವು ಇಂಗ್ಲೆಂಡ್ ನಲ್ಲಿ ಜರುಗಲಿದೆ. ಈಗಾಗಲೇ ಭಾರತ ಐಸಿಸಿ ಟ್ರೋಫಿ ಗೆದ್ದು 10 ವರ್ಷ ಕಳೆದಿವೆ. ಹೀಗಾಗಿ ಕಪ್ ಗೆಲ್ಲಲಿ ಎಂದು ಭಾರತೀಯರು ಹಾರೈಸುತ್ತಿದ್ದಾರೆ.