ಚಿಕ್ಕಬಳ್ಳಾಪುರ: ಯುವಕನೊಬ್ಬ ಪ್ರೀತಿಸಿದ ಯುವತಿ ನಿರಾಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ವಡ್ರೆಪಾಳ್ಯಾ ಗ್ರಾಮದ ಶ್ರೀಕಾಂತ್(26) ಆತ್ಮಹತ್ಯೆ ಮಡಿಕೊಂಡ ಯುವಕ. ಈ ಯುವಕ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ನನ್ನಿಂದ ಯಾರಿಗೂ ನೋವಾಗುವುದು ಬೇಡ. ಒಂದು ವೇಳೆ ನೋವಾದ್ರೆ ನಾನೇ ನಿಮ್ಮಿಂದ ದೂರವಾಗುತ್ತೇನೆ ಎಂದು ಬರೆದು ತಾನು ಇಷ್ಟಪಟ್ಟ ಹುಡುಗಿಯ ಫೋಟೋ ಶೇರ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಪದವಿ ಮುಗಿಸಿದ್ದ ಶ್ರೀಕಾಂತ್, ಇತ್ತೀಚೆಗೆ ಯುವತಿಯೊಬ್ಬಳನ್ನು ಪ್ರೀತಿಸಿದ್ದ ಎನ್ನಲಾಗಿದ್ದು, ಯುವತಿ ಇದಕ್ಕೆ ಒಪ್ಪಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶ್ರೀಕಾಂತ್, ತಂದೆ-ತಾಯಿಯನ್ನು ಕಳೆದುಕೊಂಡಿದ್ದನಂತೆ. ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತನಾಗಿದ್ದ ಇತ, ಪದವಿ ನಂತರ ಅಭಿನಯ ಕೋರ್ಸ್ ಕಲಿತಿದ್ದ. ತಾನು ಪ್ರೀತಿಸುತ್ತಿದ್ದಾಕೆಯ ಮೇಲೆ ಕವಿತೆಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.