ಕೋವಿಡ್ ನಿಂದ ಪತ್ನಿ ಮೃತಪಟ್ಟಿರುವುದಾಗಿ ನಂಬಿಸಿದ್ದ ಪತಿ.. 5 ದಿನಗಳ ನಂತರ ಭಯಾನಕ ಸತ್ಯ ಬಯಲು
ತಿರುಪತಿ : ತನ್ನ ಪತ್ನಿ ಕೋವಿಡ್ ನಿಂದಾಗಿ ಮೃತಪಟ್ಟಿರೋದಾಗಿ ಆಕೆಯ ಸಂಬಂಧಿಕರು , ಆತ್ಮೀಯರನ್ನ ನಂಬಿಸಿದ್ದ ಖತರ್ನಾಕ್ ಪತಿಯ ಅಸಲಿಯತ್ತು ಸುಮಾರು 5 ದಿನಗಳ ನಂತರ ಬಯಲಾಗಿದೆ.. 27 ವರ್ಷ ಟೆಕ್ಕಿ ಪತ್ನಿಯನ್ನ ಕೊಂದಿದ್ದ ಪತಿ ಆಕೆಯ ಶವವನ್ನ ಸ್ಯೂಟ್ ಕೇಸ್ ನಲ್ಲಿ ಬಚ್ಚಿಟ್ಟಿದ್ದ.. 5 ದಿನಗಳ ನಂತರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದೀಗ ತಿರುಪತಿ ಪೊಲೀಸರು ಆರೋಪಿ ಪತಿಯನ್ನ ಬಂಧಿಸಿದ್ದಾರೆ. ಜೊತೆಗೆ ಸಾಕ್ಷಿ ನಾಶ ಮಾಡಲು ಯತ್ನಿಸಿದ ಆರೋಪವನ್ನೂ ಸಹ ಆತನ ವಿರುದ್ಧ ಜಾರ್ಚ್ಶೀಟ್ನಲ್ಲಿ ಹಾಕಿದ್ದಾರೆ.
ಕ್ಲಾಸ್ ಕೇಳದೆ ವಾಟ್ಸಾಪ್ ನೋಡಿದ್ದಕ್ಕೆ ತಂಗಿಯನ್ನ ಕೊಂದ ಅಣ್ಣ
ಆರೋಪಿ ಶ್ರೀಕಾಂತ್ ರೆಡ್ಡಿ ಎಂಬಾತ ತನ್ನ ಪತ್ನಿ ಭುವನೇಶ್ವರಿಯನ್ನ ಕೊಲೆ ಮಾಡಿದ್ದ. ಆದ್ರೆ ಕೋವಿಡ್ನಿಂದ ಮೃತಪಟ್ಟಿದ್ದಾಗಿ ಆತನ ಬಂಧುಗಳು, ಕುಟುಂಬಸ್ಥರು ಹಾಗೂ ನೆರೆಹೊರೆಯವರಿಗೆ ನಂಬಿಸಿ, ಆಸ್ಪತ್ರೆಯವರ ಮೂಲಕವೇ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾಗಿ ಹೇಳಿಕೊಂಡಿದ್ದ. ಇತ್ತ ಜೂನ್ 23ರಂದು ಪೊಲೀಸರಿಗೆ ಸೂಟ್ ಕೇಸ್ ಒಂದರಲ್ಲಿ 90% ಸುಟ್ಟ ಗಾಯಗಳಿಂದ ಕೂಡಿದ್ದ ಮಹಿಳೆಯ ದೇಹ ಸಿಕ್ಕಿದೆ. ದೇಹವು ಗುರುತು ಸಿಗದ ಮಟ್ಟಿಗೆ ಆಗಿದ್ದು, ವಿಧಿವಿಜ್ಞಾನ ತಂಡದ ಸಹಾಯದಿಂದ ಸತ್ತ ಮಹಿಳೆಯ ವಯಸ್ಸು 25-30 ವರ್ಷ ಇರಬಹುದು ಎಂದು ತಿಳಿದುಬಂದ ನಂತರ ಇನ್ನಷ್ಟು ತನಿಖೆ ಕೈಕೊಂಡ ಪೊಲೀಸರು ದೇಹದ ಅಸಲಿ ಗುರುತು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.