ಡಿಕೆಶಿ ಸಿಎಂ ಆಗಬೇಕೆನ್ನುವುದು ಮೂರ್ಖತನದ ಪರಮಾವಧಿ : ಬಿ.ಸಿ.ಪಾಟೀಲ್

1 min read
D k shivakumar saaksha tv

ಡಿಕೆಶಿ ಸಿಎಂ ಆಗಬೇಕೆನ್ನುವುದು ಮೂರ್ಖತನದ ಪರಮಾವಧಿ : ಬಿ.ಸಿ.ಪಾಟೀಲ್

ಹಾವೇರಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದಷ್ಟು ಬೇಗ ಸಿಎಂ ಆಗಬೇಕು ಅಂತ ಕನಸು ಕಾಣುತ್ತಿದ್ದಾರೆ.

ಇದು ಮೂರ್ಖತನದ ಪರಮಾವಧಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದ್ದ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ನವರ ಪರಿಸ್ಥಿತಿ ನೀರಿನಿಂದ ಹೊರತೆಗೆದ ಮೀನಿನಂತಾಗಿದೆ.

ಮತ್ತೆ ಅಧಿಕಾರಕ್ಕೆ ಬರುತ್ತೇವೆ ಅನ್ನೋ ಕಾಂಗ್ರೆಸ್ ನವರ ಹಗಲುಗನಸು ತಿರುಕನ ಕನಸಾಗುತ್ತೆ ವಿನಃ ಅದು ನನಸಾಗೋದಿಲ್ಲ.

122 ಜನ ಶಾಸಕರನ್ನು ಹೊಂದಿರುವ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿರುವ ರಾಷ್ಟ್ರಪತಿ ಆಡಳಿತ ತರಬೇಕು ಅನ್ನೋರಿಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ.

D k shivakumar saaksha tv

ಅವರಿಗೆ ಒಂದು ರೀತಿಯಲ್ಲಿ ಹತಾಷೆ ಮನೋಭಾವನೆ ಬಂದಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಕಮಿಷನ್ ಸರ್ಕಾರ ಎಂಬ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ಇರಬಹುದು ಅಥವಾ ಕಾಂಗ್ರೆಸ್ ನ ಯಾರೇ ಇರಬಹುದು.

ಅವರು ಕಮೀಷನ್ ತೆಗೆದುಕೊಳ್ಳುವುದರಲ್ಲಿ ಎಕ್ಸ್‍ಪರ್ಟ್. ಹೀಗಾಗಿ ಅವರು ಕಮೀಷನ್ ಬಿಟ್ಟು ಬೇರೆ ಏನೂ ಮಾತನಾಡುವುದಿಲ್ಲ ಎಂದು ಪಾಟೀಲ್ ಟಾಂಗ್ ನೀಡಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd