ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಅಗತ್ಯ ಪೌಷ್ಟಿಕಾಂಶಕ್ಕಾಗಿ ಇವನ್ನು ನಿಯಮಿತವಾಗಿ ಸೇವಿಸಿ; ವಿಟಮಿನ್ ಬಿ -12 ಕುರಿತಾಗಿ ನಿಮಗೆ ತಿಳಿದಿರದ ಅಪರೂಪದ ಮಾಹಿತಿ:-
ದೇಹದ ಆರೋಗ್ಯ ಕಾಪಾಡುವ ಬಹುಮೂಲ್ಯ ವಿಟಮಿನ್ ಬಿ -12 ಹೊಂದಿರುವ ಆಹಾರಗಳನ್ನು ನಿತ್ಯವೂ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ದರೆ ಯಾವ ಆಹಾರದಲ್ಲಿ ವಿಟಮಿನ್ ಬಿ-12 ಇರುತ್ತದೆ ಅನ್ನುವುದನ್ನು ಈ ಲೇಖನದಲ್ಲಿ ನೋಡೋಣ.
ಸಸ್ಯಾಹಾರಿಗಳಿಗೆ ವಿಟಮಿನ್ ಬಿ -12 ಹೊಂದಿರುವ ಆಹಾರದ ಪಟ್ಟಿ:
ತಮ್ಮ ವಿಟಮಿನ್ ಬಿ 12 ಸೇವನೆಯನ್ನು ಹೆಚ್ಚಿಸಲು ಬಯಸುವ ಸಸ್ಯಾಹಾರಿಗಳಿಗೆ, ಕೆಲವು ಉತ್ತಮ ಆಯ್ಕೆಗಳು ಇಲ್ಲಿವೆ
ಮೊಸರು, ಕಡಿಮೆ ಕೊಬ್ಬಿನ ಹಾಲು, ಬಲವರ್ಧಿತ ಹಾಲು, ಗಿಣ್ಣು, ಬಲವರ್ಧಿತ ಸಿರಿಧಾನ್ಯಗಳು, ಪೌಷ್ಠಿಕಾಂಶಯುಕ್ತ ಯೀಸ್ಟ್, ಕೆಲವು ಅಣಬೆಗಳು, ಮೊಟ್ಟೆಗಳು ವಿಟಮಿನ್ ಬಿ -12 ಅನ್ನು ಹೊಂದಿದ್ದರೂ, ಅವು ವಿಶ್ವಾಸಾರ್ಹ ಮೂಲಗಳಲ್ಲ. ಏಕೆಂದರೆ ವಿಟಮಿನ್ ಬಿ -12 ಮಟ್ಟವನ್ನು ಇವು ಗಮನಾರ್ಹವಾಗಿ ಹೆಚ್ಚಿಸುವುದಿಲ್ಲ. ಸಸ್ಯಾಹಾರಿಗಳು ಈ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಮಾತ್ರ ವಿಟಮಿನ್ ಬಿ-12 ಹೆಚ್ಚಿಸಿಕೊಳ್ಳಬಹುದು. ಈ ಆಹಾರಗಳಲ್ಲಿ ಎಷ್ಟು ವಿಟಮಿನ್ ಬಿ -12 ಇದೆ ಎಂಬುದನ್ನು ಕೆಳಗೆ ತಿಳಿಸಿದ್ದೇವೆ.
* 8 ಔನ್ಸ್ ಮೊಸರಿನಲ್ಲಿ ಸುಮಾರು 1.1 ಎಮ್ಸಿಜಿ ವಿಟಮಿನ್ ಬಿ -12 ಅನ್ನು ಹೊಂದಿರುತ್ತದೆ.
* 1 ಕಪ್ ಕಡಿಮೆ ಕೊಬ್ಬಿನ ಹಾಲಿನಲ್ಲಿ 1.2 ಎಂಸಿಜಿ ವಿಟಮಿನ್ ಬಿ -12 ಇರುತ್ತದೆ.
* 1 ಸ್ವಿಸ್ ಚೀಸ್ ನಲ್ಲಿ 0.95 ಎಂಸಿಜಿ ವಿಟಮಿನ್ ಬಿ -12 ಅನ್ನು ಹೊಂದಿರುತ್ತದೆ.
* 1 ದೊಡ್ಡ ಮೊಟ್ಟೆಯಲ್ಲಿ 0.6 ಎಂಸಿಜಿ ವಿಟಮಿನ್ ಬಿ -12 ಇರುತ್ತದೆ. (ಸಸ್ಯಾಹಾರ ಸೇವಿಸುವವರು ಮೊಟ್ಟೆ ಸೇವಿಸುವವರಾದರೇ)
* ಹೆಚ್ಚಿನ ಜೈವಿಕ ಲಭ್ಯತೆ ಇರುವುದರಿಂದ ಬಲವರ್ಧಿತ ಧಾನ್ಯಗಳು ವಿಟಮಿನ್ ಬಿ 12 ಕೊರತೆ ಹೆಚ್ಚಿಸಿಕೊಳ್ಳಲು ಉತ್ತಮ ಆಯ್ಕೆಯಾಗಿದೆ.
* ಬಿ 12 ಚುಚ್ಚುಮದ್ದು ಅಥವಾ ಹೆಚ್ಚಿನ ಪ್ರಮಾಣದ ಮಲ್ಟಿವಿಟಮಿನ್ ಅಥವಾ ಇತರ ಪೂರಕ ಮತ್ತು ವಿಟಮಿನ್ ಬಿ 12 ನೊಂದಿಗೆ ಬಲಪಡಿಸಿದ ಆಹಾರಗಳನ್ನು ತೆಗೆದುಕೊಳ್ಳುವುದರಿಂದ ಕೂಡ ವಿಟಮಿನ್ ಬಿ 12 ಕೊರತೆಯನ್ನು ನೀಗಿಸಿಕೊಳ್ಳಬಹುದು.
* ಅದಾಗ್ಯೂ ವಿಟಮಿನ್ ಬಿ 12 ಪೂರಕಗಳನ್ನು ತೆಗೆದುಕೊಳ್ಳಲು ನೀವು ಬಯಸಿದರೆ, ವೈದ್ಯರ ಸಲಹೆ ಪಡೆಯುವುದು ಅವಶ್ಯಕ. ಇದರಿಂದ ನೀವು ಎಷ್ಟು ಅಂಶವನ್ನು ತೆಗೆದುಕೊಳ್ಳಬೇಕು ಮತ್ತು ನೀವು ತೆಗೆದುಕೊಳ್ಳುತ್ತಿರುವ ಯಾವುದೇ ಔಷಧಿಗಳ ಮೇಲೆ ಅವು ಪರಿಣಾಮ ಬೀರುವುದೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
* ಇನ್ನು ಮಾಂಸಾಹಾರಿಗಳಿಗೆ ತಾಜಾ ಮೀನು ಮತ್ತು ಮೊಟ್ಟೆಯಲ್ಲಿ ವಿಟಮಿನ್ ಬಿ -12 ಹೇರಳವಾಗಿ ಲಭ್ಯವಾಗತ್ತದೆ. ವಿಟಮಿನ್ ಬಿ -12 ಬುದ್ದಿಶಕ್ತಿಯನ್ನು ಚುರುಕುಗೊಳಿಸುತ್ತದೆ. ಹಾಗಾಗಿಯೇ ಮೀನು ತಿನ್ನುವ ತಲೆ ಚುರುಕು ಎನ್ನುವ ಮಾತು ನಮ್ಮಲ್ಲಿ ಜನಜನಿತವಾಗಿದೆ.