ಕೊರೊನಾ ಕೇಸ್ ಅಪ್ ಡೇಟ್.. ಐಪಿಎಲ್ ಕಹಾನಿ.. ಓದಿ ಟಾಪ್ ಫೈವ್ ಸುದ್ದಿ

1 min read
Read TOP 5 NEWS OF THE DAY saaksha tv

ಕೊರೊನಾ ಕೇಸ್ ಅಪ್ ಡೇಟ್.. ಐಪಿಎಲ್ ಕಹಾನಿ.. ಓದಿ ಟಾಪ್ ಫೈವ್ ಸುದ್ದಿ

ಭಾರತದಲ್ಲಿ ಕೊರೊನಾ ಸೋಂಕಿನ ರಣಕೇಕೆ ಮುಂದುವರೆದಿದ್ದು, ಇಂದು ದೇಶದಲ್ಲಿ ಹೊಸದಾಗಿ 2,47,417 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಸೋಂಕು ಪ್ರಮಾಣ ಶೇಕಡಾ 27ರಷ್ಟು ಹೆಚ್ಚಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 11,17,531ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ  84,825 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಇಂದು 18 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಮಂಗಳವಾರ 10,800 ಕೋವಿಡ್ ಕೇಸ್, ಬುಧವಾರ 15,617 ಕೇಸ್, ಇಂದು 18,374 ಜನರಲ್ಲಿ ಕೋವಿಡ್​ ದೃಢಪಟ್ಟಿದ್ದು, ಇದರಿಂದ ಸಿಲಿಕಾನ್​ ಸಿಟಿ ಕೊರೊನಾ ಹಾಪ್ ಸ್ಪಾಟ್ ಆಗಿ ಪರಿಣಮಿಸಿದೆ.

Todays top five News stories saaksha tv

ಹಾಸನ   ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಆರ್ಭಟ ಮುಂದುವರೆದಿದ್ದು, ಇಂದು ಜಿಲ್ಲೆಯಲ್ಲಿ ಬರೋಬ್ಬರಿ 547 ಕೇಸ್ ಗಳು ಪತ್ತೆಯಾಗಿವೆ. ನಿನ್ನೆ ಜಿಲ್ಲೆಯಲ್ಲಿ ಮುನ್ನೂರು ಕೊರೊನಾ ಕೇಸ್ ಗಳು ಪತ್ತೆಯಾಗಿದ್ದವು. ಇಂದು 200 ಕೇಸ್ ಗಳು ಹೆಚ್ಚುವರಿಯಾಗಿ ಪತ್ತೆಯಾಗಿವೆ. ಇಂದಿನ ಕೊರೊನಾ ಸೋಂಕು ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 1599ಕ್ಕೆ ಬಂದಿದೆ.

2022ರ ಐಪಿಎಲ್ ಗಾಗಿ ಕೊರೊನಾ ಸೋಂಕಿನ ಆರ್ಭಟದ ಮಧ್ಯೆಯೂ ತಯಾರಿ ಆರಂಭವಾಗಿದೆ.  ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಬಿಸಿಸಿಐ ಡೆಡ್ ಲೈನ್ ನೀಡಿದೆ. ಜನವರಿ 22 ರಂದು ಸಂಜೆ 5 ಗಂಟೆ ಒಳಗಾಗಿ, ಎರಡೂ ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ಐಪಿಎಲ್ ನ ಸೂಪರ್ ಸ್ಟಾರ್ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಗಳು ವಿಶ್ವ ಮಟ್ಟದಲ್ಲಿ ಅಪರೂಪದ ಘನತೆಯನ್ನು ಸಾಧಿಸಿದೆ. ವಿಶ್ವಾದ್ಯಂತ ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಎಂಗೇಜ್ಮೆಂಟ್ಸ್ ಅಂದರೇ ಶೇರ್‌ಗಳು, ಕಾಮೆಂಟ್‌, ಲೈಕ್ ವಿಷಯದಲ್ಲಿ ಟಾಪ್ 10 ತಂಡಗಳಲ್ಲಿ ಕಾಣಿಸಿಕೊಂಡಿವೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ  820 ಮಿಲಿಯನ್ ಎಂಗೇಜ್ಮೆಂಟ್ಗಳೊಂದಿಗೆ 8ನೇ  ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 752 ಮಿಲಿಯನ್ ಎಂಗೇಜ್ಮೆಂಟ್ಗಳೊಂದಿಗೆ 9ನೇ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd