Tollywood Actor Rajashekhar
ತೆಲುಗಿನ ಖ್ಯಾತ ನಟ ರಾಜಶೇಖರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅಕ್ಟೋಬರ್ 17 ರಂದು ನಟ ರಾಜಶೇಖರ್, ಪತ್ನಿ ಜೀವಿತಾ, ಮಕ್ಕಳಾದ ಶಿವಾನಿ ಮತ್ತು ಶಿವಾತ್ಮಿಕ ಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ಧೃಢವಾಗಿತ್ತು. ಇದಾದ ಬಳಿಕ ರಾಜಶೇಖರ್ ಆರೋಗ್ಯ ಕ್ಷೀಣಿಸುತ್ತಾ ಮತ್ತಷ್ಟು ಗಂಭೀರವಾಯಿತು.
ಹೀಗಾಗಿ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಾಜಶೇಖರ್ ಪುತ್ರಿ ಶಿವಾತ್ಮಿಕ ಸಾಮಾಜಿಕ ಜಾಲತಾಣದಲ್ಲಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಅಪ್ಪ ಕೊರೊನಾ ವೈರಸ್ ಜೊತೆಗೆ ಕಠಿಣವಾದ ಹೋರಾಟ ಮಾಡುತ್ತಿದ್ದಾರೆ’ ಎಂದಿದ್ದಾರೆ.
ಮೂಲಗಳ ಪ್ರಕಾರ, ರಾಜಶೇಖರ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ರಾಜಶೇಖರ್ ಅನ್ನು ವೆಂಟಿಲೇಟರ್ ನ ಸಹಾಯದಲ್ಲಿ ಇರಿಸಲಾಗಿದೆ, ಐಸಿಯು ನಲ್ಲಿ ಸತತ ಚಿಕಿತ್ಸೆಗಳನ್ನು ರಾಜಶೇಖರ್ ಅವರಿಗೆ ನೀಡಲಾಗುತ್ತಿದೆ.
ಇನ್ನೂ ‘ಅಪ್ಪ ಕೊರೊನಾ ಜೊತೆಗೆ ಕಠಿಣವಾದ ಹೋರಾಟದಲ್ಲಿ ನಿರತರಾಗಿದ್ದಾರೆ, ದಯವಿಟ್ಟು ನೀವುಗಳು ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ, ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನಮ್ಮನ್ನು ಗಟ್ಟಿಗೊಳಿಸಬಲ್ಲದು’ ಎಂದು ರಾಜಶೇಖರ್ ಪುತ್ರಿ ಟ್ವೀಟ್ ಮಾಡಿದ್ದಾರೆ.
Tollywood Actor Rajashekhar