ಟಾಲಿವುಡ್ ಡ್ರಗ್ಸ್ ಕೇಸ್.. ವಿರಾಟ್ ವಿದಾಯ.. ಓದಿ ಇಂದಿನ ಪ್ರಮುಖ ಸುದ್ದಿ
ಟಾಲಿವುಡ್ ಡ್ರಗ್ಸ್ ಕೇಸ್ ಮತ್ತೆ ಮುನ್ನಲೆಗೆ ಬಂದಿದೆ. ಡ್ರಗ್ಸ್ ಕೇಸ್ ವಿವರಗಳನ್ನು ನೀಡುವಂತೆ ಇಡಿ, ಎಕ್ಸೈಸ್ ಇಲಾಖೆಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಿನಿತಾರೆಯೆರನ್ನ ವಿಚಾರಣೆ ನಡೆಸಿರುವ ಇಡಿ, ಬ್ಯಾಂಕ್ ಲೇವಾದೇವಿಗಳನ್ನು ಪರಿಶೀಲನೆ ನಡೆದಿದೆ.
ಹೆಚ್ಚಿನ ಮಾಹಿತಿಗಾಗಿ : Tollywood Drugs Case: ಮತ್ತೆ ಮುನ್ನಲೆಗೆ ಬಂದ ಟಾಲಿವುಡ್ ಡ್ರಗ್ಸ್ ಕೇಸ್
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ ಅಭಿಮಾನಿಗಳ ನಡುವೆ ಟ್ವಿಟರ್ ವಾರ್ ಶುರುವಾಗಿದೆ. ಈ ಸ್ಟಾರ್ ಹೀರೋಗಳಿಗೆ ದಕ್ಷಿಣದಲ್ಲಿ ಒಳ್ಳೆಯ ಕ್ರೇಜ್ ಇದೆ. ಆದರೆ ಈ ಇಬ್ಬರ ಅಭಿಮಾನಿಗಳ ಮಧ್ಯೆ ಇದೀಗ ಟ್ವಿಟ್ಟರ್ ವಾರ್ ಶುರುವಾಗಿದೆ.
ಹೆಚ್ಚಿನ ಮಾಹಿತಿಗಾಗಿ : Mahesh Babu-Vijay | ಪ್ರಿನ್ಸ್ ವರ್ಸಸ್ ದಳಪತಿ.. ಟ್ವಿಟ್ಟರ್ ನಲ್ಲಿ ಫ್ಯಾನ್ಸ್ ವಾರ್
ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಎಡವಿದ್ದಾರೆ. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಶೂನ್ಯ ಸುತ್ತಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 15 ಬಾರಿ ಶೂನ್ಯಕ್ಕೆ ಔಟ್ ಆದಂತೆ ಆಗಿದೆ.
ಹೆಚ್ಚಿನ ಮಾಹಿತಿಗಾಗಿ : Virat Kohli : ಶೂನ್ಯ ಸುತ್ತುವುದರಲ್ಲೂ ವಿರಾಟ್ ದಾಖಲೆ
ಅಹಮದಾಬಾದ್ ಮೈದಾನದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಉಪನಾಯಕ ಕೆ.ಎಲ್.ರಾಹುಲ್ ಅವರನ್ನು ಡ್ರಾಪ್ ಮಾಡಲಾಗಿದೆ. ಅವರ ಬದಲಿಗೆ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ನೀಡಿಲಾಗಿದೆ. ಆದ್ರೆ ಪಂದ್ಯದಿಂದ ಕೆ.ಎಲ್.ರಾಹುಲ್ ಅವರನ್ನು ಕೈ ಬಿಟ್ಟಿದ್ದು ಯಾಕೆ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ.
ಹೆಚ್ಚಿನ ಮಾಹಿತಿಗಾಗಿ : K.L.Rahul | ಕಾರಣವಿಲ್ಲದೇ ರಾಹುಲ್ ಕೈ ಬಿಟ್ಟಿದ್ಯಾಕೆ..?
ಅಹಮದಾಬಾದ್ ಮೈದಾನದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೆ ವಿಫಲರಾಗಿದ್ದಾರೆ. ಇನ್ನಿಂಗ್ಸ್ ನ 3.5ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ವಿರಾಟ್ ವಿರುದ್ಧ ನೆಟ್ಟಿಗರು ಮುಗಿಬಿದ್ದಿದ್ದು, ಕೊಹ್ಲಿಗೆ ವಿದಾಯದ ಸಮಯ ಬಂದಾಗಿದೆ ಎನ್ನುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : Virat Kohli : ಶೂನ್ಯಕ್ಕೆ ವಿರಾಟ್ ಕೊಹ್ಲಿ ಔಟ್..!!









