ಬೆಂಗಳೂರು: ಸತತ ಬಂದ್, ಪ್ರತಿಭಟನೆ, ಮುಷ್ಕರದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಇಂದು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಬಿಸಿ ಮುಟ್ಟಿಸಲಿದೆ.
ಮರಾಠ ಪ್ರಾಧಿಕಾರ ವಿರುದ್ಧ ಕಳೆದ ಶನಿವಾರ ನಡೆದ ಕರ್ನಾಟಕ ಬಂದ್, ಕೃಷಿ ಕಾಯ್ದೆ ವಿರುದ್ಧ ಮಂಗಳವಾರ ಆದ ಭಾರತ್ ಬಂದ್, ಬುಧವಾರ ರೈತರ ವಿಧಾನಸೌಧ ಚಲೋ, ಗುರುವಾರ ಸಾರಿಗೆ ನೌಕರರ ಕಾಲ್ನಡಿಗೆ ಜಾಥಾ..ಹೀಗೆ ಸಾಲು ಸಾಲು ಬಂದ್, ಪ್ರತಿಭಟನೆಗಳಿಂದ ಕರ್ನಾಟಕ ಅದರಲ್ಲೂ, ರಾಜಧಾನಿ ಬೆಂಗಳೂರಿನ ನಾಗರಿಕರು ಹೈರಾಣಾಗಿ ಹೋಗಿದ್ದಾರೆ. ಇದೀಗ ಮತ್ತೆ ಇಂದು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‍ಗೆ ಜನರು ಮಾನಸಿಕವಾಗಿ ಸಜ್ಜಾಗಬೇಕಿದ್ದು, ಒಂದು ದಿನದ ಮಟ್ಟಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನು ಮುಂದೂಡುವುದು ಒಳಿತು.

ಬೆಳಗ್ಗೆ 6 ರಿಂದ ಸಂಜೆ 6ರವರಗೆ ಖಾಸಗಿ ಆಸ್ಪತ್ರೆಗಳ ಒಪಿಡಿ ಮತ್ತು ಕ್ಲಿನಿಕ್‍ಗಳನ್ನು ಮುಚ್ಚಲು ಭಾರತೀಯ ವೈದ್ಯಕೀಯ ಸಂಘ ನಿರ್ಧರಿಸಿದೆ.
ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಏಕೆ..?
ಕೇಂದ್ರ ಸರ್ಕಾರದ ಹೊಸ ನಿಯಮಗಳಂತೆ ಇನ್ಮುಂದೆ ಆಯುಷ್ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ನೋಟಿಫಿಕೇಶನ್‍ನಲ್ಲಿ ಈ ವರ್ಷದ ಪಿಜಿ ಕೋರ್ಸ್‍ಗಳಲ್ಲಿ 39 ಜನರಲ್ ಸರ್ಜರಿ ಮತ್ತು 19 ಸ್ಪೆಷಲ್ ಸರ್ಜರಿ ತರಬೇತಿಗೆ ಅವಕಾಶ ಮಾಡಿಕೊಡಲಾಗಿದೆ. ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್‍ನ ನಿರ್ಧಾರದಿಂದ ಅಲೋಪತಿ ವೃತ್ತಿಯು ಕಷ್ಟಕ್ಕೆ ಸಿಲುಕಿದೆ ಅನ್ನೋದು ವೈದ್ಯರ ಅಭಿಪ್ರಾಯವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ರೋಗಿಗಳಿಗೂ ಸಮಸ್ಯೆ ಆಗಲಿದೆ ಅನ್ನೋದು ವೈದ್ಯರ ಆತಂಕ.

ಐಎಂಎ ಕರೆದಿರುವ ಬಂದ್‍ಗೆ ಅನೇಕ ಆಸ್ಪತ್ರೆಗಳು ನೈತಿಕ ಬೆಂಬಲ ನೀಡವೆ. ಬಹುತೇಕ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಈಗಾಗಲೇ ವೈದ್ಯರ ಭೇಟಿಗೆ ಅಪಾಯಿಂಟ್‍ಮೆಂಟ್ ಫಿಕ್ಸ್ ಮಾಡಿಕೊಂಡ ರೋಗಿಗಳಿಗೆ ನಿಗದಿಯಂತೆ ವೈದ್ಯರ ಸೇವೆ ಲಭ್ಯವಾಗಲಿದೆ. fortis , apollo, ಎಂ.ಎಸ್ ರಾಮಯ್ಯ, ಸಾಗರ್ ಆಸ್ಪತ್ರೆಯಂತಹ ದೊಡ್ಡ ಆಸ್ಪತ್ರೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಇಂದು ತುರ್ತು ಸೇವೆ(ಎಮರ್ಜೆನ್ಸಿ) ಮತ್ತು ಕೋವಿಡ್ ಸೇವೆ ಎಂದಿನಂತೆ ಇರಲಿದೆ. ಆದರೆ ಕೆಮ್ಮು, ನೆಗಡಿ, ಜ್ವರ, ರೆಗ್ಯೂಲರ್ ಚೆಕಪ್‍ಗೆಂದು ಆಸ್ಪತ್ರೆಗಳಿಗೆ ಹೋಗುವವರಿಗೆ ಓಪಿಡಿ ಸೇವೆ ಸಿಗಲ್ಲ.
ಸರ್ಕಾರಿ ವೈದ್ಯರ ರಜೆ ರದ್ದು
ಖಾಸಗಿ ವೈದ್ಯರ ಮುಷ್ಕರಕ್ಕೆ ಎಚ್ಚೆತ್ತ ಸರ್ಕಾರ, ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ಇಂದು ರಜೆ ರದ್ದು ಮಾಡಿದೆ. ಕಡ್ಡಾಯವಾಗಿ ಸೇವೆಗೆ ಬರುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








