TOP 10 NEWS – ಈ ದಿನದ ಪ್ರಮುಖ ಸುದ್ದಿಗಳು…!!
01 ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಇಂದು ಪ್ರಜಾಪ್ರಭುತ್ವದ ಹಬ್ಬದ ದಿನ. ಎರಡೂ ರಾಜ್ಯಗಳಲ್ಲಿ ವಿಧಾನಸಭೆಗಾಗಿ ಚುನಾವಣೆ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆಯವರೆಗೆ, ಯುಪಿಯಲ್ಲಿ 35.88% ಮತ್ತು ಪಂಜಾಬ್‌ನಲ್ಲಿ 34.10% ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮತದಾನ ಪ್ರಕ್ರಿಯೆ ಸಂಜೆ 6ರವರೆಗೆ ನಡೆಯಲಿದೆ.
02 ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದಾಗ ಮೋಗಾ ಜಿಲ್ಲೆಯ ಲಂಧೇಕೆ ಗ್ರಾಮದಲ್ಲಿ “ಸಂಶಯಾಸ್ಪದ ಚಟುವಟಿಕೆ” ನಡೆಸಲಾಗುತ್ತಿದೆ ಎಂಬ ಕಾರಣಕ್ಕೆ ಬಾಲಿವುಡ್ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಕುಳಿತಿದ್ದ ಕಾರನ್ನ (SUV) ಪೊಲೀಸರು ವಶಪಡಿಸಿಕೊಂಡಿದ್ದಾರೆ.
03 ಇಂದು ದೇಶದಲ್ಲಿ ಹೊಸದಾಗಿ 19,968 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 48,847 ಜನರು ಗುಣಮುಖರಾಗಿದ್ದಾರೆ. ಸಕ್ರೀಯ ಪ್ರಕರಣಗಳು 2,24,187 ಲಕ್ಷ ದಾಟಿದ್ದು. 673 ಜನರು ಸೋಂಕಿಗೆ ಮರಣ ಹೊಂದಿದ್ದಾರೆ.
04 ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರಪ್ಪ, ಕಾಂಗ್ರೆಸ್ ನಾಯಕರ ಹೋರಾಟಕ್ಕೆಲ್ಲಾ ನಾನು ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ. ನಾನು ದೇಶದ ಹಿತದೃಷ್ಠಿಯಿಂದ ಹೇಳಿಕೆ ನೀಡಿದ್ದೆ. ರಾಷ್ಟ್ರ ಧ್ವಜ ತಾಯಿ ಸಮಾನ ಎಂದು ತಿರುಗೇಟು ನೀಡಿದ್ದಾರೆ.
05 ಸಿಂಧೂರ, ಹಿಜಾಬ್ ಎರಡೂ ನಮ್ಮ ಸಂಸ್ಕೃತಿ ಮತ್ತು ನಂಬಿಕೆ. ಕುಂಕುಮ ಇಡುವುದರಿಂದ – ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆ ಇಲ್ಲ. ಯಾರದೋ ಷಡ್ಯಂತ್ರಕ್ಕೆ ನಮ್ಮ ಸಂಸ್ಕೃತಿ ಮತ್ತು ನಂಬಿಕೆಗಳು ಬಲಿಯಾಗಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
06 ಪಶ್ಚಿಮ ಬಂಗಾಳ : ದೇಶಾದ್ಯಂತ ಕೋವಿಡ್ ಗೂ ಮುಂಚೆ ದೊಡ್ಡ ಹಲ್ ಚಲ್ ಹೆಬ್ಬಿಸಿ ಪ್ರತಿಭಟನೆಗಳು , ಹಿಂಸಾಚಾರಕ್ಕೆ ನಾಂದಿ ಹಾಡಿದ್ದ ವಿವಾದಾತ್ಮಕ ಕಾಯ್ದೆ ಸಿಎಎ ವಿರೋಧಿ ಹೋರಾಟಗಾರ ಹಾಗೂ ವಿದ್ಯಾರ್ಥಿ ಮುಖಂಡ , ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಅನೀಶ್ ಖಾನ್ ನಿಗೂಡವಾಗಿ ಸಾವನಪ್ಪಿದ್ದಾರೆ.
07 ಉಕ್ರೇನ್‌ನಲ್ಲಿ ಮುಂದುವರಿದ ಹೆಚ್ಚಿನ ಬಿಕ್ಕಟ್ಟು ಮತ್ತು ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು, ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಭಾರತೀಯ ಪ್ರಜೆಗಳಿಗೆ ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸಲಹೆಯನ್ನು ನೀಡಿದೆ.
08 ಸುಮಾರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಫೆಬ್ರವರಿ 19 ರಂದು ಸರಳವಾಗಿ ಮದುವೆಯಾಗಿದ್ದಾರೆ. ಫರ್ಹಾನ್ ಅಖ್ತರ್ ಅವರ ತಂದೆ ಜಾವೇದ್ ಅಖ್ತರ್ ಹಾಗೂ ತಾಯಿ ಶಬಾನಾ ಅಜ್ಮಿ ಅವರ ನಿವಾಸದಲ್ಲಿ ವಿವಾಹ ಸಮಾರಂಭ ನೆರವೇರಿದೆ.
09 ಅಂಡರ್-19 ವಿಶ್ವಕಪ್ ಹೀರೋ ಯಶ್ ಧೂಳ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಚೊಚ್ಚಲ ರಣಜಿ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಯಶ್ ಶತಕ ಸಿಡಿಸಿದ್ದಾರೆ. ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ದೆಹಲಿ ಮತ್ತು ತಮಿಳುನಾಡು ಮುಖಾಮುಖಿಯಾಗಿದ್ದವು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದರೆ, ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಯಶ್ ಧುಲ್ ಎರಡನೇ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.
10 ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ನಿವೃತ್ತಿ ಬಗ್ಗೆ ಯೋಚಿಸುವಂತೆ ಸಲಹೆ ನೀಡಿರುವುದಾಗಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಿಳಿಸಿದ್ದಾರೆ. ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಹಾ ಅವರನ್ನ ಬಿಸಿಸಿಐ ಪರಿಗಣಿಸಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಸಹಾ ಅಸಮಾಧಾನ ಹೊರಹಾಕಿದ್ದಾರೆ.








