- ಕೊರೊನಾ ಮೂರನೇ ಅಲೆಯ ನಡುವೆ ದೇಶದಲ್ಲಿ ಗಣರಾಜ್ಯೋತ್ಸವ ಮನೆ ಮಾಡಿತ್ತು. ದೆಹಲಿಯ ರಾಜಫಥದಲ್ಲಿ ಜಗತ್ತಿನಲ್ಲಿ ಅತಿದೊಡ್ಡ ಸೇನೆ ಹೊಂದಿರುವ ಭಾರತ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿತು. ಈ ಪರೇಡ್ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಹಲವರು ಭಾಗವಹಿಸಿದ್ದರು. Top 10-news-in-kannada
- ಇಂದು ದೆಹಲಿಯಲ್ಲಿ ನಡೆದ ಗಣರಾಜ್ಯೊತ್ಸವದ ರಾಜಪಥದ ಪರೆಡ್ ನಲ್ಲಿ ಮೈಸೂರಿನ ಪ್ರಮೀಳಾ ಕುನ್ವರ್ ಎನ್ ಸಿ ಸಿ ತಂಡದ ನೇತೃತ್ವ ವಹಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಪ್ರಮೀಳಾ ಎನ್ ಸಿ ಸಿ ಕೆಡಟರ್ ಗಳ ಮುಂದಾಳತ್ವವನ್ನ ವಹಿಸಿದ್ದರು.
- ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,85,194 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನೂ ಸಕ್ರೀಯ ಪ್ರಕರಣಗಳು 22,23,018 ಇದ್ದು, 24 ಗಂಟೆಯಲ್ಲಿ 2,99,073 ಮಂದಿ ಚೇತರಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ 665 ಜನ ಕೊರೊನಾಕ್ಕೆ ಸಾವನ್ನಪ್ಪಿದ್ದಾರೆ.
- ಬಜೆಟ್ಗೂ ಮೊದಲು ಸರ್ವಪಕ್ಷಗಳ ಸಭೆಯನ್ನ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕರೆದಿದ್ದಾರೆ. ಈ ಸಭೆ ವರ್ಚುಯಲ್ ಮೂಲಕ ಜನವರಿ 31 ರಂದು ನಡೆಯಲಿದೆ. ಕಲಾಪಗಳು ಸುಗಮವಾಗಿ ನಡೆಯುವಂತೆ ವಿರೋಧ ಪಕ್ಷಗಳ ಸಹಕಾರವನ್ನು ಕೇಂದ್ರ ಸಚಿವರು ಕೋರಲಿದ್ದಾರೆ.
- ಕೊರೊನಾ ಸೋಂಕು ಕಡಿಮೆಯಾಗಲಿ ಅಥವಾ ಜಾಸ್ತಿಯಾಗಲಿ ಫೆಬ್ರವರಿ ಮೊದಲ ವಾರದಿಂದಲೇ ಬೆಂಗಳೂರಿನಲ್ಲಿ ಶಾಲೆಗಳು ಆರಂಭವಾಗುತ್ತವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಕಳೆದ ವಾರದ ಕೋವಿಡ್ ಸಂಬಂಧ ನಡೆದ ಸಭೆಯಲ್ಲಿ ಬೆಂಗಳೂರಿನಲ್ಲಿ ಶಾಲೆ ಆರಂಭಿಸುವ ಬಗ್ಗೆ ಚರ್ಚಿಸಲಾಗಿತ್ತು. ಈಗ ಬೆಂಗಳೂರಿನಲ್ಲಿ ಪ್ರತಿದಿನ ಕೋವಿಡ್ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಹೀಗಾಗಿ ಶಾಲೆಗಳನ್ನು ಓಪನ್ ಮಾಡುವ ಸಾಧ್ಯತೆಗಳು ಜಾಸ್ತಿ ಇದೆ ಎಂದಿದ್ದಾರೆ.
- ಬಿಜೆಪಿಯನ್ನ ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯನವರು ಸುಮ್ಮನೆ ಹುಳ ಬಿಡುವ ಕೆಲಸ ಮಾಡ್ತಿದ್ದಾರೆ. ಅದು ನಿಜವಾಗಿದ್ದರೆ, ಧೈರ್ಯವಿದ್ದರೆ ಹೆಸರು ಬಹಿರಂಗ ಪಡಿಸಿಲಿ ಎಂದು ವಿಪಕ್ಷ ನಾಯಕರಿಗೆ ಸವಾಲು ಹಾಕಿದರು.
- ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ನಲ್ಲಿ ಅಪ್ಪು ಇಂಡಿಯನ್ ಆರ್ಮಿ ಪಾತ್ರದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿ ಅಪ್ಪು ಅಭಿಮಾನಿಗಳು ಖುಷ್ ಆಗಿದ್ದಾರೆ.
- ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್’ ಸಿನಿಮಾವನ್ನು ಥಿಯೇಟರ್ನಲ್ಲಿ ರಿಲೀಸ್ ಮಾಡದೆ ಇರಲು ಸಿನಿಮಾತಂಡ ನಿರ್ಧಾರ ಮಾಡಿದೆಯಂತೆ. ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆಯಂತೆ. ಸಿನಿಮಾಗೆ ನೆಟ್ ಫ್ಲಿಕ್ಸ್ 400 ಕೋಟಿ ರೂಪಾಯಿ ಆಫರ್ ನೀಡಿದೆಯಂತೆ.
- ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ 873 ಅಂಕಗಳೊಂದಿಗೆ ಪಾಕಿಸ್ತಾನದ ನಾಯಕ ಬಾಬರ್ ಅಝಮ್ ಅಗ್ರಸ್ಥಾನದಲ್ಲಿದ್ದರೇ, 836 ಅಂಕಗಳೊಂದಿಗೆ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ.
- ಐಸಿಸಿ ಟಿ 20 ಮಹಿಳಾ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾದ ಆಟಗಾರ್ತಿ ಶಫಾಲಿ ವರ್ಮಾ ಘರ್ಜಿಸಿದ್ದಾರೆ. ಇತ್ತೀಚೆಗೆ ಪ್ರಕಟವಾದ ಬ್ಯಾಟ್ಸ್‌ವುಮನ್ ಶ್ರೇಯಾಂಕದಲ್ಲಿ ಶಫಾಲಿ 726 ಅಂಕಗಳೊಂದಿಗೆ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಮತ್ತೊಬ್ಬ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ 709 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.
ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ. ಗಣೇಶ ಚತುರ್ಥಿಯನ್ನು ಎಲ್ಲಾ ದೇವರುಗಳ...