ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಟಾಪ್ ಸಿನಿಮಾ ನ್ಯೂಸ್ : LATEST UPDATES

Namratha Rao by Namratha Rao
February 14, 2021
in Cinema, Newsbeat, ಮನರಂಜನೆ
cinema
Share on FacebookShare on TwitterShare on WhatsappShare on Telegram

ಟಾಪ್ ಸಿನಿಮಾ ನ್ಯೂಸ್ : LATEST UPDATES

ವ್ಯಾಲೆಂಟೈನ್ಸ್ ಡೇಗೆ ಮತ್ತೊಮ್ಮೆ ರಿಲೀಸ್ ಆಗ್ತಿದೆ ನೋಡಿ ‘ದಿಯಾ’..!

2020ರಲ್ಲಿ ರಿಲೀಸ್ ಆಗಿ ಪ್ರೇಕ್ಷರಿಂದ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಮತ್ತೊಮ್ಮೆ ರಿಲೀಸ್ ಆಗಿದ್ದ 2 ಸಿನಿಮಾಗಳು ಅಂದ್ರೆ ಅವು ಲವ್ ಮಾಕ್ಟೇಲ್ ಮತ್ತು ದಿಯಾ.. ಇದೀಗ ನಾಳೆ ಅಂದ್ರೆ ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನಾಚರಣೆಯಿರುವ ಹಿನ್ನೆಲೆ ಮತ್ತೊಮ್ಮೆ ಸೂಪರ್ ಹಿಟ್ ಸಿನಿಮಾ ದಿಯಾ ಮತ್ತೊಮ್ಮೆ ರಿಲೀಸ್ ಆಗಲಿದೆ. ಪ್ರೇಮಿಗಳ ದಿನಾಚರಣೆಯ ವಿಶೇಷವಾಗಿ ಸಿನಿಮಾವನ್ನು ರಿ ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ನಡೆಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ಪೃಥ್ವಿ ಅಂಬರ್ ನೀವು ಗೆಲ್ಲಿಸಿದ ಸಿನಿಮಾ ದಿಯಾ ಸಿನಿಮಾ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಪ್ರೇಕ್ಷಕರ ಮತ್ತು ಚಿತ್ರಮಂದಿರಗಳ ಮಾಲಿಕರ ಬೇಡಿಕೆ ಮೇರೆಗೆ ಸಿನಿಮಾ ಮತ್ತೊಮ್ಮೆ ತೆರೆಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ನೋಡಿ ಎಂದು ಹೇಳಿದ್ದಾರೆ.

Related posts

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

August 1, 2026
majestic-railway-station-passenger-problem-track-maintenance-information-issue

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

August 1, 2026

ಧೂಮ್ ನಲ್ಲಿ ಈ ಬಾರಿ ಖಳನಾಯಕರಾಗಿ ಬರುತ್ತಿರೋದು ಬಾಲಿವುಡ್ ನ ‘ಬಾದ್ ಷಾ’ ‘ಡಿಪ್ಪಿ’..!

ಧೂಮ್… ಬಾಲಿವುಡ್ ಸಿನಿಮಾದ ಈ ಸೀರೀಸ್ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದೆ. ಈ ಸಿನಿಮಾದ ಕಥೆ ಆಕ್ಷನ್ ಸೀನ್ಸ್ ಥ್ರಿಲ್ಲಿಂಗ್ ಎಲಿಮೆಂಟ್ಸ್ ಮ್ಯೂಸಿಕ್ ಎಲ್ಲವೂ ಪ್ರೇಕ್ಷಕರನ್ನ ಸಖತ್ ಥ್ರಿಲ್ ಗೊಳಿಸುತ್ತೆ. ಖಳನಾಯಕರನ್ನೇ ಹೀರೋಗಳ ರೀತಿ ತೋರಿಸೋದು ಈ ಸಿನಿಮಾದ ವಿಶೇಷತೆ ವಿಶೇಷತೆ. ಈ ಸಿನಿಮಾದ ಸೀರೀಸ್ ಗಳನ್ನ ಇಷ್ಟ ಪಡೆದೇ ಇರೋ ಜನರೇ ಇಲ್ಲ ಅನ್ಸುತ್ತೆ. ಇನ್ ಫ್ಯಾಕ್ಟ್ ಹಾಲಿವುಡ್ ರೇಂಜ್ ಗೆ ಈ ಸೀರೀಸ್ ಮೂಡಿಬರುತ್ತೆ. ಅದೇ ಪ್ರೇಕ್ಷಕರು ಆಕರ್ಷಿತರಾಗುವುದಕ್ಕೆ ಪ್ರಮುಖ ಕಾರಣವೂ ಇರಬಹುದು. ಅದ್ರಲ್ಲೂ ಈ ಸೀರೀಸ್ ನಲ್ಲಿ ನಾಯಕರು ಬದಲಾಗುತ್ತಲೇ ಇರುತ್ತಾರೆ. ಆದ್ರೆ ಹೆಚ್ಚು ಜನರಿಗೆ ಇಷ್ಟವಾದ , ಅವರಿಷ್ಟ ಪಟ್ಟ ಸೀರೀಸ್, ನಟ, ಅಂದ್ರೆ ಅದು ಹೃತಿಕ್ ರೋಷನ್ ಇದ್ದ ಸೀರೀಸ್ ಎನ್ನಬಹುದು. ಹೌದು ಹೃತಿಕ್ ಇದ್ದಾಗ ಅದ್ರಲ್ಲೂ ಅವರಿಗೆ ನಾಯಕಿಯಾಗಿ ಆಕ್ಷನ್ ಪ್ರಿನ್ಸ್ ಗೆ ಆಕ್ಷನ್ ಪ್ರಿನ್ಸಸ್ ಆಗಿದ್ದ ಐಶ್ವರ್ಯಾ ಇದ್ದ ಸೀಸನ್ ಜನರಿಗೆ ಬಹಳ ಇಷ್ಟವಾಗಿತ್ತು.

ಖ್ಯಾತ ಖಳನಟ ಸತ್ಯಜಿತ್ ವಿರುದ್ಧ ಸ್ವಂತ ಮಗಳಿಂದಲೇ ದೂರು ದಾಖಲು..!

ಕನ್ನಡದ ಖ್ಯಾತ ನಟ ಸತ್ಯಜಿತ್ ವಿರುದ್ಧ ಪುತ್ರಿಯೇ ಪೊಲೀಸ್ ಠಾಣೆಯಲ್ಲಿ ಮಾನಸಿಕ ಹಿಂಸೆ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ನಟ ಸತ್ಯಜಿತ್ ಪುತ್ರಿ ಅಖ್ತರ್ ಸ್ವಹಾನಾ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ತಂದೆ ಹಾಗೂ ಅಣ್ಣಂದಿರು ನನ್ನನ್ನು ಹಣಕ್ಕಾಗಿ ಪೀಡುತ್ತಿದ್ದಾರೆ. ನಾನು ಗರ್ಭಿಣಿ ಆಗಿದ್ದು ಈ ಸಮಯದಲ್ಲಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದ್ರೆ ಈ ಬಗ್ಗೆ ಸತ್ಯಜಿತ್ ಪುತ್ರ ಆಕಾಶ್ ಸತ್ಯಜಿತ್ ಸ್ಪಷ್ಟನೆ ನೀಡಿದ್ದು, ಅಪ್ಪ ಹಣಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ. ಆಕೆಯೇ ತಂದೆಯ ಮೇಲೆ ನಮ್ಮ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ಆಕೆಯ ಶಿಕ್ಷಣದ ಸಾಲ ತೀರಿಸಲು ನಮ್ಮ ತಂದೆ ಸುಮಾರು ಮನೆ ಮಾರಿ 50 ಲಕ್ಷ ಹಣ ಪಾವತಿಸಿದ್ದಾರೆ. ಆದರೆ ಈಗ ತುಸು ಸಹಾಯ ಕೇಳಿದ್ದಕ್ಕೆ ಆಕೆ ಅಪ್ಪನ ವಿರುದ್ಧ ತಿರುಗಿ ಬಿದ್ದಿದ್ದಾಳೆ, ಅಪ್ಪನ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಈ ವಯಸ್ಸಿನಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿದ್ದಾರೆ ಎಂದಿದ್ದಾರೆ.

ನನ್ನ ಕೈಲಿ ಹಲವು ಕನ್ನಡ , ತಮಿಳು ಸಿನಿಮಾಗಳ ಪ್ರಾಜೆಕ್ಟ್ ಗಳಿವೆ – ಸಂಜನಾ ಗಲ್ರಾನಿ..!

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾಗ ಸಂಜನಾ ಸದಾ ಸುದ್ದಿಯಲ್ಲೇ ಇದ್ರು. ಇಸ್ಲಾಂ ಧರ್ಮಕ್ಕೆ ಮತಾಂತರ ಡ್ರಗ್ ಡೀಲಿಂಗ್ ಹೀಗೆ ಎಲ್ಲಾ ವಿಚಾರವಾಗಿಯೂ ಭಾರೀ ಚರ್ಗೆ ಗ್ರಾಸವಾಗಿದ್ರು. ಇದೀಗ ಜಾಮೀನಿನ ಮೇಲೆ ಹೊರಬಂದಿರುವ ಸಂಜನಾ ಈ ಎಲ್ಲಾ ವಿಚಾರವಾಗಿ, ಹಾಗೂ ಮುಂದಿನ ಪ್ಲಾನ್ ಗಳ ಕುರಿತಾಗಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ಸಂಜನಾ ನನ್ನ ಮುಂದಿನ ಹಾದಿ ಬಹಳ ಕಠಿಣವಾಗಿರಲಿದೆ ಎಂಬ ವಿಚಾರ ನನಗೆ ತಿಳಿದಿದೆ. ನನಗೆ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ನಗುವಿನೊಂದಿಗೆ, ಪ್ರೀತಿಯೊಂದಿಗೆ ಎದುರಿಸಲಿದ್ದೇನೆ. ನನಗೆ ನ್ಯಾಯಾಂಗದಲ್ಲಿ ವಿಶ್ವಾಸವಿದೆ. ನಾನು ಗೆಲುವು ಸಾಧಿಸಲಿದ್ದೇನೆ ಎಂದಿದ್ದಾರೆ.

ಇದೇ ವೇಳೆ ಮದುವೆಯ ಊಹಾಪೋಹಗಳ ಬಗ್ಗೆ ಉತ್ತರ ನೀಡಿದ ಅವರು ಹೌದು, ನಾನು ಎಂಗೇಜ್ ಆಗಿದ್ದೇನೆ. ಲಾಕ್ ಡೌನ್ ಸಮಯದಲ್ಲಿ ಸರಳ ಸಮಾರಂಭದಲ್ಲಿ ಎಂಗೇಜ್ ಮೆಂಟ್ ಮುಗಿದಿದೆ. ಈ ವಿಷಯವನ್ನು ನನ್ನ ಬಂಧುಗಳಿಗೆ, ಸ್ನೇಹಿತರಿಗೆ ಸಹ ತಿಳಿಸಲಾಗಿರಲಿಲ್ಲ. ಶೀಘ್ರದಲ್ಲಿಯೇ ಮದುವೆ ಆಗಲಿದ್ದೇನೆ ಎಂದಿದ್ದಾರೆ. ಯಾವುದಾದರೂ ಚಾರಿಟೇಬಲ್ ಸೊಸೈಟಿಯಲ್ಲಿ ಸರಳವಾಗಿ ಮದುವೆ ನಡೆಯಲಿದೆ. ಅಲ್ದೇ ನಾನು ಅಧ್ಯಾತ್ಮದ ಕಡೆ ಗಮನವಹಿಸುತ್ತಿದ್ದೇನೆ. ಕೆಲವು ತಿಂಗಳುಗಳಿಂದ ನಮಾಜು ಓದುವುದು ಅಭ್ಯಾಸ ಮಾಡಿಕೊಂಡಿದ್ದೇನೆ. ನಾನು ಕರ್ಮ ಮತ್ತು ದೇವರಲ್ಲಿ ನಂಬಿಕೆ ಇಟ್ಟವಳು, ಎಲ್ಲ ಧರ್ಮಗಳನ್ನು ನಾನು ಸಮಾನವಾಗಿ ಗೌರವಿಸುತ್ತೇನೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನನ್ನ ವೈಯಕ್ತಿಕ ಆಯ್ಕೆ. ನನ್ನ ಈ ನಿರ್ಧಾರವನ್ನು ರಾಜಕೀಯಗೊಳಿಸುವುದು, ವಿಮರ್ಶೆಗೊಳಪಡಿಸುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ.

ಇದೇ ವೇಳೆ ಸಿನಿಮಾ ಭವಿಷ್ಯದ ಬಗ್ಗೆ ಉತ್ತರ ನೀಡಿರುವ ಸಂಜನಾ ನನ್ನ ಕೈಯಲ್ಲಿ ಕನ್ನಡದ ಹಾಗೂ ತಮಿಳಿನ ಕೆಲವು ಸಿನಿಮಾಗಳ ಆಫರ್ ಗಳು ಇವೆ. ಅವುಗಳನ್ನು ಮೊದಲು ಮುಗಿಸಬೇಕಿದೆ. ಅದಾದ ನಂತರ ಹಿಂದಿಯ ಒಂದು ವೆಬ್ ಸರಣಿಯಲ್ಲಿ ನಟಿಸಲಿದ್ದೇನೆ. ಇನ್ನೊಂದು ಹೊಸ ಸಿನಿಮಾದ ಆಫರ್ ಬಂದಿದೆ ಎಂದಿದ್ದಾರೆ.

ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ

ಬೆಂಗಳೂರು : ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನಟ ಮಯೂರ್ ಪಟೇಲ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.

ಮಯೂರ್ ಪಟೇಲ್ ಅವರು ಬೆಂಗಳೂರು ಹೊರವಲಯದ ಬೇಗೂರು ಸಮೀಪ ಪರಂಗಿಪಾಳ್ಯದಲ್ಲಿ ಸುಬ್ರಹ್ಮಣ್ಯಂ ಎಂಬುವರಿಂದ ನಿವೇಶನ ಖರೀದಿಗೆ ಮುಂದಾಗಿದ್ದರು.

ಕಳೆದ ಜನವರಿ 22 ರಂದು ಗೆಳೆಯನೊಂದಿಗೆ ಮಯೂರ್ ಸೈಟ್ ನೋಡಲು ಹೋಗಿದ್ದರು. ಆಗ ಮಯೂರ್ ಕರಾರು ಮಾಡಿಕೊಂಡಿದ್ದ ಸೈಟ್ ನಲ್ಲಿ ಕಾಂಪೌಂಡ್ ಇತ್ತು.ಈ ನಿವೇಶನ ಅನಂತರಾಮ ರೆಡ್ಡಿ ಮತ್ತು ಮಂಜಣ್ಣ ಎಂಬವರಿಗೆ ಸೇರಿದ್ದು ನೀವು ಇಲ್ಲಿಗೆ ಬಂದರೆ ಸುಮ್ಮನೆ ಬಿಡಲ್ಲ ಎಂದು ಅವಾಜ್ ಹಾಕಲಾಗಿದೆ.

ಅಲ್ಲದೇ, ನಿವೇಶನದ ನಕಲಿ ದಾಖಲೆ ಸೃಷ್ಟಿಸಿ ಜೀವಬೆದರಿಕೆ ಹಾಕಲಾಗಿದೆ ಎನ್ನಲಾಗಿದ್ದು, ಈ ಕುರಿತಾಗಿ ಮಯೂರ್ ಪಟೇಲ್ ಅವರು ಹೆಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BollywoodCinemafilmHOllywoodKollywoodmollywoodSandalwoodTollywood
ShareTweetSendShare
Join us on:

Related Posts

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

by admin
August 1, 2026
0

ಭಾರತದ ಹೇವಿ ವೇಯ್ಟ್ ವೇಟ್ ಲಿಫ್ಟರ್ ಲವ್ ಪ್ರೀತ್ ಸಿಂಗ್ ಅವರು 2026ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ದಾಖಲೆಯ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾನೆ. ವೃತ್ತಿ ಜೀವನದಲ್ಲಿ...

majestic-railway-station-passenger-problem-track-maintenance-information-issue

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

by admin
August 1, 2026
0

ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದಾರೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು 10 ಟ್ರ್ಯಾಕ್‍ಗಳಿವೆ. ಈ ಪೈಕಿ 2...

smita-dey-india-first-commonwealth-judo-gold-medalist-story

cwg-2026 : ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..?

by admin
July 31, 2026
0

ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..? ಈಕೆ ತ್ರಿಪುರಾದ ಹುಡುಗಿ. ಕಾಮನ್‍ವೆಲ್ತ್ ಗೇಮ್ಸ್‍ನ ಜೂಡೋ ವಿಭಾಗದಲ್ಲಿ ಚಿನ್ನದ ಗೆದ್ದ ಹುಡುಗಿ....

duleep-trophy-vaibhav-suryavanshi-east-zone-vice-captain-controversy

Cricket – ದುಲೀಪ್ ಟ್ರೊಫಿ – ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..?

by admin
July 31, 2026
0

ದುಲೀಪ್ ಟ್ರೊಫಿ- ಪೂರ್ವ ವಲಯಕ್ಕೆ ವೈಭವ್ ಉಪನಾಯಕ..! ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..? ಕೇವಲ 8 ದೇಶಿಯ ಪಂದ್ಯಗಳನ್ನು ಆಡಿರುವ ವೈಭವ್‍ಗೆ ಉಪನಾಯಕ...

devara-konayalli-irabarada-eradu-vastugalu-vastu-tips-kannada

Astro- ನಿಮ್ಮ ದೇವರ ಕೋಣೆಯಲ್ಲಿ ಈ ಎರಡು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ ಇದರಿಂದ ದೋಷ ಉಂಟಾಗುವುದು ಖಚಿತ.

by admin
July 31, 2026
0

ಮನುಷ್ಯನ ದೇಹದಲ್ಲಿ ಹೃದಯವು ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಮ್ಮ ಮನೆಯಲ್ಲಿ ದೇವರ ಕೋಣೆ ಎಂಬುದು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪವಿತ್ರವಾದ ಸ್ಥಳದಲ್ಲಿ ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram