ಪ್ರಮುಖ ರಾಷ್ಟ್ರೀಯ ಅಂತರಾಷ್ಟ್ರೀಯ ಸುದ್ದಿಗಳು : Latest Updates

1 min read

ಪ್ರಮುಖ ರಾಷ್ಟ್ರೀಯ ಅಂತರಾಷ್ಟ್ರೀಯ ಸುದ್ದಿಗಳು : Latest Updates

ಇಂದೋರ್ ನಲ್ಲಿ ಭಿಕ್ಷೆ ಬೇಡುತ್ತಿದ್ದಾನೆ ಕೋಟ್ಯಾಧಿಪತಿ

ಇಂದೋರ್ ನಲ್ಲಿ ಭಿಕ್ಷೆ ಬೇಡುತ್ತಿದ್ದಾನೆ ಕೋಟ್ಯಾಧಿಪತಿ

ಮಧ್ಯಪ್ರದೇಶ : ನಾವು ಬೀದಿಗಳಲ್ಲಿ ಎಷ್ಟೋ ಮಂದಿ ಭಿಕ್ಷುರನ್ನ ನೋಡುತ್ತಿರುತ್ತೇವೆ. ಅವರಿಗೆ ನಮ್ಮ ಕೈಯಲ್ಲಾದ ಸಹಾಯ ಮಾಡುತ್ತೇವೆ.

ಆದ್ರೆ ಅವರ ಯಾರು..? ಅವರ ಹಿನ್ನೆಲೆ ಏನು ಅಂತಾ ವಿಚಾರಿಸೋಕೆ ಹೋಗಲ್ಲ. ಆದ್ರೆ ಇಂದೋರ್ ನಲ್ಲಿ ಹೀಗೆ ವಿಚಾರಿಸಿದ ಎನ್ ಜಿಒ ಕಾರ್ಯಕರ್ತರಿಗೆ ಬಿಗ್ ಶಾಕ್ ಎದುರಾಗಿದೆ.

ಯಾಕೆಂದ್ರೆ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧ ಕೋಟ್ಯಾಧಿಪತಿಯಾಗಿದ್ದ.

ಹೌದು..! ಭಿಕ್ಷುಕನಾಗಿರುವ ವೃದ್ಧನ ಹೆಸರು ರಮೇಶ್ ಯಾದವ್. ಈತ ಇಂದೋರ್ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದನ್ನ ಕಂಡ ಎನ್ ಜಿಒ ಕಾರ್ಯಕರ್ತರು ನಿರ್ಗತಿಕರಿಗೆ ಮೀಸಲಾಗಿರುವ ಆಶ್ರಮಕ್ಕೆ ಕರೆತಂದು ಆರೈಕೆ ಮಾಡುತ್ತಿದ್ದರು.

ನಂತರ ಆತನಿಂದ ಕುಟುಂಬಸ್ಥರ ಮಾಹಿತಿ ಪಡೆದು ಅವರನ್ನ ಸಂಪರ್ಕಿಸಿದಾಗ ರಮೇಶ್ ಕೋಟ್ಯಾಧಿಪತಿ ಅಂತಾ ತಿಳಿದುಬಂದಿದೆ.

ರಮೇಶ್ ಅವರಿಗೆ ದೊಡ್ಡ ಬಂಗಲೆ ಮತ್ತು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಅನ್ನೋದು ತಿಳಿಯುತ್ತಿದ್ದಂತೆ ಎನ್ ಜಿಜಿ ಕಾರ್ಯಕರ್ತರು ಬೆರಗಾಗಿದ್ದಾರೆ.

ರಮೇಶ್ ಗೆ ಕುಡಿತದ ಚಟವಿದ್ದು, ಅದನ್ನು ತ್ಯಜಿಸಲು ಒಪ್ಪದ ಕಾರಣ ಮನೆಯಿಂದ ಹೊರದಬ್ಬಲ್ಪಟ್ಟಿದ್ದರಂತೆ. ಇದೀಗ ರಮೇಶ್ ಅವರು ಕುಡಿತ ಬಿಡಲು ನಿರ್ಧರಿಸಿದ್ದು, ಸದ್ಯ ಮನೆ ಸೇರಿದ್ದಾರೆ ಅಂತ ತಿಳಿದುಬಂದಿದೆ.

ಪೆಟ್ರೋಲ್ ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತಕ್ಕೆ ಕೇಂದ್ರ ಸಜ್ಜು…! ಚುನಾವಣೆ ತಂತ್ರನಾ..!

ಪೆಟ್ರೋಲ್ ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತಕ್ಕೆ ಕೇಂದ್ರ ಸಜ್ಜು…! ಚುನಾವಣೆ ತಂತ್ರನಾ..!

ನವದೆಹಲಿ: ಕಳೆದ ಕೆಲ ದಿನಗಳಿಂದ ರಾಕೆಟ್ ಸ್ಪೀಡ್ ನಲ್ಲಿ ಏರಿಕೆಯಾಗುತ್ತಲೇ ಇರುವ ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರ ಶತಕ ದಾಟಿದ್ದು, ವಾಹನ ಸಾವಾರರಿಗೆ ಶಾಕ್ ಮೇಳೆ ಸಾಕ್ ಎದುರಾಗಿದೆ. ಆದ್ರೆ ಇದೀಗ ಹಲವು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ. ಇದೇ ಕಾರಣಕ್ಕೆ ತಂತ್ರಗಾರಿಕೆ ಹೂಡುತ್ತಿರುವ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು 5 ರೂ. ವರೆಗೆ ತಗ್ಗಿಸುವ ಚಿಂತನೆ ನಡೆಸಿದೆ ಎನ್ನಲಾಗ್ತಿದೆ. ಹೌದು ಶೀಘ್ರದಲ್ಲೇ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಚುನಾವಣೆಗೂ ಮೊದಲೇ ಕೇಂದ್ರವು ಸುಂಕವನ್ನು ಇಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

‘ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಐಟಿ ಏಜೆನ್ಸಿ’ : ರಾಹುಲ್ ಗಾಂಧಿ

‘ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಐಟಿ ಏಜೆನ್ಸಿ’ : ರಾಹುಲ್ ಗಾಂಧಿ

ನವದೆಹಲಿ: ಸದಾ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೆಂಡ ಕಾರುತ್ತಲೇ ಸುದ್ದಿಯಲ್ಲಿರರುವಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಮತ್ತೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ರೈತರ ಪರವಾಗಿರುವವ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿರುವ ಮೋದಿ ಸರ್ಕಾರ ಅವರ ಮೇಲೆ ಐಟಿ ದಾಳಿ ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಹೌದು ಬಾಲಿವುಡ್ ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತಿತರರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ಈ ಸಂಬಂಧ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಐಟಿ ಏಜೆನ್ಸಿ ಕುಣಿಯುತ್ತಿದೆ, ರೈತರನ್ನು ಬೆಂಬಲಿಸುವವರನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ಐಟಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ತಾಜ್‌ಮಹಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ‌ ಬೆದರಿಕೆ ಕರೆ

ತಾಜ್‌ಮಹಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ‌ ಬೆದರಿಕೆ ಕರೆ !

ಆಗ್ರಾ, ಮಾರ್ಚ್04: ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿರುವ ತಾಜ್‌ಮಹಲ್‌ನಲ್ಲಿ ಬಾಂಬ್ ಬೆದರಿಕೆ ಕರೆ ಗುರುವಾರ ಭೀತಿ ಹುಟ್ಟಿಸಿದೆ. ಬೆದರಿಕೆಯ ಕರೆಯ ಹಿನ್ನೆಲೆಯಲ್ಲಿ ಹಲವಾರು ಪ್ರವಾಸಿಗರನ್ನು ವಿಶ್ವಪ್ರಸಿದ್ಧ ಸ್ಮಾರಕದಿಂದ ತಕ್ಷಣ ಸ್ಥಳಾಂತರಿಸಲಾಗಿದೆ.

Taj Mahal bomb scare
ವರದಿಗಳ ಪ್ರಕಾರ, ಐತಿಹಾಸಿಕ ಸ್ಮಾರಕದೊಳಗೆ ಬಾಂಬ್ ಇಡಲಾಗಿದೆ ಎಂದು ಅಪರಿಚಿತ ಕರೆಗಾರರಿಂದ ಕರೆ ಬಂದಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸ್ಮಾರಕವನ್ನು ರಕ್ಷಿಸುವ ಆಗ್ರಾ ಪೊಲೀಸ್ ಮತ್ತು ಸಿಐಎಸ್ಎಫ್ ತಂಡವು ತಾಜ್ ಮಹಲ್ ಆವರಣದೊಳಗೆ ತೀವ್ರ ಶೋಧ ನಡೆಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ, ಐತಿಹಾಸಿಕ ಸ್ಮಾರಕದೊಳಗಿದ್ದ ಪ್ರವಾಸಿಗರನ್ನು ತಕ್ಷಣ ಸ್ಥಳಾಂತರಿಸಲಾಗಿದೆ ಮತ್ತು ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಮುಚ್ಚಲಾಗಿದೆ.

Taj Mahal bomb scare

 

ಪಾಕಿಸ್ತಾನದಲ್ಲಿ  ಭಾರತದ ಹತ್ತಿಗೆ ಬೇಡಿಕೆ !

ಪಾಕಿಸ್ತಾನದಲ್ಲಿ  ಭಾರತದ ಹತ್ತಿಗೆ ಬೇಡಿಕೆ !

ಇಸ್ಲಾಮಾಬಾದ್, ಮಾರ್ಚ್04: ಭಾರತ ಮತ್ತು ಪಾಕಿಸ್ತಾನ ನಡುವಿನ ಸ್ಥಗಿತಗೊಂಡ ವ್ಯಾಪಾರ ಸಂಬಂಧಗಳು ನಿಧಾನವಾಗಿ ಪುನರ್ ಆರಂಭದ ಹಾದಿಯಲ್ಲಿವೆ. ಇದೀಗ ಪಾಕಿಸ್ತಾನವು ಭಾರತದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ.

ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಶಾಂತಿ ಕಾಪಾಡಲು ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮ ಘೋಷಿಸಿದ ನಂತರ, ಪಾಕಿಸ್ತಾನ ಸರ್ಕಾರವು ಮುಂದಿನ ದಿನಗಳಲ್ಲಿ ಭಾರತದಿಂದ ಹತ್ತಿ ಆಮದು ಮಾಡಿಕೊಳ್ಳಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಎಲ್‌ಒಸಿ ಮೇಲಿನ 2003 ರ ಕದನ ವಿರಾಮ ಒಪ್ಪಂದದ ಯಶಸ್ಸು ವಾಣಿಜ್ಯ ಸಚಿವಾಲಯಕ್ಕೆ ನಿರ್ಧಾರವನ್ನು ಮರುಪರಿಶೀಲಿಸುವ ಅವಕಾಶವನ್ನು ಒದಗಿಸಿದೆ. ಪಾಕಿಸ್ತಾನ ಸರ್ಕಾರದ ಮೂಲಗಳು ಹಂಚಿಕೊಂಡ ವಿವರಗಳ ಪ್ರಕಾರ ಇಸ್ಲಾಮಾಬಾದ್ ಭಾರತದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳುವ ಸಂಭವವಿದೆ.
ಫೆಡರಲ್ ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು, ಮುಂದಿನ ವಾರ ಭಾರತದಿಂದ ಹತ್ತಿ ಮತ್ತು ನೂಲನ್ನು ಆಮದು ಮಾಡಿಕೊಳ್ಳಲು ಸಲಹೆಗಾರರು ನಿರ್ಧರಿಸಬಹುದು ಎಂದು ತಿಳಿಸಿದ್ದಾರೆ.

ಮುಖ್ಯ ನಿರ್ಧಾರವನ್ನು ತೆಗೆದುಕೊಂಡ ನಂತರ, ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಗೆ ಔಪಚಾರಿಕ ಸಾರಾಂಶವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಮೊದಲ ಹಂತದಲ್ಲಿ ಭಾರತದಿಂದ ಹತ್ತಿ ಮತ್ತು ನೂಲು ಆಮದು ಪುನರಾರಂಭದ ಕುರಿತು ಈಗಾಗಲೇ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ಖಚಿತಪಡಿಸಿವೆ. ಆದರೆ, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಸಾರಾಂಶವನ್ನು ಅಂಗೀಕರಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗುವುದು. ಏಕೆಂದರೆ ಅವರು ವಾಣಿಜ್ಯ ಸಚಿವ ಉಸ್ತುವಾರಿಯನ್ನು ಸಹ ಹೊಂದಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd