ಪ್ರಮುಖ ರಾಜಕೀಯ ಸುದ್ದಿಗಳು : LATEST UPDATES

1 min read

ಪ್ರಮುಖ ರಾಜಕೀಯ ಸುದ್ದಿಗಳು : LATEST UPDATES

ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

ಸದನದಲ್ಲಿ ಶರ್ಟ್ ಬಿಚ್ಚಿದ ಶಾಸಕ ಸಂಗಮೇಶ್..!!!

ಸದನದಲ್ಲಿ ಶರ್ಟ್ ಬಿಚ್ಚಿದ ಶಾಸಕ ಸಂಗಮೇಶ್..!!!

ಬೆಂಗಳೂರು : ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಸದನದಲ್ಲಿ ಕಾಂಗ್ರೆಸ ಶಾಸಕ ಸಂಗಮೇಶ್ ಅವರು ಶರ್ಟ್ ಬಿಚ್ಚಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ, ಒಂದು ದೇಶ ಒಂದು ಚುನಾವಣೆ ಕುರಿತು ವಿಶೇಷ ಚರ್ಚೆ ಬಗ್ಗೆ ಪ್ರಸ್ತಾಪಿಸಿದ್ರು. ಈ ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಯಾವ ನಿಯಮಾವಳಿಗಳಲ್ಲಿ ಈ ಚರ್ಚೆ ಮಾಡುತ್ತೀದ್ದೀರಿ. ಇದೊಂದು ಆರ್ ಎಸ್ ಎಸ್ ಅಜೆಂಡಾ ಅಂತಾ ಒಂದು ದೇಶ ಒಂದು ಚುನಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ರು.

ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ.ಸಾಹೇಬ

ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ.ಸಾಹೇಬ

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಶೀತಲ ಸಮರ ನಡೆಯುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲೂ ಮೈಸೂರು ಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯಅವರನ್ನ ಸೈಡ್ ಲೈನ್ ಮಾಡಿ ಡಿಕೆಶಿವಕುಮಾರ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, ಟಗರು ಸಿದ್ದುಗೆ ಪಿತ್ತನೆತ್ತಿರೇಗುವಂತೆ ಮಾಡಿತ್ತು. ಡಿಕೆಶಿವಕುಮಾರ್ ಅವರ ಈ ನಡೆ ವಿರುದ್ಧ ಸಿದ್ದರಾಮಯ್ಯ ಅವರ ಬೆಂಬಲಿಗರು ತಿರುಗಿ ಬಿದ್ದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಅಭಿಮಾನಿಗಳ ಮಧ್ಯೆ ಸಣ್ಣ ಯುದ್ಧವೇ ನಡೆದಿತ್ತು. ಈ ಘಟನೆಗಳ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಫೋಟೋ ಒಂದು ಇದೀಗ ವೈರಲ್ ಆಗುತ್ತಿದೆ.

ರಾಜ್ಯದಲ್ಲಿ ಇದೆಯಂತೆ 19 ರಾಜಕಾರಣಿಗಳ `ಆ’ ಸಿಡಿ

ರಾಜ್ಯದಲ್ಲಿ ಇದೆಯಂತೆ 19 ರಾಜಕಾರಣಿಗಳ `ಆ’ ಸಿಡಿ

ಬಳ್ಳಾರಿ : ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ರಾಜ್ಯದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಆಫ್ ಲೈನ್… ಆನ್ ಲೈನ್ ನಲ್ಲಿ ರಮೇಶ್ ಜಾರಕಿಹೊಳಿ ಕಾಮಕಾಂಡ ಕುರಿತ ಚರ್ಚೆ ಜೋರಾಗಿದೆ. ಈ ಮಧ್ಯೆ ಇಂತಹ ಇನ್ನಷ್ಟು ಮಂದಿಯ ವಿಡಿಯೋಗಳು ಇವೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಹಿಂದೆ ಅವರ ಮಾನ ಮರ್ಯಾದೆ ತೆಗೆಯೋ ಹುನ್ನಾರ ಇದೆ. ಸಿಡಿಯಲ್ಲಿ ವಿಡಿಯೋ ಹಾಗೂ ವಾಯ್ಸ್ ಗೆ ಲಿಂಕ್ ಇಲ್ಲ. ಈ ಸಿಡಿ ಹಳೆಯದು, ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.

ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು

ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು

ಬೆಂಗಳೂರು : ರಾಸಲೀಲೆ ವಿಡಿಯೋ ಪ್ರಕರಣ ಸಂಬಂಧ ಈಗಾಗಲೇ ತಮ್ಮ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ ರಮೇಶ್ ಜಾರಕಿಹೊಳಿ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ.

ಹೌದು..! ಸಚಿವ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ರಮೇಶ್ ಜಾರಕಿಹೊಳಿ ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅಂತಾ ಆರೋಪಿಸಿ ಕನ್ನಡಿಗರ ರಕ್ಷಣಾ ವೇದಿಕೆಯ ಕನ್ನಡ ಪ್ರಕಾಶ್ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ವಂಚನೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಗೆ ಸೂಕ್ತ ರಕ್ಷಣೆ ಒದಗಿಸಲು ಮನವಿ ಮಾಡಿಕೊಂಡಿರುವ ದೂರುದಾರು ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿದ್ದಾರೆ.

ವೀಕ್ ನೆಸ್ ಗಳು ಇರುತ್ವೆ, ಅದನ್ನೇ ಬಂಡವಾಳ ಮಾಡ್ಕೊಬಾರ್ದು : ರಾಜೂಗೌಡ

ವೀಕ್ ನೆಸ್ ಗಳು ಇರುತ್ವೆ, ಅದನ್ನೇ ಬಂಡವಾಳ ಮಾಡ್ಕೊಬಾರ್ದು : ರಾಜೂಗೌಡ

ಬೆಂಗಳೂರು : ಮನುಷ್ಯ ಅಂದ ಮೇಲೆ ಕೆಲವೊಂದು ವೀಕ್ ನೆಸ್ ಗಳು ಇದ್ದೇ ಇರ್ತಾವೆ. ಆದ್ರೆ ಅವುಗಳನ್ನೇ ಬಂಡವಾಳ ಮಾಡಿಕೊಳ್ಳುವುದು ಸರಿಯಲ್ಲ ಅಂತಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಶಾಸಕ ರಾಜೂಗೌಡ ಬ್ಯಾಟ್ ಬೀಸಿದ್ದಾರೆ.

ರಮೇಶ್ ಜಾಆರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೂಗೌಡ, ರಮೇಶಣ್ಣ ಹಾಗೂ ನಾನು ಸಂಬಂಧಿಕರು. ಸುಮಾರು ವರ್ಷಗಳಿಂದ ಅವರೊಂದಿಗೆ ಉತ್ತಮ ಒಡನಾಟವಿದೆ. ಇದೊಂದು ನೋವಿನ ಸಂಗತಿ. ಯುವತಿಗೆ ರಮೇಶ್ ಜಾರಕಿಹೊಳಿ ಮೋಸ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ಆದ್ರೆ ಆ ವಿಡಿಯೋ ನೋಡಿದ್ರೆ ಮೋಸ ಮಾಡಿದ್ದಾರೆ ಅನ್ಸುತ್ತಾ ಅಂತಾ ಪ್ರಶ್ನೆ ಮಾಡಿದ್ದಾರೆ.

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd