ಇತ್ತೀಚೆಗಿನ ಪ್ರಮುಖ ಇಂಟ್ರೆಸ್ಟೆಂಗ್ ಸುದ್ದಿಗಳು..!
ಪೂರ್ಣ ಸುದ್ದಿಗಳು ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ
ಕುರಿ ಬೇಕಾ ಕುರಿ.. ಆದ್ರೆ ಬೆಲೆ ಕೇಳ್ಬೇಡಿ… ಶಾಕ್ ಆಗ್ತೀರಾ..
ಮಹಾರಾಷ್ಟ್ರ: ಕುರಿ, ಮೇಕೆ ಬೆಲೆ ಸಹಜವಾಗಿ ಹೆಚ್ಚಾಗಿಯೇ ಇರುತ್ತೆ. ತುಂಬಾ ಅಂದ್ರೆ 30-40 -50 ಸಾವಿರನೂ ಒಂದು ಕುರಿ ಮಾರಾಟವಾಗಿರಬಹುದು. ಆದ್ರೆ ಮಹಾರಾಷ್ಟ್ರದ ಈ ಕುರಿ ಬೆಲೆ ಕೇಳುದ್ರೆ ಶಾಕ್ ಆಗೋದು ಗ್ಯಾರಂಟಿ.
ಯಾಕಂದ್ರೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮಡ್ ಗ್ಯಾಲ್ ತಳಿಯ ಈ ಕುರಿ ಒಂದೇ ಬರೋಬ್ಬರಿ 70 ಲಕ್ಷಕ್ಕೆ ಮಾರಾಟವಾಗಿದೆ. ಹೌದು ಈ ಕುರಿ ಇತರೇ ಕುರಿಗಳಿಗಿಂತಲೂ ಭಿನ್ನವಾಗಿದ್ದು, ಆಕರ್ಷಕವಾಗಿಯೂ, ಇದೆ. ಉತ್ತಮ ಸಂತಾನೋತ್ಪತ್ತಿ ಗುಣವನ್ನೂ ಹೊಂದಿದೆ. ಆದ್ರೆ ಕುರಿಗೆ 70 ಲಕ್ಷ ಅಂದ್ರೆ ಯಾರಿಗೆ ತಾನೆ ಶಾಕ್ ಆಗಲ್ಲ. ಆದ್ರೆ ಇದು ನಿಜ..
ಅಂದ್ಹಾಗೆ ಈ ಕುರಿ ಮಾರಾಟವಾಗುವುದಕ್ಕೂ ಮುನ್ನ ಇದರ ಮಾಲೀಕರಾಗಿದ್ದದ್ದು ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ತಹಸೀಲ್ ನ ಬಾಬು. ಅವರಿಂದ ಈ ಕುರಿಯನ್ನ ಗ್ರಾಹಕರು ಬರೋಬ್ಬರಿ 70 ಲಕ್ಷ ಕೊಟ್ಟು ಖರೀದಿ ಮಾಡಿದ್ದಾರೆ.
ಹಾಲಿವುಟ್ ನಟಿಯಂತೆ ಕಾಣಲು 50 ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಯುವತಿ
ಹಾಲಿವುಡ್ ನಟಿ ಏಂಜಲೀನಾ ಜೋಲಿಯಂತೆ ಕಾಣಲು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಇರಾನಿಯನ್ ಯುವತಿ ಸಹರ್ ತಬಾರ್ ಗೆ 10 ವರ್ಷ ಜೈಲು ಶಿಕ್ಷಿಯಾಗಿದೆ.
19 ವರ್ಷದ ತಬಾರ್ ಹಲವಾರು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳಿಂದ ಖ್ಯಾತಿ ಗಳಿಸಿದ್ದರು. ಸದ್ಯ ಇವರನ್ನು ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ಆರೋಪದ ಮೇಲೆ ಬಂಧಿಸಲಾಗಿದೆ.
ಸದ್ಯ ಜೈಲು ಸೇರಿರುವ 17 ವರ್ಷದ ಸಹರ್ ತಬಾರ್ ಅವ್ರ ನಿಜವಾದ ಹೆಸರು ಫಾತಿಮೆ ಖಿಶ್ವಾಂಡ್. ಮೂಲತಃ ಟೆಹ್ರಾನ್ ಮೂಲದವರು.
ಆರಂಭದಲ್ಲಿ ತಬಾರ್ ಹಾಲಿವುಡ್ ನಟಿ ಏಂಜಲೀನಾ ಜೋಲಿಯ ಜೊಂಬಿ ಆವೃತ್ತಿಯಂತೆ ಕಾಣುವ ತನ್ನ ವಿಲಕ್ಷಣ ಮುಖಡ ಮಾರ್ಫಡ್ ಚಿತ್ರಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವುದರ ಮೂಲಕ ಖ್ಯಾತಿ ಪಡೆದುಕೊಂಡರು.
ಹಾಗೇ ಮುಂದುವರಿದು ಏಂಜಲೀನಾ ಜೋಲಿಯಂತೆ ಕಾಣಲು ತಬಾರ್ ಬರೋಬ್ಬರಿ 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಸಿಕೊಂಡಿದ್ದಾಳಂತೆ. ಅದಲ್ಲದೆ ಏಂಜಲೀನಾಳಂತೆ ಕಾಣಲು ಕಠಿಣ ಡಯಟ್ ಕೂಡ ಮಾಡಿದ್ದಾರಂತೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದ ತಬಾರ್, ನನ್ನ ನೆಚ್ಚಿನ ನಟಿ ಏಂಜಲೀನಾಳಂತೆ ಕಾಣಲು ಏನು ಬೇಕಾದ್ರೂ ಮಾಡ್ತೀನಿ ಅಂತ ಹೇಳಿಕೊಂಡಿದ್ರಂತೆ.
ಗಂಟಲನ್ನು ಕತ್ತರಿಸಿ ರಕ್ತವನ್ನು ಶಿವಲಿಂಗದ ಮೇಲೆ ಸುರಿದ ಯುವಕ
ಪೈಥಾನ್, ಡಿಸೆಂಬರ್13: 25 ವರ್ಷದ ಯುವಕನೊಬ್ಬ ದೇವಸ್ಥಾನವೊಂದರಲ್ಲಿ ತನ್ನ ಗಂಟಲನ್ನು ಕತ್ತರಿಸಿ ರಕ್ತವನ್ನು ಶಿವಲಿಂಗದ ಮೇಲೆ ಶುಕ್ರವಾರ ಸುರಿದಿದ್ದಾನೆ. ಮಹಾರಾಷ್ಟ್ರದ ಪೈಥಾನ್ ಪಟ್ಟಣದ ಮಹಾದೇವ್ ದೇವಸ್ಥಾನದಲ್ಲಿ ಈ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಅಘೋರಿ ಅಭ್ಯಾಸದ ಭಾಗವಾಗಿ ಆತ ಈ ರೀತಿ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ವ್ಯಕ್ತಿಯನ್ನು ನಂದು ಘುಂಗಾಸೆ ಎಂದು ಗುರುತಿಸಲಾಗಿದೆ. ಘುಂಗೇಸ್ ಕಹರ್ವಾಡ್ ಗ್ರಾಮದ ಮೀನುಗಾರನಾಗಿದ್ದನು. ಘಟನೆಯ ದಿನದಂದು ನಾಲ್ಕು ವ್ಯಕ್ತಿಗಳು ಈ ಘಟನೆಗೆ ಸಾಕ್ಷಿಯಾಗಿದ್ದಾರೆ.
ಮದರಂಗಿಯಲ್ಲಿ ಬದುಕಿನ ರಂಗು… ಗೋರಂಟಿ ಗಿಡದ ನಾನಾ ಉಪಯೋಗಳು..!
ಮದರಂಗಿಯಲ್ಲಿ ಬದುಕಿನ ರಂಗು… ಗೋರಂಟಿ ಗಿಡದ ನಾನಾ ಉಪಯೋಗಳು..!
ಗೋರಂಟಿ… ಮದರಂಗಿ… ಮೆಹಂದಿ ಗಿಡ… ಭಾರತ ಸಂಪ್ರದಾಯದಲ್ಲಿ ಶ್ರೇಷ್ಠ ಗಿಡಗಳಲ್ಲಿ ಒಂದು. ಗೋರಂಟಿ ಒಂದು ಗಡಿ ನಾನಾ ಪ್ರಯೋಜನಗಳಿವೆ. ಮೆಹಂದಿಗೆ, ಔಷಧೀಯ ಗುಣಗಳು, ಪೂಜೆಗೆ ಹೀಗೆ ನಾನಾ ರೀತಿಯ ಪ್ರಯೋಜನಗಳಿರುವ ಗೋರಂಟಿ ಗಿಡ ಲಿತ್ರೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಇದು ಉತ್ತರ ಆಫ್ರಿಕ ಹಾಗೂ ನೈರುತ್ಯ ಏಷ್ಯದ ಮೂಲವಾಸಿ. ಗೋರಂಟಿ ವಿಪುಲವಾಗಿ ಕವಲೊಡೆದು ಬೆಳೆಯುವ ಒಂದು ಪೊದೆಸಸ್ಯ. ಬೂದು ಕಂದು ಮಿಶ್ರಿತ ಬಣ್ಣದ ತೊಗಟೆ, ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ ಸರಳ, ಅಖಂಡ ಹಾಗೂ ಅಂಡಾಕಾರದ ಎಲೆಗಳು ಇದರ ಮುಖ್ಯ ಲಕ್ಷಣಗಳಲ್ಲಿ ಕೆಲವು. ಹೂಗಳು ಚಿಕ್ಕ ಗಾತ್ರದವು ಮತ್ತು ಬಿಳಿ ಇಲ್ಲವೆ ಗುಲಾಬಿ ಬಣ್ಣದವು; ಸಂಕೀರ್ಣ ಮಾದರಿಯ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವಕ್ಕೆ ಸುವಾಸನೆಯಿದೆ. ಫಲ ಸಂಪುಟ ಮಾದರಿಯದು. ಇನ್ನೂ ಮದರಂಗಿ ಗಿಡ ಮನೆಯಲ್ಲಿ ಬೆಳೆಸಿದ್ರೆ, ಲಕ್ಷ್ಮಿ ಮನೆಗೆ ಒಲಿಯುತ್ತಾಳೆ. ಮನೆಯಲ್ಲಿ ಅದೃಷ್ಟ ನೆಲೆಸಿರುತ್ತೆ ಅನ್ನೋ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ.
ಪೂರ್ಣ ಸುದ್ದಿಗಳು ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel