ADVERTISEMENT
Friday, June 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮದರಂಗಿಯಲ್ಲಿ ಬದುಕಿನ ರಂಗು… ಗೋರಂಟಿ ಗಿಡದ ನಾನಾ ಉಪಯೋಗಳು..!

Namratha Rao by Namratha Rao
December 13, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಮದರಂಗಿಯಲ್ಲಿ ಬದುಕಿನ ರಂಗು… ಗೋರಂಟಿ ಗಿಡದ ನಾನಾ ಉಪಯೋಗಳು..!

ಗೋರಂಟಿ… ಮದರಂಗಿ… ಮೆಹಂದಿ ಗಿಡ… ಭಾರತ ಸಂಪ್ರದಾಯದಲ್ಲಿ ಶ್ರೇಷ್ಠ ಗಿಡಗಳಲ್ಲಿ ಒಂದು. ಗೋರಂಟಿ ಒಂದು ಗಡಿ ನಾನಾ ಪ್ರಯೋಜನಗಳಿವೆ. ಮೆಹಂದಿಗೆ, ಔಷಧೀಯ ಗುಣಗಳು, ಪೂಜೆಗೆ ಹೀಗೆ ನಾನಾ ರೀತಿಯ ಪ್ರಯೋಜನಗಳಿರುವ ಗೋರಂಟಿ ಗಿಡ ಲಿತ್ರೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಇದು ಉತ್ತರ ಆಫ್ರಿಕ ಹಾಗೂ ನೈರುತ್ಯ ಏಷ್ಯದ ಮೂಲವಾಸಿ. ಗೋರಂಟಿ ವಿಪುಲವಾಗಿ ಕವಲೊಡೆದು ಬೆಳೆಯುವ ಒಂದು ಪೊದೆಸಸ್ಯ. ಬೂದು ಕಂದು ಮಿಶ್ರಿತ ಬಣ್ಣದ ತೊಗಟೆ, ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ ಸರಳ, ಅಖಂಡ ಹಾಗೂ ಅಂಡಾಕಾರದ ಎಲೆಗಳು ಇದರ ಮುಖ್ಯ ಲಕ್ಷಣಗಳಲ್ಲಿ ಕೆಲವು. ಹೂಗಳು ಚಿಕ್ಕ ಗಾತ್ರದವು ಮತ್ತು ಬಿಳಿ ಇಲ್ಲವೆ ಗುಲಾಬಿ ಬಣ್ಣದವು; ಸಂಕೀರ್ಣ ಮಾದರಿಯ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವಕ್ಕೆ ಸುವಾಸನೆಯಿದೆ. ಫಲ ಸಂಪುಟ ಮಾದರಿಯದು. ಇನ್ನೂ ಮದರಂಗಿ ಗಿಡ ಮನೆಯಲ್ಲಿ ಬೆಳೆಸಿದ್ರೆ, ಲಕ್ಷ್ಮಿ ಮನೆಗೆ ಒಲಿಯುತ್ತಾಳೆ. ಮನೆಯಲ್ಲಿ ಅದೃಷ್ಟ ನೆಲೆಸಿರುತ್ತೆ ಅನ್ನೋ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ.

Related posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

June 18, 2026
10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

June 18, 2026

ಹಣ ಪಡೆದಿರೋದು ಸಾಬೀತಾದ್ರೆ ಕೈ ಕಡಿದುಕೊಳ್ತೇವೆ : ಕೇದಾರ ಜಗದ್ಗುರು

ಮದರಂಗಿಯ ಶಾಸ್ತ್ರೀಯ ಹೆಸರು ಲಾಸೋನಿಯ ಇನರ್ಮಿಸ್. ಇಂಗ್ಲಿಷ್ ನಲ್ಲಿ ಹೆನಾ, ಹಿಂದಿಯಲ್ಲಿ ಮೆಹಂದಿ ಎಂದು ಕರೆಯಲ್ಪಡುತ್ತೆ. ಈಗೆಲ್ಲಾ ಮೆಹಂದಿ ಕೋನ್ ಗಳು ಪ್ಯಾಕೆಟ್ ಗಳು ಸುಲಭವಾಗಿ ಅಂಗಡಿಗಳಲ್ಲಿ ಲಭ್ಯವಿವೆ. ಆದರೆ ಹಿಂದೆಲ್ಲಾ ಇದರ ಎಲೆಗಳನ್ನು ನೀರಿನಲ್ಲಿ ಅರೆದು ಬಳಿಕ ಕೈ ಕಾಲುಗಳಿಗೆ ಹಚ್ಚಿಕೊಳ್ಳಲಾಗ್ತಿತ್ತು. ಇನ್ನೂ ಮದುವೆ ಸಮಾರಂಭಗಳು ಬಂತೆಂದ್ರೆ ಸಾಕು ಎಲ್ಲಾ ಮಹಿಳೆಯರು ಮೆಹಂದಿ ಹಚ್ಚಿಕೊಂಡು ಸಂಭ್ರಮಿಸುತ್ತಾರೆ.

ಇನ್ನೂ ಗೋರಂಟಿ ಗಿಡವನ್ನು ಉಷ್ಣ ಹಾಗೂ ಸಮಶೀತೋಷ್ಣ ವಲಯಗಳ ಅನೇಕ ಪ್ರದೇಶಗಳಲ್ಲಿ ಬೆಳೆಸುತ್ತಾರೆ. ಭಾರತ, ಈಜಿಪ್ಟ್‌, ಪರ್ಷಿಯ, ಪಾಕಿಸ್ತಾನ, ಸೂಡಾನ್, ಮಡಗಾಸ್ಕರ್ಗಳಲ್ಲಿ ಈ ಸಸಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಗೋರಂಟಿ ಗಿಡ ಯಾವ ರೀತಿಯ ಮಣ್ಣಿನಲ್ಲಾದರೂ ಬೆಳೆಯಬಲ್ಲದು. ಆದರೆ ನೆಲ ಜವುಗಾಗಿರಬಾರದು. ಗೋರಂಟಿಯನ್ನು ಬೀಜಗಳಿಂದ ಅಥವಾ ಕಾಂಡತುಂಡು ಗಳಿಂದ ವೃದ್ಧಿಸಬಹುದು. ಇನ್ನೂ ಭಾರತದಲ್ಲಿ ನೋಡೋದಾದ್ರೆ ಮಧ್ಯಪ್ರದೇಶ, ಪಂಜಾಬ್, ಗುಜರಾತ್, ರಾಜಸ್ಥಾನಗಳಲ್ಲಿ ಅತಿ ಹೇರಳವಾಗಿ ಬೆಳೆಯಲ್ಪಡುವ ಸಸ್ಯಗಳು ಇವಾಗಿವೆ.

ಉಪಯೋಗಗಳು

ಮದರಂಗಿಯ ರಂಗು ಎಲ್ಲರೂ ಇಷ್ಟಪಡ್ತಾರೆ. ಮೆಹಂದಿಯಿಂದ ಕೈ ಮೇಲೆ ತರಹೇವಾರಿ ಚಿತ್ತಾರ ಬಿಡಿಸಿ ಗಂಟೆಗಳ ಬಿಟ್ಟು ಕೈ ತೊಳೆದ ಮೇಲೆ ಅದು ಆಕರ್ಶಣೀಯ ಬಣ್ಣದೊಂದಿಗೆ ಕಂಗೊಳಿಸುತ್ತೆ. ಇನ್ನೂ ತಲೆಗೆ ನೆರೆ ಕೂದಲಗಳಿದ್ದ ಇದನ್ನ ಹಚ್ಚಿಕೊಂಡರೆ ನೆರೆಕೂದಲುಗಳು ಬಣ್ಣ ಪಡೆದುಕೊಳ್ಳುತ್ತವೆ. ಇನ್ನೂ ದೇಹದ ಉಷ್ಣಾಂಶವನ್ನೂ ಎಳೆಯುವ ಶಕ್ತಿ ಮದರಂಗಿಗಿದೆ.

ಗೋರಂಟಿಯ ಎಲೆಗಳನ್ನು ಬಹಳ ಹಿಂದಿನ ಕಾಲದಿಂದಲೂ ಭಾರತ ಮತ್ತು ಮಧ್ಯಪ್ರಾಚ್ಯಗಳಲ್ಲಿ ಅಂಗೈ, ಅಂಗಾಲು ಹಾಗೂ ಕೈ ಬೆರಳಿನ ಉಗುರುಗಳಿಗೆ ಬಣ್ಣ ಹಾಕಲು ಉಪಯೋಗಿಸುತ್ತಾರೆ. ತಲೆಗೂದಲು, ಗಡ್ಡ, ಹುಬ್ಬು, ಕುದುರೆಗಳ ಬಾಲ, ಅಯಾಲು, ಚರ್ಮ ಮುಂತಾದವುಗಳಿಗೆ ಬಣ್ಣ ಕೊಡುವುದಕ್ಕೆ ಬಳಸಲಾಗುತ್ತೆ . ಗೋರಂಟಿಯ ಹೂವನ್ನು ಆವಿ ಅಸವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ಚಂಚಲ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು ಕೊಂಚ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದರಿಂದ ಹೇನುಗಳು, ಸೀರುಗಳು ನಾಶವಾಗುವುವು.

ಆರೋಗ್ಯ ಪ್ರಯೋಜನಗಳು

ಇನ್ನೂ ಮೆಹಂದಿಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಗಂಟಲು ನೋವಿಗೆ ಪರಿಹಾರ: ಗಂಟಲು ನೋವುತ್ತಿದ್ದರೆ ಗೋರಂಟಿಯನ್ನ ಕಷಾಯದ ರೂಪದಲ್ಲಿ ಸೇವಿಸಿದರೆ ತ್ವರಿತ ಪರಿಹಾರ ಸಿಗುತ್ತೆ.

ಮೂಲವ್ಯಾಧಿಗೆ ಉತ್ತಮ: ಗೋರಂಟಿ ಸೊಪ್ಪನ್ನ ನಿಯಮಿತವಾಗಿ ವಿಧಿ ವಿಧಾನದಂತೆ ಸೇವಿಸಿದರೆ ಮೂಲವ್ಯಾಧಿ ಕ್ರಮೇಣ ವಾಸಿಯಾಗುತ್ತದೆ.

ಹುಣ್ಣು ಸುಟ್ಟ ಗಾಯಗಳು ನಿವಾರಣೆ: ಸುಟ್ಟಗಾಯಗಳು, ಹುಣ್ಣುಗಳಾಗಿದ್ರೆ ಅಥವಾ ಚರ್ಮರೋಗಗಳಿದ್ದರೆ ಅವುಗಳನ್ನ ಗೋರಂಟಿ ವಾಸಿಮಾಡಬಲ್ಲದು.

ಕಾಮಾಲೆ ರೋಗಕ್ಕೆ ಉತ್ತಮ : ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ರಾತ್ರಿ ನೆನೆ ಹಾಕಿ ನೀರನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ಬಾರಿಯಂತೆ 1 ವಾರ ಕುಡಿದರೆ ಕಾಮಾಲೆ ಪರಿಹಾರಕ್ಕೆ ಸಹಾಯ ಮಾಡುತ್ತೆ.

ಹಲ್ಲು ನೋವು ಉಪಶಮನ: ಹಹಲ್ಲು ನೋವಿದ್ರೆ ಹಸಿ ಗೋರಂಟಿ ಸೂಪ್ಪನ್ನು ಜಜ್ಜಿ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಟ್ಟು, ರಸವನ್ನು ಉಗುಳುತ್ತಿದ್ದರೆ ಬೇಗ ವಾಸಿಯಾಗುತ್ತದೆ.

ಬಿಳಿ ತೊನ್ನು ವ್ಯಾಧಿಗೆ ರಾಮಬಾಣ:  ಚರ್ಮ ಕಾಯಿಲೆ ಬಿಳಿ ತೊನ್ನು ವ್ಯಾಧಿಗಳು ವಾಸಿಯಾಗಲು ಮದರಂಗಿ ರಾಮಬಾಣ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

Tags: Healthhenamehandi
ShareTweetSendShare
Join us on:

Related Posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

by admin
June 18, 2026
0

ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮೂರು...

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

by Shwetha
June 18, 2026
0

ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿನ ಪರ್ವ ಆರಂಭವಾಗಲಿದೆ. ನೌಕರರು ಕಚೇರಿಗೆ ಬಾರದೆ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಹಳೆಯ...

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

by Shwetha
June 18, 2026
0

ದೇಶದ ಐದು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಅವಧಿಗೆ ಮುನ್ನ ನಡೆಯಲಿವೆ ಎಂಬ ಊಹಾಪೋಹಗಳಿಗೆ ಕೇಂದ್ರ...

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

by Shwetha
June 18, 2026
0

ಜಾಗತಿಕ ಆಹಾರ ಉದ್ಯಮದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಯಮ್.ಕಾಮ್ ತನ್ನ ಅಧೀನದಲ್ಲಿರುವ ಪ್ರಸಿದ್ಧ ಪಿಜ್ಜಾ ಹಟ್ ವ್ಯವಹಾರದ ಕೆಲವು ಭಾಗಗಳನ್ನು ಎರಡು ಪ್ರತ್ಯೇಕ ಒಪ್ಪಂದಗಳ ಮೂಲಕ ಒಟ್ಟು...

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

by Shwetha
June 18, 2026
0

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಯ ಹೆಸರಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿ ಮತ್ತು ಲಕ್ಷಾಂತರ ಮರಗಳನ್ನು ನಾಶಪಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram