ADVERTISEMENT
Monday, February 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯದ ಪ್ರಮುಖ ಸುದ್ದಿಗಳು : LATEST UPDATES

Namratha Rao by Namratha Rao
February 24, 2021
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ರಾಜ್ಯದ ಪ್ರಮುಖ ಸುದ್ದಿಗಳು : LATEST UPDATES

ಐದು ವರ್ಷಗಳಲ್ಲಿ 125 ಆಸ್ಪತ್ರೆ ನಿರ್ಮಾಣ :  ಸಚಿವ ಡಾ.ಕೆ.ಸುಧಾಕರ್

ಐದು ವರ್ಷಗಳಲ್ಲಿ 125 ಆಸ್ಪತ್ರೆ ನಿರ್ಮಾಣ :  ಸಚಿವ ಡಾ.ಕೆ.ಸುಧಾಕರ್

ತುಮಕೂರು : ಶಿಶು ಹಾಗೂ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಕೊಂಡೊಯ್ಯಲು ಮುಂದಿನ ಐದು ವರ್ಷಗಳಲ್ಲಿ ತಾಯಿ ಮತ್ತು ಮಕ್ಕಳ 125 ಹೊಸ ಆಸ್ಪತ್ರೆಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Related posts

Vision of Vedanta in the eyes of science: 'Dakshinasya Darshini', which won the public's attention, has a big screen

ವಿಜ್ಞಾನದ ಕಣ್ಣಲ್ಲಿ ವೇದಾಂತದ ದರ್ಶನ: ಜನಮನ ಗೆದ್ದ ‘ದಕ್ಷಿಣಾಸ್ಯ ದರ್ಶಿನಿ’ಗೆ ಅದ್ಧೂರಿ ತೆರೆ

February 2, 2026
ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

February 2, 2026

ಶಿರಾದಲ್ಲಿ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಶಿಶು ಹಾಗೂ ತಾಯಂದಿರ ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಇದನ್ನು ಶೂನ್ಯವಾಗಿಸುವುದು ನಮ್ಮ ಗುರಿ. ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಹೃದಯ, ಮೂತ್ರಪಿಂಡ ಸಮಸ್ಯೆಯ ಚಿಕಿತ್ಸೆಗಾಗಿ ಆಸ್ಪತ್ರೆಗಳ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಕೈಗಾರಿಕಾಭಿವೃದ್ಧಿ, ಆರೋಗ್ಯ, ಶಿಕ್ಷಣ ಅಭಿವೃದ್ಧಿಗೆ ಶಿರಾ ಸೂಕ್ತ ಪ್ರದೇಶ. ಸೈನಿಕರ ನಾಡಾಗಿದ್ದ ಈ ಪ್ರದೇಶ, ದೊಡ್ಡ ಸಾಮ್ರಾಜ್ಯದ ಭಾಗವಾಗಿತ್ತು. ಈ ಪ್ರದೇಶಕ್ಕೆ ಅಭಿವೃದ್ಧಿಯ ವೇಗ ನೀಡಲು 25 ಕೋಟಿ ರೂ. ಅನುದಾನದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಜೊತೆಗೆ ವೈದ್ಯರು, ಶುಶ್ರೂಷಕರ ವಸತಿ ನಿರ್ಮಿಸಲಾಗಿದೆ ಎಂದರು.

ಚಿಕ್ಕಬಳ್ಳಾಪುರ ದುರಂತ : ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ

ಚಿಕ್ಕಬಳ್ಳಾಪುರ ದುರಂತ : ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ

ಚಿಕ್ಕಬಳ್ಳಾಪುರ : ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಯಿ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಮೊದಲು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ ಸ್ಪೋಟಕಗಳು ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಇರಲಿಲ್ಲವೇ..? ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿರೋದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣವನ್ನ ಸಿಐಡಿ ತನಿಖೆಗೆ ನೀಡಲಾಗುವುದು. ಮತ್ತು ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಇನ್ನ ಸೋಟಕಗಳನ್ನು ಎಲ್ಲಿಂದ ತರಲಾಗಿತ್ತು? ಇದನ್ನು ಸಂಗ್ರಹಿಸಿಡಲಾಗಿತ್ತೇ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಇಂತಹ ಘಟನೆ ನಡೆಯಬಾರದಿತ್ತು. ಈ ಘಟನೆಯಲ್ಲಿ ಯಾರೇ ಭಾಗಿಯಾಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಕ್ರಷರ್ ಮಾಲೀಕರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಸುಧಾಕರ್ ವಿರುದ್ಧ ಆರೋಪಗಳ ಸುರಿಮಳೆ

ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಸುಧಾಕರ್ ವಿರುದ್ಧ ಆರೋಪಗಳ ಸುರಿಮಳೆ

ಚಿಕ್ಕಬಳ್ಳಾಪುರ : ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಜಿಲೆಟಿನ್ ಸ್ಫೋಟದ ಮಾದರಿಯಲ್ಲೇ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟಿಸಿ ಆರು ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಸಚಿವ ಡಾ ಕೆ ಸುಧಾಕರ್ ವಿರುದ್ಧ ಸ್ಥಳೀಯರೊಬ್ಬರು ಆರೋಪಗಳ ಸುರಿಮಳೆ ಗೈದಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರನ್ನು ಕ್ರಷರ್ ನ ಎಂಜಿನಿಯರ್ ಉಮಾಕಾಂತ್, ಭದ್ರತಾ ಸಿಬ್ಬಂದಿ ಮಹೇಶ್, ಬಿಲ್ಲಿಂಗ್ ನೌಕರ ಮುರಳಿ, ಸ್ಥಳೀಯ ನಿವಾಸಿ ರಾಮು, ಅಭಿ ಹಾಗೂ ಕಂಪ್ಯೂಟರ್ ಆಪರೇಟರ್ ಗಂಗಾಧರ್ ಎಂದು ಗುರುತಿಸಲಾಗಿದೆ. ಟಾಟಾ ಏಸ್ ಚಾಲಕ ರಿಯಾಜ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಆರ್ ಲತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಸಚಿವ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೆ ಕ್ರಷರ್ ಮಾಲೀಕರನ್ನು ಬಂಧಿಸುವಂತೆ ಆದೇಶ ನೀಡಿದ್ದಾರೆ.

ಮಂಡ್ಯ | ನೇಣು ಬಿಗಿದುಕೊಂಡು ಪೌರ ಕಾರ್ಮಿಕ ಆತ್ಮಹತ್ಯೆ

ಮಂಡ್ಯ | ನೇಣು ಬಿಗಿದುಕೊಂಡು ಪೌರ ಕಾರ್ಮಿಕ ಆತ್ಮಹತ್ಯೆ (suicide)

ಮಂಡ್ಯ : ಜೀವನದಲ್ಲಿ ಮನನೊಂದು ಪೌರ ಕಾರ್ಮಿಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ. 40 ವರ್ಷದ ನಾರಾಯಣ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ನಾರಾಯಣ್ ಕಳೆದ 12 ವರ್ಷದಿಂದ ಮದ್ದೂರು ನಗರದಲ್ಲಿ ಪೌರಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೀವನದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಮದ್ದೂರು ಠಾಣಾ ಪೊಲೀಸರು ಭೇಟಿ ನೀಡಿದ್ದು, ಮೃತ ದೇಹವನ್ನು ಮಂಡ್ಯ ಮಿಮ್ಸ್ ಗೆ ರವಾನಿಸಿದ್ದಾರೆ.

Tags: covid 19 viruskarnatakaMetroState News
ShareTweetSendShare
Join us on:

Related Posts

Vision of Vedanta in the eyes of science: 'Dakshinasya Darshini', which won the public's attention, has a big screen

ವಿಜ್ಞಾನದ ಕಣ್ಣಲ್ಲಿ ವೇದಾಂತದ ದರ್ಶನ: ಜನಮನ ಗೆದ್ದ ‘ದಕ್ಷಿಣಾಸ್ಯ ದರ್ಶಿನಿ’ಗೆ ಅದ್ಧೂರಿ ತೆರೆ

by admin
February 2, 2026
0

- ​ವಿಜ್ಞಾನ-ವೇದಾಂತದ ಸಂಗಮಕ್ಕೆ ಸಾಕ್ಷಿಯಾದ ಅರಮನೆ ಮೈದಾನ - ​ದಕ್ಷಿಣಾಸ್ಯ ದರ್ಶಿನಿ: ಕಣ್ಮನ ಸೆಳೆದ ದ್ವಾರಕಾ ದರ್ಶನ - ​ಪ್ರಾಚೀನ ಜ್ಞಾನಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ -...

ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

ಬುರ್ಖಾ ಧರಿಸಿದವಳು ಲಕ್ಷ್ಮಮ್ಮ ಆಗಿದ್ದು ಹೇಗೆ? ಉಚಿತ ಪ್ರಯಾಣದ ಆಸೆಗೆ ಬೇರೊಬ್ಬರ ಆಧಾರ್ ಬಳಸಿದ ಮಹಿಳೆ ಲಾಕ್: ಶಕ್ತಿ ಯೋಜನೆ ದುರ್ಬಳಕೆಯ ಅಸಲಿ ಬಣ್ಣ ಬಯಲು

by Shwetha
February 2, 2026
0

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಈ ಜನಪ್ರಿಯ ಯೋಜನೆಯನ್ನು...

ನರೇಗಾ ವಿವಾದಕ್ಕೆ ಮೋದಿ ಸರ್ಕಾರ ಜಾಣ್ಮೆಯ ತಿರುಗೇಟು ಬಜೆಟ್ ನಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಘೋಷಣೆ

ನರೇಗಾ ವಿವಾದಕ್ಕೆ ಮೋದಿ ಸರ್ಕಾರ ಜಾಣ್ಮೆಯ ತಿರುಗೇಟು ಬಜೆಟ್ ನಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಘೋಷಣೆ

by Shwetha
February 2, 2026
0

ನವದೆಹಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಥವಾ ನರೇಗಾ ಕಾಯ್ದೆಗೆ ತಿದ್ದುಪಡಿ ತಂದು ಅದರಿಂದ ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟ ಕೇಂದ್ರ ಸರ್ಕಾರದ...

ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿ ಪ್ರಕಟ: ಅಗ್ರಸ್ಥಾನದಲ್ಲಿ ಬಿಹಾರ, ಕೊನೆಯಲ್ಲಿ ಯಾರು? ಕರ್ನಾಟಕದ ಸ್ಥಾನವೆಷ್ಟು?

ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿ ಪ್ರಕಟ: ಅಗ್ರಸ್ಥಾನದಲ್ಲಿ ಬಿಹಾರ, ಕೊನೆಯಲ್ಲಿ ಯಾರು? ಕರ್ನಾಟಕದ ಸ್ಥಾನವೆಷ್ಟು?

by Shwetha
February 2, 2026
0

ನವದೆಹಲಿ: ಭಾರತದ ಆರ್ಥಿಕ ಚಿತ್ರಣವನ್ನು ಪ್ರತಿಬಿಂಬಿಸುವ ಮಹತ್ವದ ವರದಿಯೊಂದನ್ನು ನೀತಿ ಆಯೋಗ (Niti Aayog) ಬಹಿರಂಗಪಡಿಸಿದೆ. ದೇಶದ ಆರ್ಥಿಕ ಸ್ಥಿತಿ, ಜನರ ಜೀವನಮಟ್ಟ, ಶಿಕ್ಷಣ, ಆರೋಗ್ಯ ಮತ್ತು...

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು : ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಮುಹಮ್ಮದ್  ವಾಗ್ದಾಳಿ

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು : ಸ್ವಪಕ್ಷದ ವಿರುದ್ಧವೇ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಮುಹಮ್ಮದ್ ವಾಗ್ದಾಳಿ

by Shwetha
February 2, 2026
0

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯದ ಮತಗಳನ್ನು ಪಡೆದು ಗೆದ್ದ ಶಾಸಕರು ಇದೀಗ ಅದೇ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ. ಕೋಮುವಾದಿ ವ್ಯಕ್ತಿಯೊಬ್ಬನನ್ನು ವೇದಿಕೆಯಲ್ಲಿ ಕೊಂಡಾಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram