ಕೋವಿಡ್ : ಜಾಗತಿಕ ಪ್ರವಾಸೋದ್ಯಮಕ್ಕೆ 4 ಟ್ರಿಲಿಯ ಡಾಲರ್ ನಷ್ಟ – ವಿಶ್ವಸಂಸ್ಥೆ
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..
ಇದ್ರಿಂದಾಗಿ ಜಾಗತಿಕ ಮಟ್ಟದಲ್ಲೂ ಪ್ರವಾಸೋದ್ಯಮ ನೆಲಕಚ್ಚಿದೆ.. ಜಾಗತಿಕ ಪ್ರವಾಸೋದ್ಯಮ ಕುಸಿತದ ಹಾದಿಯಲ್ಲಿದ್ದು 4 ಟ್ರಿಲಿಯ ಡಾಲರ್‌ಗೂ ಅಧಿಕ ನಷ್ಟಕ್ಕೆ ಗುರಿಯಾಗಿದೆ ಎಂದು ಬುಧವಾರ ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಇನ್ನೂ ಪ್ರಾಥಮಿಕ ಹಂತದಲ್ಲಿದೆ, ಹಾಗಾಗಿ ಪ್ರವಾಸೋದ್ಯಮ ಅಗಾಧ ನಷ್ಟವನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಎರಡು ಘಟಕಗಳಾದ ವಿಶ್ವ ಪ್ರವಾಸೋದ್ಯಮ ಸಂಸ್ಥೆ ಮತ್ತು ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನಗಳ ಜಂಟಿ ವರದಿ ಹೇಳಿದೆ. ಪ್ರವಾಸೋದ್ಯಮವು ಲಕ್ಷಾಂತರ ಜನರ ಜೀವನಾಡಿಯಾಗಿದೆ. ಜನರ ರಕ್ಷಣೆ ಮತ್ತು ಪ್ರವಾಸೋದ್ಯಮದ ಸುರಕ್ಷಿತ ಪುನರಾರಂಭಕ್ಕೆ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡುವುದು ಅಗತ್ಯವಾಗಿದೆ. ಉದ್ಯೋಗಗಳು ಮತ್ತು ಸಂಪನ್ಮೂಲಗಳ ಸೃಷ್ಟಿಗೆ ಇದು ಕಿಲಿಕೈಯಾಗಿದೆ ಎಂದು UNWTO ಮಹಾಕಾರ್ಯದರ್ಶಿ ಝುರಬ್ ಪೊಲೊಲಿಕಶ್ವಿಲಿ ತಿಳಿಸಿದ್ದಾರೆ.