ಬೆಂಗಳೂರು : ಬೈಕ್ ಸವಾರನೊಬ್ಬ ಹೆಲ್ಮೆಟ್ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯ ವಿಲ್ಸನ್ ಗಾರ್ಡನ್ 10ನೇ ಕ್ರಾಸ್ನಲ್ಲಿ ಈ ದುರ್ಘಟನೆ ನಡೆದಿದೆ. ನಂತರ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಕರೆಸಿ ಬೈಕ್ ಸವಾರನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಸಂಚಾರಿ ಪೊಲೀಸರು ಬೈಕ್ ಸವಾರನ ವಿರುದ್ಧ ದೂರು ದಾಖಲಿಸಿದ್ದಾರೆ.
ಹೆಲ್ಮೆಟ್ ರಹಿತ ಚಾಲಕನ ಫೋಟೋ ಹಿಡಿದಿದಕ್ಕೆ ಫೋಟೋ ಅಪ್ಲೋಡ್ ಮಾಡಿದರೆ ಫೋನ್ ಒಡೆದು ಹಾಕುವುದಾಗಿ ಅವಾಜ್ ಹಾಕಿ ಎಳೆದಾಡಿ ಪೋಲೀಸರ ಕೈಕಚ್ಚಿದ ಸವಾರ
ಪೋಲೀಸರ ಕೈ ಬಲ ಪಡಿಸಿ…@CMofKarnataka @CPBlr @Jointcptraffic @DCPSouthTrBCP @btppubliceye @wgardentrfps @karnatakakspcb @tdkarnataka @3rdEyeDude @RCBengaluru pic.twitter.com/KeePNw9qws— krjayathirtha (@krjayathirtha) February 12, 2024
ಹೆಲ್ಮೆಟ್ ಹಾಕದಿರುವ ಬೈಕ್ ಸವಾರನನ್ನು ಸಂಚಾರಿ ಪೊಲೀಸ್ ಪೇದೆ ಅಡ್ಡ ಹಾಕಿದ್ದಾರೆ. ನಂತರ ಹೆಲ್ಮೆಟ್ ಹಾಕದಿರುವ ಕುರಿತು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ನಂತರ ಬೈಕ್ ಸವಾರ ಸಿಟ್ಟಿನಿಂದ ಕೀ ಕೊಡುವಂತೆ ಪೊಲೀಸ್ ಕಾನ್ಸ್ಟೇಬಲ್ ಕೈ ಕಚ್ಚಿದ್ದಾನೆ. ಕೂಡಲೇ ಕಾನ್ಸ್ಟೇಬಲ್ ಹೊಯ್ಸಳಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.