ಕುತೂಹಲ ಹೆಚ್ಚಿಸಿದ “ಭಾವಚಿತ್ರ”ದ ಟ್ರೇಲರ್..
ಗಿರೀಶ್ ಕುಮಾರ್ ನಿರ್ದೇಶನದ , ಚಕ್ರವರ್ತಿ – ಗಾನವಿ ಲಕ್ಷ್ಮಣ್ (ಮಗಳು ಜಾನಕಿ ಖ್ಯಾತಿ) ಅಭಿನಯದ ಚಿತ್ರ
“ಭಾವಚಿತ್ರ “. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ “ಭಾವಚಿತ್ರ” ದ ಅನಾವರಣವಾಗಲಿದೆ.
ಇದೊಂದು ಟೆಕ್ನೋ ಥ್ರಿಲ್ಲರ್, ಸೆಂಟಿಮೆಂಟ್ ಸನ್ನಿವೇಶಗಳನ್ನು ಒಳಗೊಂಡಿರುವ ಚಿತ್ರ. ಭಾವಚಿತ್ರ ಹಾಗೂ ಕ್ಯಾಮೆರಾ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಷ್ಟೇ ಅಲ್ಲ. ಪ್ರೀತಿಯ ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ. ಇಡೀ ಚಿತ್ರತಂಡದ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದ ನಿರ್ದೇಶಕ ಗಿರೀಶ್ ಕುಮಾರ್, “ಆವಾಹಯಾಮಿ” ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರವಿದು ಎಂದು ತಳಿಸಿದರು.
ನಾನು ಈ ಚಿತ್ರದಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಫೆÇೀಟೊಗ್ರಾಫಿ ನನ್ನ ಹವ್ಯಾಸ. ಈ ರೀತಿ ಜೀವನ ಸಾಗುತ್ತಿದ್ದಾಗ, ಕೆಲವು ಅನಿರೀಕ್ಷಿತ ತಿರುವುಗಳು ಬರುತ್ತದೆ. ಈ ರೀತಿಯ ವಿಭಿನ್ನ ಕಥೆಯೊಂದಿಗೆ ಚಿತ್ರ ಸಾಗುತ್ತದೆ. ಹಿಂದೆ “ಯಾನ” ಚಿತ್ರದಲ್ಲಿ ನಟಿಸಿದ್ದೆ. ಇದು ಕನ್ನಡದಲ್ಲಿ ಎರಡನೇ ಚಿತ್ರ ಎಂದರು ನಾಯಕ ಚಕ್ರವರ್ತಿ.
ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. “ಮಗಳು ಜಾನಕಿ” ಧಾರಾವಾಹಿ ಸಮಯದಲ್ಲಿ ನಿರ್ದೇಶಕ ಗಿರೀಶ್ ಕುಮಾರ್ ಅವರು ಹೇಳಿದ ಈ ಕಥೆ ಇಷ್ಟವಾಯಿತು ಎಂದ ನಾಯಕಿ ಗಾನವಿ ಲಕ್ಷ್ಮಣ್, ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದರು.
ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಮಾಹಿತಿ ನೀಡಿದರು.
ಚಿತ್ರಕ್ಕೆ ಹಣ ಹೂಡಿರುವ ಶಂಕರ್, ವಿನಾಯಕ ನಾಡಕರ್ಣಿ, ಸಚಿನ್, ರತೀಶ್ ಕುಮಾರ್ (ಸಂಕಲನಕಾರರು ಕೂಡ), ಛಾಯಾಗ್ರಹಕ ಅಜಯ್ ಕುಮಾರ್, ಸಹ ನಿರ್ದೇಶಕ ಗಿರೀಶ್ ಬಿಜ್ಜಳ್ ಹಾಗೂ ಗಿರೀಶ್ ಬುಜ್ಜಿ
“ಭಾವಚಿತ್ರ”ದ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.