ನಿಧಿಗಾಗಿ ನಂದಿಯನ್ನ ಕಿತ್ತೆಸೆದ ಖದೀಮರು yadagiri saaksha tv
ಯಾದಗಿರಿ : ನಿಧಿ ಆಸೆಗಾಗಿ ದೇವಸ್ಥಾನದ ಮುಂದೆ ಇದ್ದ ನಂದಿಯನ್ನ ಕಿತ್ತೆಳೆದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಕೋಟೆಯಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದ್ದು, ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಕೋಟೆಯಲ್ಲಿ ಈ ಹಿಂದೆಯೂ ಸಾಕಷ್ಟು ಬಾರಿ ನಿಧಿಗಾಗಿ ಶೋಧ ಕಾರ್ಯ ನಡೆದಿದೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲವಂತೆ.
ಇದೀಗ ನಿಧಿಗಾಗಿ ಮಧ್ಯರಾತ್ರಿ ಕೋಟೆಯನ್ನು ಹತ್ತಿದ ಖದೀಮರು ನಂದಿಯನ್ನು ಧ್ವಂಸಗೊಳಿಸಿದ್ದಾರೆ. ನಂದಿಯನ್ನು ಕಿತ್ತೆಸೆದಿರುವ ಖದೀಮರು ಮೂರ್ನಾಲ್ಕು ಅಡಿ ಆಳಕ್ಕೆ ಅಗೆದಿದ್ದಾರೆ.
ಇನ್ನು ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಬಂದಾಗ ಸುದ್ದಿ ತಿಳಿದೆ. ಕೂಡಲೇ ಯಾದಗಿರಿ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.