ಟೆಸ್ಟ್ ನಲ್ಲಿ ಕಿವೀಸ್ ಬೌಲರ್ ಟ್ರೆಂಟ್ ಬೋಲ್ಟ್ ಅಪರೂಪದ ಸಾಧನೆ
ಕಿಂಗ್ಸ್ಟನ್ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್ ಅಪರೂಪದ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶದ ಬ್ಯಾಟ್ಸ್ಮನ್ ಮೆಹದಿ ಹಾಸನ್ ಅವರ ವಿಕೆಟ್ ಪಡೆಯುವ ಮೂಲಕ ಬೋಲ್ಟ್ ಟೆಸ್ಟ್ ನಲ್ಲಿ ಮುನ್ನೂರು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಈ ಮೂಲಕ ಬೌಲ್ಟ್ ಟೆಸ್ಟ್ ಕ್ರಿಕೆಟ್ ನಲ್ಲಿ 300 ವಿಕೆಟ್ ಪಡೆದ ನಾಲ್ಕನೇ ಕಿವೀಸ್ ಬೌಲರ್ ಎನಿಸಿಕೊಂಡರು. ಅಲ್ಲದೆ ಅತ್ಯಂತ ವೇಗದಲ್ಲಿ ಟೆಸ್ಟ್ ನಲ್ಲಿ ಮುನ್ನೂರು ವಿಕೆಟ್ ಪಡೆದ ನ್ಯೂಜಿಲೆಂಡ್ ನ ಎರಡನೇ ಬೌಲರ್ ಎನಿಸಿಕೊಂಡಿದಾರೆ.
ಇನ್ನು ನ್ಯೂಜಿಲೆಂಡ್ ಪರ ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 431 ವಿಕೆಟ್ ಗಳೊಂದಿಗೆ ಆರ್ ಜೆ ಹ್ಯಾಡ್ಲಿ ಮೊದಲ ಸ್ಥಾನದಲ್ಲಿದ್ದರೇ, ಡೇನಿಯಲ್ ವಿಟೋರಿ 361 ವಿಕೆಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟೀಮ್ ಸೌಥಿ 328 ವಿಕೆಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ನ್ಯೂಜಿಲೆಂಡ್ ನ ಸ್ಟಾರ್ ಬೌಲರ್ ಟೀಮ್ ಸೌಥಿ 75 ಪಂದ್ಯಗಳಲ್ಲಿ ಮುನ್ನೂರು ವಿಕೆಟ್ ಗಡಿದಾಟಿದರೇ, ಟ್ರೆಂಟ್ ಬೌಲ್ಟ್ 74 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಹೀಗಾಗಿ ಬೋಲ್ಟ್ ಸಾಧನೆಗೆ ಕಿವೀಸ್ ಕ್ರಿಕೆಟ್ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿ, ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಇತ್ತ ಮ್ಯಾಚ್ ವಿಚಾರಕ್ಕೆ ಬಂದರೇ ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 521ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಕಿವೀಸ್ ನಾಯಕ ಲ್ಯಾಥಮ್ ದ್ವಿಶತಕ ಸಿಡಿಸಿದ್ರೆ, ಕಾನ್ವೇ ಶತಕ ಬಾರಿಸಿದ್ದಾರೆ.
ಇನ್ನು ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ 126 ರನ್ ಗಳಿಗೆ ಆಲೌಟ್ ಆಗಿದೆ. ನ್ಯೂಜಿಲೆಂಡ್ ಪರ ಬೋಲ್ಟ್ 5 ವಿಕೆಟ್ ಪಡೆದರೆ, ಟಿಮ್ ಸೌಥಿ 3 ವಿಕೆಟ್ ಪಡೆದಿದ್ದಾರೆ.