ರಹಾನೆ ಬೈ ಬೈ ಹೇಳುವ ಟೈಂ ಬಂದಿದೆ..
ಅಜಿಂಕ್ಯ ರಹಾನೆ ಆಟದ ಶೈಲಿ ಬದಲಾಗುತ್ತಿಲ್ಲ. ಕಾನ್ಪುರದಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 35 ರನ್ ಗಳಿಗೆ ಪೆವಿಲಿಯನ್ ತಲುಪಿದ್ದ ರಹಾನೆ ಎರಡನೇ ಇನ್ನಿಂಗ್ಸ್ ನಲ್ಲಿ ಅತ್ಯಂತ ದಯನೀಯವಾಗಿ ವಿಫಲರಾಗಿದ್ದಾರೆ.
15 ಎಸೆತಗಳನ್ನು ಎದುರಿಸಿದ ರಹಾನೆ ಕೇವಲ 4 ರನ್ ಸಿಡಿಸಿ ಅಜಾಜ್ ಪಟೇಲ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಆಗಿ ಪೆವೀಲಿಯನ್ ಯತ್ತ ಹೆಜ್ಜೆ ಹಾಕಿದರು. ಇದರೊಂದಿಗೆ ರಹಾನೆ ಮತ್ತೆ ನೆಟ್ಟಿಗರಿಗೆ ಆಹಾರವಾಗಿದ್ದಾರೆ.
ನಾಯಕನಾಗಿ ಅತ್ಯಂತ ಬೇಜವಾಬ್ದಾರಿ ಬ್ಯಾಟ್ ಬೀಸುತ್ತಿದ್ದೀರಿ, ಇದು ನ್ಯಾಯವೇ ರಹಾನೆ..? ಅಜಿಂಕ್ಯ ಪದೇ ಪದೇ ವಿಫಲವಾಗುತ್ತಿದ್ದಾರೆ. ಅವರನ್ನ ತಂಡದಿಂದ ಕೈಬಿಡಬೇಕಾದ ಸಮಯ ಬಂದಾಗಿದೆ. ಅವರ ಬದಲಿಗೆ ಹೊಸ ಆಟಗಾರರು ಬರಬೇಕು ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಇನ್ನು ಮೊದಲ ಟೆಸ್ಟ್ ಪಂದ್ಯದಿಂದ ಕೊಹ್ಲಿ ವಿಶ್ರಾಂತಿ ಪಡೆದಿರುವ ಕಾರಣದಿಂದಾಗಿ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಯಶಸ್ವಿ ಕೂಡ ಆಗುತ್ತಿದೆ. ಆದ್ರೆ ವೈಯಕ್ತಿಕವಾಗಿ ರಹಾನೆ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಇದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ.









