ಮೂರು, ನಾಲ್ಕು ವಾರಗಳಲ್ಲಿ ಕೊರೊನಾಗೆ ವ್ಯಾಕ್ಸಿನ್

ಫಿಲಿಡೆಲ್ಫಿಯಾ : ಹೆಮ್ಮಾರಿ ಕೊರೊನಾ ವೈರಸ್ ಗೆ ಕಡಿವಾಣ ಹಾಕುವ ವ್ಯಾಕ್ಸಿನ್ ಗಾಗಿ ಪ್ರಪಂಚ ಜಾತಕ ಪಕ್ಷಿಯಂತೆ ಕಾಯುತ್ತಿದೆ. ಇದರ ಮಧ್ಯೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‍ಗೂ ಮೊದಲೇ ಕೋವಿಡ್‍ಗೆ ವ್ಯಾಕ್ಸಿನ್ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಗುಡ್ ಬನ್ಯೂಸ್ ನೀಡಿದ್ದಾರೆ.

ಅಧ್ಯಕ್ಷ ಚುನಾವಣೆಗಾಗಿ ಟ್ರಂಪ್ ಫಿಲಿಡೆಲ್ಫಿಯಾದಲ್ಲಿ ಮತದಾರರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮತದಾರರೊಬ್ಬರು ವಾಕ್ಸಿನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಮೂರು, ನಾಲ್ಕು ವಾರಗಳಲ್ಲಿ ವ್ಯಾಕ್ಸಿನ್ ಲಭ್ಯವಾಗುವ ಸಾಧ್ಯತೆ ಇದೆ ಎಂದು ಭರವಸೆ ನೀಡಿದ್ದಾರೆ.

ನಾವು ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳಲು ಅತಿ ಸಮೀಪಕ್ಕೆ ಬಂದಿದ್ದೇವೆ. ಮುಂಬರುವ ಕೆಲವೇ ವಾರಗಳಲ್ಲಿ ಜನ ಬಳಕೆಗೆ ಲಸಿಕೆ ಲಭ್ಯವಾಗಲಿದೆ. ಅದು ಮೂರು, ನಾಲ್ಕು ವಾರಗಳಲ್ಲಿ ಬರಬಹುದು. ಸರ್ಕಾರದಲ್ಲಿ ಬೇರೆಯವರು ಇದ್ದಿದ್ದರೆ ಲಸಿಕೆ ಬರಲು ಮತ್ತಷ್ಟು ವರ್ಷಗಳು ಬೇಕಾಗುವ ಸಾಧ್ಯತೆ ಇತ್ತು. ಆದರೆ ಎಫ್‍ಡಿಎಲ್ ಜತೆ ಮತ್ತಷ್ಟು ಅನುಮತಿಯೊಂದಿಗೆ ಅತಿ ವೇಗವಾಗಿ ವ್ಯಾಕ್ಸಿನ್‍ಅನ್ನು ತರುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This