ಬಾಲಿವುಡ್ ನ ಹಿರಿಯ ನಾಯಕಿ ರಾಣಿ ಮುಖರ್ಜಿ ಇತ್ತೀಚಿನ ವರ್ಷಗಳಲ್ಲಿ ಎಲ್ಲ ಚಿತ್ರಗಳನ್ನೂ ಒಪ್ಪದೆ ತಮಗೆ ಒಪ್ಪುವ ಕೆಲವೇ ಕೆಲವು ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಈ ಮಧ್ಯೆ ತಮ್ಮ ವೈಯಕ್ತಿಕ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಕಳೆದ 7 ವರ್ಷಗಳಿಂದ ಅವರು 2ನೇ ಮಗು ಪಡೆಯಲು ಯತ್ನಿಸುತ್ತಿದ್ದೇನೆ. ಅದು ಸಾಧ್ಯವಾಗಿಲ್ಲ. ಮೊದಲ ಮಗುವಿಗೆ ಒಡಹುಟ್ಟಿದವರು ಇಲ್ಲ ಎಂದು ಬೇಸರದಿಂದ ಹೇಳಿದ್ದಾರೆ.
2014ರಲ್ಲಿ ರಾಣಿ ಮುಖರ್ಜಿ, ನಿರ್ಮಾಪಕ ಆದಿತ್ಯ ಚೋಪ್ರಾರನ್ನು ಮದುವೆಯಾಗಿದ್ದರು. ಮರು ವರ್ಷವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ವೇಳೆ ಇನ್ನೊಂದು ಮಗು ಪಡೆಯಬೇಕು ಎಂಬ ಅವರ ಆಸೆ ಈಡೇರಲಿಲ್ಲ. ಎರಡನೇ ಮಗುವಿಗಾಗಿ ಕಳೆದ 7 ವರ್ಷಗಳಿಂದ ಪ್ರಯತ್ನ ನಡೆಸಲಾಗುತ್ತಿದೆ. ಆದರೆ, ಈ ಆಸೆ ಈಡೇರಿಲ್ಲ ಎಂದು ಹೇಳಿದ್ದಾರೆ. ಲಾಕ್ ಡೌನ್ ಗೂ ಮುನ್ನ ರಾಣಿ ಮುಖರ್ಜಿ ಎರಡನೇ ಸಲ ಗರ್ಭಿಣಿಯಾಗಿದ್ದರು. ಆದರೆ, ಆ ವೇಳೆ ಗರ್ಭಪಾತವಾಗಿತ್ತು.