ಪೆಟ್ರೋಲ್, ಡೀಸೆಲ್ ಕದಿಯುವುದಕ್ಕಾಗಿ ಇಲ್ಲೊಬ್ಬ ವ್ಯಕ್ತಿ ಸುರಂಗವನ್ನೇ ಕೊರೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಗುಜರಾತ್ ನ ದ್ವಾರಕದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಪೈಪ್ ಲೈನ್ ಒಂದರಿಂದ ಲಕ್ಷಾಂತರ ರೂ. ಬೆಲೆ ಬಾಳುವ ತೈಲವನ್ನು ಕಳತನ ಮಾಡಿದ್ದಾನೆ ಎನ್ನಲಾಗಿದೆ.
ದ್ವಾರಕಾದ ಪೋಚನ್ ಪುರ್ ಗ್ರಾಮದಲ್ಲಿ ಪೈಪ್ ಲೈನ್ ಒಂದರಿಂದ ಲಕ್ಷಗಟ್ಟಲೆಬೆಲೆ ಬಾಳುವ ತೈಲವನ್ನು ಕಳ್ಳತನ ಮಾಡಿರುವುದನ್ನು ಪತ್ತೆ ಹಚ್ಚಿದ್ದು, ಕೃತ್ಯ ಎಸಗಿದ್ದ ಕಾವಲುಗಾರ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯು 40 ಮೀಟರ್ ಸುರಂಗವನ್ನು ಕೊರೆದು ಅದರ ಮೂಲಕ ಜೂನ್ ನಿಂದತೈಲ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕಳುವಾದ ತೈಲದ ಪ್ರಮಾಣವನ್ನು ಕಂಪನಿಯು ಖಚಿತಪಡಿಸಿಲ್ಲ.
ಕಳ್ಳತನ ನಡೆದ ಸ್ಥಳದಿಂದ ಅಪರಾಧ ಎಸಗಲು ಬಳಸಿದ ಹಲವು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದ್ವಾರಕಾ ಉಪ ಪೊಲೀಸ್ ಆಯುಕ್ತ ಎಂ. ಹರ್ಷವರ್ಧನ್ ಹೇಳಿದ್ದಾರೆ. ಐಒಸಿಎಲ್ ಅಧಿಕಾರಿಯು ಈ ಪ್ರದೇಶದಲ್ಲಿ ತೈಲ ಕಳ್ಳತನವಾಗಿದೆ ಎಂದು ಹೇಳಿದ್ದಾರೆ. ನೆಲದಿಂದ ಸುಮಾರು 2 ಮೀಟರ್ ನಷ್ಟು ಆಳ ಗುಂಡಿ ತೆಗೆದು ಆರೋಪಿಯು 40 ರಿಂದ 45 ಮೀ. ಅಳತೆಯ ಸುರಂಗವನ್ನು ಕೊರೆದು ಅಂಡರ್ ಗ್ರೌಂಡ್ ನಲ್ಲಿದ ಪೈಪ್ ಲೈನ್ ನಿಂದ ತೈಲ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.