TV ಸ್ಪೋಟಗೊಂಡು 16 ವರ್ಷದ ಬಾಲಕ ಸಾವು….
ಎಲ್ಸಿಡಿ ಟಿವಿ ಸ್ಫೋಟಗೊಗೊಂಡು 16 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಗೋಡೆಗೆ ಅಳವಡಿಸಲಾದ ಎಲ್ಸಿಡಿ ಟಿವಿ ಸ್ಫೋಟದಿಂದಾಗಿ ಕೋಣೆಯಲ್ಲಿದ್ದ ಇತರ ಇಬ್ಬರು ಗಾಯಗೊಂಡಿದ್ದಾರೆ.
ಟಿವಿ ಸ್ಫೋಟ ದಿಂದಾಗಿ 16 ವರ್ಷದ ಬಾಲಕ ಓಮೇಂದ್ರ ಹರ್ಷ ವಿಹಾರ್ ಸಾವನ್ನಪ್ಪಿದ್ದಾನೆ. ಮೂವರನ್ನು ತಕ್ಷಣ ದೆಹಲಿಯ ಜಿಟಿಬಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ವೈದ್ಯರು ಓಮೇಂದ್ರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಇನ್ನುಳಿದ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಪೋಟದ ತೀವ್ರತೆ ಗೋಡೆಗೆ ಹಾನಿಯಾಗಿದೆ. ನೆರೆಮನೆಯವರು ಮೊದಲು ಸಿಲಿಂಡರ್ ಸ್ಪೋಟ ಎಂದು ಬಾವಿಸಿದ್ದರು. ಟಿವಿ ಗ್ಲಾಸ್ ಚೂರುಗಳು ಕಣ್ಣು ಕುತ್ತಿಗೆ ಮತ್ತು ಮುಖಕ್ಕೆ ಚುಚ್ಚಿಕೊಂಡಿವೆ. ಸದ್ಯ ಘಟನೆ ಕುರಿತು ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.
TV Explodes: Ghaziabad teen dies, two injured after LED TV at his house explodes