ಅಟ್ಲಾಂಟ: ಬೇರ್ಪಟ್ಟಿದ್ದ ಅವಳಿ ಸಹೋದರಿಯರು ಬರೋಬ್ಬರಿ 19 ವರ್ಷಗಳ ನಂತರ ಮತ್ತೆ ಒಂದಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಆದರೆ, ಇಬ್ಬರೂ ಸಹೋದರಿಯರು ಒಂದೇ ನಗರದಲ್ಲಿ ಇದ್ದರು ಎನ್ನಲಾಗಿದೆ. ಪೂರ್ವ ಯುರೋಪಿಯನ್ ದೇಶ ಜಾರ್ಜಿಯಾದಲ್ಲಿ (Georgia) ಈ ಘಟನೆ ನಡೆದಿದೆ.
ಆಮಿ ಖ್ವಿಟಿಯಾ ಮತ್ತು ಅನೋ ಸರ್ತಾನಿಯಾ ಹುಟ್ಟಿನಿಂದ ಬೇರ್ಪಟ್ಟಿದ್ದರು. 2002 ರಲ್ಲಿ ಆಮಿ ಮತ್ತು ಅನೋ ಎಂಬ ಅವಳಿ ಹೆಣ್ಣುಮಕ್ಕಳಿಗೆ ಜಾರ್ಜಿಯಾ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ತಾಯಿ ಆ ವೇಳೆ ಕೋಮಾಕ್ಕೆ ಜಾರಿದ್ದರು. ಇನ್ನೊಂದೆಡೆ ಪತಿ ಗೋಚಾ ಗಖಾರಿಯಾ ಅವಳಿ ಹೆಣ್ಣುಮಕ್ಕಳನ್ನು ಪ್ರತ್ಯೇಕ ಕುಟುಂಬಗಳಿಗೆ ಮಾರಾಟ ಮಾಡಿ ಬೇರ್ಪಡಿಸಿದ್ದ. ಅವರಿಬ್ಬರು ಬೇರೆ ಬೇರೆಯಾಗಿ ಒಂದೇ ನಗರದಲ್ಲಿ ವಾಸಿಸುತ್ತಿದ್ದರು.
ಅನೋಳನ್ನು ಟಿಬಿಲಿಸಿ ಎಂಬವರು ಪೋಷಣೆ ಮಾಡುತ್ತಿದ್ದರು. ಅವಳಿಗೆ ತನಗೆ ಸಹೋದರಿ ಇದ್ದಾಳೆ ಎಂಬ ವಿಚಾರವೂ ಗೊತ್ತಿರಲಿಲ್ಲ. ಒಂದು ದಿನ ಟಿವಿ ಶೋ ಆದ “ಜಾರ್ಜಿಯಾಸ್ ಗಾಟ್ ಟ್ಯಾಲೆಂಟ್” ವೀಕ್ಷಿಸುವಾಗ ಮಗಳ ಹೋಲಿಕೆ ಹೊಂದಿರುವ ಹುಡುಗಿಯೊಬ್ಬಳು ನೃತ್ಯ ಮಾಡುವುದನ್ನು ನೋಡಿದ್ದಾರೆ. ನಂತರ ಅವರು ವೈರಲ್ ಟಿಕ್‌ಟಾಕ್ ಮತ್ತು ಟ್ಯಾಲೆಂಟ್ ಶೋ ಮೂಲಕ ಪರಿಚಯವಾಗಿ, ಆನಂತರ ಒಂದಾಗಿದ್ದಾರೆ.