ಆಂಧ್ರ ಡಬಲ್ ಮರ್ಡರ್ ಕೇಸ್ : ಮಗಳ ಕೊಂದು ನಾಲಿಗೆ ತಿಂದಿದ್ದಳಂತೆ ತಾಯಿ..!
ಆಂಧ್ರಪ್ರದೇಶ : ಆಂಧ್ರಪ್ರದೇಶದಲ್ಲಿ ಸುಶಿಕ್ಷಿತ ಪ್ರೊಫೆಸರ್ ದಂಪತಿಗಳ ಅವಿವೇಕಿ ತನಕ್ಕೆ ಇಬ್ಬರು ಹೆಣ್ಮಕ್ಕಳು ಬಲಿಯಾದ ಪ್ರಕರಣಕ್ಕೆ ದಿನೇ ದಿನೇ ಹೊಸ ಟ್ವಿಸ್ಟ್ ಗಳು ಸಿಗುತ್ತಲೇ ಇವೆ. ಈಗ ಮತ್ತೊಂದು ಮೈನಡುಗಿಸುವ ಮಾಹಿತಿ ಹೊರಬಿದ್ದಿದೆ. ಹೌದು ಮೂರ್ಖ ತಾಯಿ ತನ್ನ ಮಗಳನ್ನ ಕೊಂದ ನಂತರ ಆಕೆಯ ನಾಲಿಯನ್ನೇ ಕಟ್ ಮಾಡಿ ತಿಂದಿದ್ದಾಳಂತೆ.
ಹೌದು ಆರೋಪಿ ತಾಯಿ ಪದ್ಮಜಾ ತನ್ನ್ನ ತಾನು ಕಾಳಿಕಾ ಎಂದು ತಿಳಿದು ಹಿರಿಯ ಮಗಳು ಅಲೇಖ್ಯಳನ್ನ ಕೊಲೆ ಮಾಡಿದ ಬಳಿಕ ಆಕೆಯ ನಾಲಿಗೆಯನ್ನು ಕೊಯ್ದು ತಿಂದಿದ್ದಾಳೆ ಅಂದು ಆಕೆಯ ಪತಿ ಪುರಷೋತ್ತಮ್ ನಾಯಡು ಪೊಲೀಸರು ಮುಂದೆ ಬಾಯ್ಬಿಟ್ಟಿದ್ದಾನೆ. ಆದ್ರೆ ಮರಣೋತ್ತರ ಪರೀಕ್ಷೆ ಬಳಿಕವೇ ಇದರ ಬಗ್ಗೆ ಸ್ಪಷ್ಟತೆ ತಿಳಿದು ಬರಲಿದೆ.
ತಾಯಿ ಶವವನ್ನು 10 ವರ್ಷ ಫ್ರೀಜರ್ನಲ್ಲಿಟ್ಟ ಮಹಿಳೆ …!
ಇನ್ನೂ ವಿಚಾರಣೆ ವೇಳೆ ಆರೋಪಿ ಪುರುಷೋತ್ತಮ ತಾನು ಪೂರ್ವ ಜನ್ಮದಲ್ಲಿ ಅರ್ಜುನನಾಗಿದ್ದೆ ಎಂದು ನನ್ನ ಮಗಳು ಅಲೇಖ್ಯ ಹೇಳಿದ್ದಳು ಎಂದು ಸಹ ತಿಳಿಸಿದ್ದಾನಂತೆ. ಕಾಲೇಜ್ನಲ್ಲಿ ಪಾಠ ಹೇಳುವುದು ನಿನ್ನ ಕೆಲಸವಲ್ಲ. ಪಾಂಡವರ ಪರವಾಗಿ ಅರ್ಜುನನು ತಾನು ಮುನ್ನಡೆಸಿದ ಹೋರಾಟದ ಮನೋಭಾವವನ್ನು ಮುಂದುವರಿಸಬೇಕು. ಅಲ್ದೇ ಕಲಿಯುಗ ಅಂತ್ಯಗೊಂಡು ಸತ್ಯಯುಗ ಬರುತ್ತೆ. ಕೊರೊನಾ ಸಹಾ ಇದೊಂದು ಸೂಚನೆ. ಈ ಮಾತುಗಳೆಲ್ಲವೂ ನಿಜವೇ. ನಾನು ಓದಿರುವ ಆಧ್ಯಾತ್ಮಿಕ ಪುಸ್ತಕದಲ್ಲಿ ಈ ವಿಷಯವಿದೆ ಎಂದು ಅಲೇಖ್ಯ ಹೇಳಿದ್ದಾಗಿ ವೈದ್ಯರ ಮುಂದೆ ಪುರುಷೋತ್ತಮ್ ಹೇಳಿಕೊಂಡಿದ್ದಾನೆ.
ಮಗುವಿಗೆ ಹಾಲು ಖರೀದಿಸಲು ಹಣ ಕೇಳಿದ್ದಕ್ಕೆ ಪತ್ನಿಗೆ ಫೋನ್ ನಲ್ಲೇ ತಲಾಖ್ ಕೊಟ್ಟ ನೀಚ..!
ಅಲ್ದೇ ಪುರುಷೋತ್ತಮ್ ಮತ್ತು ಪದ್ಮಜಾ ಇಬ್ಬರಲ್ಲೂ ಸಹ ಮಾನಸಿಕ ಅಸ್ವಸ್ಥತೆಯಿರುವ ಗುಣಗಳು ಕಂಡುಬಂದಿದೆ ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜೈಲಿನಂತೆ ವಾತಾವರಣ ಸೃಷ್ಟಿಸಿ ಚಿಕಿತ್ಸೆ ನೀಡಬೇಕು. ಹೀಗಾಗಿ ವಿಶಾಖದಲ್ಲಿರುವ ಸರ್ಕಾರಿ ಮಾನಸಿಕ ಚಿಕಿತ್ಸ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಇನ್ನೂ ಈ ಇಬ್ಬರನ್ನೂ ಮಾನಸಿಕ ಕೇಂದ್ರಕ್ಕೆ ಶಿಫ್ಟ್ ಮಾಡುವ ವೇಳೆ ಪದ್ಮಜ.. ನನ್ನ ಮಕ್ಕಳು ಹಿಂತಿರುಗಿ ಬರುತ್ತಿದ್ದಾರೆ. ಮನೆಗೆ ಹೋಗ್ಬೇಕು. ಜೈಲಿನಲ್ಲಿ ಜೊತೆಯಲ್ಲಿರುವ ಶಿವ ಮತ್ತು ಕೃಷ್ಣಯ್ಯ ಇಲ್ಲಿ ಕಾಣಿಸುತ್ತಿಲ್ಲ ಎಂದು ಹುಚ್ಚುಚ್ಚಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.
ನಾನು ಮುಗ್ಧೆ..`ಬಲಿ ಪಶು ಆಗಿದ್ದೇನೆ’ : ರಾಗಿಣಿ
ಹುಲಿ ಹಾಗೂ ಮರಿಯ ಪ್ರೀತಿಗೆ ನೀವೇನಂತೀರಾ… ವಿಡಿಯೋ ನೋಡಿ..!
ಟಾಲಿವುಡ್ ನಲ್ಲಿ ರಾಬರ್ಟ್ ಸಿನಿಮಾಗೆ ಅಡ್ಡಿ : ಸುದೀಪ್ ಹೇಳಿದ್ದೇನು..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel