Twitter Blue : ಇಂದಿನಿಂದ ಪ್ರೀಮಿಯಂ ಚಂದಾದಾರಿಕೆ ಸೇವೆ ಪ್ರಾರಂಭಿಸಿದ ಟ್ವೀಟರ್….
ಸೋಶೀಯಲ್ ಮೀಡಿಯಾ ಪ್ಲಾಟ್ ಪ್ಲಾರ್ಮ್ ಟ್ವೀಟರ್ ಅಂತಿಮವಾಗಿ ಭಾರತದಲ್ಲಿ ತನ್ನ ಪ್ರೀಮಿಯಂ ಚಂದಾದಾರಿಕೆ ಸೇವೆ ಟ್ವಿಟರ್ ಬ್ಲೂ ಸೇವೆಯನ್ನ ಪ್ರಾರಂಭಿಸಿದೆ. ಇಂದಿನಿಂದ ಟ್ವೀಟರ್ ನಲ್ಲಿ ಬ್ಲೂ ಟಿಕ್ ಮತ್ತು ಹಲವು ವೈಶಿಷ್ಟ್ಯಗಳನ್ನ ಪಡೆಯಲು 900 ರುಪಾಯಿಗಳನ್ನ ಪಾವತಿಸಬೇಕಾಗುತ್ತದೆ.
ಅದೇ ಸಮಯದಲ್ಲಿ, ಕಂಪನಿ 650 ರೂಗಳಿಗೆ ಕಡಿಮೆ ಬೆಲೆಯ ಪ್ರೀಮಿಯಂ ಚಂದಾದಾರಿಕೆ ಯೋಜನೆಯನ್ನೂ ಬಿಡುಗಡೆ ಮಾಡಿದೆ. ಆದರೇ ಈ ಯೋಜನೆ ಕೇವಲ ವೆಬ್ ಬಳಕೆದಾರರಿಗೆ ಮಾತ್ರವೇ ಲಭ್ಯವಿರಲಿದೆ. ಕಂಪನಿಯು ಕಳೆದ ವರ್ಷವೇ ಟ್ವಿಟರ್ ಬ್ಲೂ ಟಿಕ್ ನ್ನ ಯುಎಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಪ್ರಾರಂಭಿಸಿತ್ತು. ಇದೀಗ ಭಾರತದಲ್ಲಿಯೂ ಪ್ರಾರಂಭಿಸಲಾಗಿದೆ.
ಕಂಪನಿಯ ಪ್ರಕಾರ, ಮೊಬೈಲ್ ಅಂದರೆ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಟ್ವಿಟರ್ ಬ್ಲೂಗೆ ತಿಂಗಳಿಗೆ ರೂ 900 ಪಾವತಿಸಬೇಕಾಗುತ್ತದೆ ಮತ್ತು ವೆಬ್ ಬಳಕೆದಾರರು ತಿಂಗಳಿಗೆ ರೂ 650 ಪಾವತಿಸಬೇಕಾಗುತ್ತದೆ. ಎಲೋನ್ ಮಸ್ಕ್ ಟ್ವೀಟರ್ ಖರೀದಿಸಿದ ನಂತರದಿಂದ ಪಾವತಿಸಿದ ಚಂದಾದಾರಿಕೆ ತರುವುದಾಗಿ ಘೋಷಿಸಿದ್ದರು.
900 ರುಪಾಯಿ ಕೊಟ್ಟು ಚಂದಾದಾರಿಕೆ ತೆಗೆದುಕೊಳ್ಳುವವರಿಗೆ ಎಡಿಟ್ ಟ್ವೀಟ್ ಬಟನ್, 1080p ವೀಡಿಯೊ ಅಪ್ಲೋಡ್, ರೀಡರ್ ಮೋಡ್ ಮತ್ತು ಬ್ಲೂ ಟಿಕ್ ಸೌಲಭ್ಯದಂತಹ ಫೀಚರ್ಸ್ ಗಳನ್ನ ಟ್ವೀಟರ್ ನೀಡಲಿದೆ.
ಟ್ವೀಟರ್ ಬಳಕೆದಾರರಿಗಾಗಿ ವಾರ್ಷಿಕ ಯೋಜನೆಯನ್ನ ಸಹ ಬಿಡುಗಡೆ ಮಾಡಿದೆ. ಟ್ವಿಟರ್ ಬ್ಲೂ ಚಂದಾದಾರಿಕೆಯ ವಾರ್ಷಿಕ ಬೆಲೆಯನ್ನು $ 84 (ಸುಮಾರು ರೂ 6,800) ಗೆ ನಿಗದಿಪಡಿಸಲಾಗಿದೆ.
Twitter Blue Paid Subscription Service Launches In India Start At Rs 650 Know Price And Plan