‘RSS ಜೊತೆಗೆ ಸಂಪರ್ಕವುಳ್ಳ 3 ಸೇವಾ ಸಂಸ್ಥೆಗಳಿಗೆ 110 ಕೋಟಿ ರೂ. ನೆರವು ನೀಡಿದ ಟ್ವಿಟರ್ CEO’,
ನವದೆಹಲಿ: ಮೂರು ಸೇವಾ ಸಂಸ್ಥೆಗಳಿಗೆ ಟ್ವಿಟರ್ CEO ಜಾಕ್ ಡೊರ್ಸೆ ಅವರು 110 ಕೋಟಿ ರೂಪಾಯಿಯ ನೆರವು ನೀಡಿದ್ದಾರೆ. RSS ಜೊತೆಗೆ ಸಂಪರ್ಕವುಳ್ಳ ಸಂಘಟನೆ ಸೇರಿದಂತೆ ಮೂರು ಸೇವಾ ಸಂಸ್ಥೆಗಳಿಗೆ ಕೋವಿಡ್ ಪರಿಹಾರ ಕಾರ್ಯಗಳಿಗೆ ಬಳಸಲು ಕೊಡುಗೆ ನೀಡಿದ್ದಾರೆ.
‘ಕೇರ್, ಏಡ್ ಇಂಡಿಯಾ ಮತ್ತು ಸೇವಾಯುಎಸ್‌ಎ ಸಂಸ್ಥೆಗಳಿಗೆ ಒಟ್ಟಾಗಿ 110 ಕೋಟಿ ರೂಪಾಯಿ ದೇಣಂಇಗೆ ನೀಡಲಾಗುವುದು ಎಂದು ಡೊರ್ಸೆ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಸೇವಾ ಸಂಸ್ಥೆಗೆ ನೀಡಿದ ನೆರವನ್ನು ಭಾರತದಲ್ಲಿ ಕೋವಿಡ್ ಸ್ಥಿತಿ ಎದುರಿಸಲು ಆಮ್ಲಜನಕ ಕಾನ್ಸನ್‌ಟ್ರೇಟರ್ಸ್, ವೆಂಟಿಲೇಟರ್‌ಗಳು, ಬೈಪ್ಯಾಪ್, ಸಿಪ್ಯಾಪ್ ಖರೀದಿಸಲು ಬಳಕೆ ಮಾಡಲಾಗುವುದು ಎಂದು ಹೇಳಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.