Twitter down: ಟ್ವಿಟರ್ ಮತ್ತೊಮ್ಮೆ ಡೌನ್ ; ಸ್ವಂ ಚಾಲಿತವಾಗಿ ಲಾಗೌಟ್..
ಟ್ವೀಟರ್ ಬಳಕೆದಾರರಿಗೆ ಮತ್ತೊಮ್ಮೆ ಶಾಕ್ ಉಂಟಾಗಿದೆ. ಬುಧವಾರ ಸಂಜೆಯಿಂದ ಟ್ವೀಟರ್ ನ್ನ ಎಷ್ಟು ಭಾರಿ ರೀಫ್ರಶ್ ಮಾಡಿದರೂ ಎರರ್ ಮೆಸೆಜ್ ತೋರಿಸುತ್ತಿದೆ. ಟ್ವೀಟರ್ ಮತ್ತೊಮ್ಮೆ ಡೌನ್ ಆಗಿದ್ದು ಗುರುವಾರ ಮುಂಜಾನೆ ವೇಳೆಗೆ ಮತ್ತೆ ಸಂಪರ್ಕಕ್ಕೆ ಸಿಕ್ಕಿದೆ.
10 ಸಾವಿರಕ್ಕೂ ಹೆಚ್ಚು ಬಳಕೆದಾರರೂ ಟ್ವೀಟರ್ ಸ್ವಂ ಚಾಲಿತವಾಗಿ ಲಾಗೌಟ್ ಆಗುತ್ತಿದೆ ಎಂದು ರಿಪೋರ್ಟ್ ಮಾಡಿದ್ದಾರೆ. ಇನ್ನೂ ಕೆಲವರು ಟ್ವೀಟರ್ ನೋಟಿಫಿಕೆಶನ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ.
ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರದಿಂದ ಟ್ವೀಟರ್ ಮೂರನೇ ಭಾರಿ ಡೌನ್ ಆಗುತ್ತಿದೆ. ಟ್ವೀಟರ್ ನಲ್ಲಿ ಕೆಲವು ಬಳಕೆದಾರರಿ ರೇಟ್ ಎಕ್ಸೀಡಿಂಗ್ ಲಿಮಿಟ್ ಎಂಬ ನೋಟಿಫೀಕೇಷನ್ ತೋರಿಸುತ್ತಿದ್ದು ಅದರ ಸರ್ವರ್ ಗಳಿಂದ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಸೂಚಿಸುತ್ತಿದೆ. ಟ್ವೀಟರ್ ಡೌನ್ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.
Twitter down: Twitter is down again ; Automatically logout..