ಯೋಗಿ ಆದಿತ್ಯನಾಥ್ ಕಛೇರಿಯ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್
ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಶುಕ್ರವಾರ ತಡರಾತ್ರಿ ಹ್ಯಾಕ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹ್ಯಾಕರ್ಗಳು ಖಾತೆಯನ್ನ ಹ್ಯಾಕ್ ಮಾಡಿ 400-500 ಟ್ವೀಟ್ಗಳನ್ನು ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
“ರಾತ್ರಿ ಸುಮಾರು 29 ನಿಮಿಷಗಳ ಕಾಲ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್ಗಳು ಸುಮಾರು 400-500 ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅಸ್ವಾಭಾವಿಕ ಚಟುವಟಿಕೆಯ ಆಧಾರದ ಮೇಲೆ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಅದನ್ನು ಮರುಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಅಧಿಕಾರಿ ಶನಿವಾರ ಪಿಟಿಐಗೆ ತಿಳಿಸಿದ್ದಾರೆ.
ಶೀಘ್ರದಲ್ಲೇ ಟ್ವಿಟರ್ ಹ್ಯಾಂಡಲ್ ಅನ್ನು ಮರುಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. @CMOffice ಎಂಬ ಟ್ವಿಟರ್ ಹ್ಯಾಂಡಲ್ ನ್ನ 40 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಟ್ವೀಟರ್ ಹ್ಯಾಂಡಲ್ನ ಪ್ರೊಫೈಲ್ ಖಾತೆಯ ಚಿತ್ರವನ್ನು ಕಾರ್ಟೂನ್ ಗೆ ಬದಲಾಯಿಸಲಾಗಿತ್ತು.
Twitter handle of Yogi Adityanath’s office hacked for nearly 30 minutes